image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರು ಹಾಗೂ ಸುತ್ತಮುತ್ತಲಿನ ಆಸ್ತಿದಾರರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾ‌ರ್ ಭರ್ಜರಿ ಸಿಹಿಸುದ್ದಿ

ಬೆಂಗಳೂರು ಹಾಗೂ ಸುತ್ತಮುತ್ತಲಿನ ಆಸ್ತಿದಾರರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾ‌ರ್ ಭರ್ಜರಿ ಸಿಹಿಸುದ್ದಿ

ಬೆಂಗಳೂರು : ಬೆಂಗಳೂರು ಹಾಗೂ ಸುತ್ತಮುತ್ತಲಿನ ಆಸ್ತಿದಾರರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾ‌ರ್ ಅವರು ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಈಗಾಗಲೇ ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು, ಆಸ್ತಿ ಖರೀದಿದಾರರು ಭೂಮಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಂತವರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಬೆಂಗಳೂರಿಗೆ ಸಮೀಪದಲ್ಲೇ ಇರುವ ಈ ಪ್ರದೇಶದಲ್ಲಿ ಭೂಮಿ ಬೆಲೆ ಗಗನಕ್ಕೇರಲಿದ್ದು, ಸದ್ಯದಲ್ಲೇ ಇದು ಬೆಂಗಳೂರಿನ ಆಸ್ತಿಯಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾ‌ರ್ ಸುಳಿವು ನೀಡಿದ್ದಾರೆ. ಡಿಸಿಎಂ ಈ ಬಗ್ಗೆ ಮಾತನಾಡಿ ಶರತ್ ಬಚ್ಚೇಗೌಡರು, ಮುನಿಯಪ್ಪನವರು, ಶ್ರೀನಿವಾಸ್‌ ಅವರನ್ನು ಬೆಂಗಳೂರು ಗ್ರಾಮಾಂತರದ ಜನರು ಗೆಲ್ಲಿಸಿ ನಮಗೆ ಶಕ್ತಿ ತುಂಬಿದ್ದಾರೆ. ಉಪಚುನಾವಣೆಯಲ್ಲಿ ಮೂರು ಜನರನ್ನು ಗೆಲ್ಲಿಸಿ 140 ಶಾಸಕರ ಬಲವನ್ನು ನಮಗೆ ನೀಡಿರುವ ನಿಮ್ಮ ಸೇವೆಗೆ ನಾವು ಸನ್ನದ್ದ. ಉಪಚುನಾವಣೆಯಲ್ಲಿ ಹಳೇ ಗಿರಾಕಿಗಳು ಬೇಡ ಎಂದು ಬದಲಾವಣೆಗೆ ನಾಂದಿ ಹಾಡಿದವರು ಕರ್ನಾಟಕದ ಜನರು ಎಂದು ಹೇಳಿದ್ದಾರೆ.

ಹೊಸಕೋಟೆ ತಾಲ್ಲೂಕಿನ ಜನರನ್ನುದ್ದೇಶಿಸಿ ಮಾತನಾಡಿದ ಅವರು ಈ ಭಾಗದ ಆಸ್ತಿಗಳೆಲ್ಲ ಮುಂದಿನ ದಿನಗಳಲ್ಲಿ ಬೆಂಗಳೂರಿನ ಆಸ್ತಿಗಳಾಗುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಈ ಭಾಗದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದೇವೆ. ನಿಮ್ಮ ಊರಿನ ಅಳಿಯನನ್ನೇ ಎಂಡಿಯನ್ನಾಗಿ ನೇಮಕ ಮಾಡಿದ್ದೇವೆ. ಅವರ ಬಳಿ ಪೇಪರ್ ಇದೆ, ನನ್ನ ಬಳಿ ಪೆನ್ನಿದೆ ಎಂದಿದ್ದಾರೆ. ಹೊಸಕೋಟೆ ಭಾಗಕ್ಕೆ ಮೆಟ್ರೋ ಮಾರ್ಗ ತರಲು ಈಗಾಗಲೇ ಡಿಪಿಆರ್ ಮಾಡಲು ತೀರ್ಮಾನ ಮಾಡಿದ್ದೇವೆ. ನಮ್ಮ ಅವಧಿಯೊಳಗೆ ಮೆಟ್ರೋ ಮಂಜೂರು ಕೆಲಸ ಮಾಡುತ್ತೇನೆ ಎಂದೂ ಡಿಸಿಎಂ ಡಿಕೆ ಶಿವಕುಮಾ‌ರ್ ಭರವಸೆ ನೀಡಿದ್ದಾರೆ. ಈ ಭಾಗಕ್ಕೆ 2027ರೊಳಗೆ ಎತ್ತಿನಹೊಳೆ ನೀರು ನೀಡಬೇಕು ಎಂದು ನಾವು ಶಪಥ ಮಾಡಿದ್ದೇವೆ. ಬೆಂಗಳೂರು ಉತ್ತರ ಭಾಗಕ್ಕೆ ನೀರು ಹರಿಸುವ ಕೆಲಸ ನಾವು ಮಾಡಲು ಸಿದ್ಧ. ಇಲ್ಲಿನ ಅಂತರ್ಜಲ ಹೆಚ್ಚಳ ಮಾಡಿ ಜನರಿಗೆ ಕುಡಿಯುವ ನೀರು ಒದಗಿಸಬೇಕು ಎಂಬುದು ನಮ್ಮ ಕನಸು. ಈ ಕೆಲಸವನ್ನು ಬಿಜೆಪಿಯವರು, ಬೊಮ್ಮಾಯಿ, ಯಡಿಯೂರಪ್ಪ ಅವರು ಮಾಡಿದ್ದರೇ? ಇದೆಲ್ಲವೂ ಮೋದಿ ಅವರ ಕಾಲದಲ್ಲಿ ಆಗಿತ್ತೇ? ಇದೆಲ್ಲವೂ ಕಾಂಗ್ರೆಸ್ ಕೊಡುಗೆ ಎಂದಿದ್ದಾರೆ.

ಉಪಕಾರ ಎನ್ನುವುದು ಪುಸ್ತಕದಲ್ಲಿ ಇರುವುದಿಲ್ಲ, ಮಾಡುವ ಮನಸ್ಸಿನಲ್ಲಿರುತ್ತದೆ. ಈ ಭಾಗದ ಒಬ್ಬ ಆಪರೇಷನ್‌ ಕಮಲದ ಮೂಲಕ ಬಿಜೆಪಿಗೆ ಹೋದ. ಹೋದವನನ್ನು ಎಂಎಲ್‌ಸಿ ಮಾಡಿದರು. ಆದರೆ ಒಂದೇ ಒಂದು ದಿನ ಜನರ ಕಷ್ಟ ಸುಖ ಕೇಳುತ್ತಿಲ್ಲ. ಇವತ್ತು ವೇದಿಕೆಗೆ ಬಂದು ನಮ್ಮ ತಪ್ಪು ಒಪ್ಪುಗಳನ್ನು ಹೇಳಬೇಕಿತ್ತು. ಆದರೆ ಆತನಿಗೆ ಧಮ್ ಇಲ್ಲ, ಶಕ್ತಿ, ಧೈರ್ಯವಿಲ್ಲ ಎಂದು ಸ್ಥಳೀಯ ಬಿಜೆಪಿ ನಾಯಕರನ್ನು ಲೇವಡಿ ಮಾಡಿದ್ದಾರೆ. ಹುಟ್ಟಿದಾಗ ಭೂಮಿ ಮೇಲಿರುತ್ತೇವೆ. ಸತ್ತಾಗ ಭೂಮಿ ಕೆಳಗಿರುತ್ತೇವೆ. ಆದರೆ ಸಾಧನೆಗಳು ನಮ್ಮ ಮೇಲಿರುತ್ತವೆ. ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ಸಿದ್ದರಾಮಯ್ಯ ಅವರನ್ನು ಅವರ ಕೆಲಸಗಳಿಗಾಗಿ ನೆನಪಿಸಿಕೊಳ್ಳುತ್ತೇವೆ. 19 ಸಾವಿರ ಕೋಟಿಯಷ್ಟು ಸಬ್ಸಿಡಿಯನ್ನು ರೈತರ ಪಂಪ್‌ಸೆಟ್‌ ವಿದ್ಯುತ್‌ಗೆ ನೀಡುತ್ತಿದ್ದೇವೆ. ಸಮಾಜ ಹಾಗೂ ಜನರ ಕಲ್ಯಾಣಕ್ಕೆಂದೇ 1 ಲಕ್ಷ ಕೋಟಿ ಹಣವನ್ನು ನೀಡುತ್ತಿದ್ದೇವೆ. ಕೃಷ್ಣ ಬೈರೇಗೌಡರು, ಪ್ರಿಯಾಂಕ್ ಖರ್ಗೆ ಅವರು ಹಟ್ಟಿ, ತಾಂಡದಲ್ಲಿನ ಜನರ ಕಷ್ಟಗಳನ್ನು ಅರ್ಥ ಮಾಡಿಕೊಂಡು, ಒಂದು ಕೋಟಿಗೂ ಹೆಚ್ಚು ಜನರಿಗೆ ಪಟ್ಟಾ ಖಾತೆ ನೀಡಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಬಿ ಖಾತೆಗಳನ್ನು ಎ ಖಾತೆಗಳನ್ನಾಗಿ ಬದಲಾವಣೆ ಮಾಡಲು ಕ್ರಮ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

Category
ಕರಾವಳಿ ತರಂಗಿಣಿ