image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನಿರ್ದಿಷ್ಟ ಸಮುದಾಯ ವೃತ್ತಿಯನ್ನು ತಿರಸ್ಕರಿಸಿದ ಬಳಿಕವೂ ಮುಂದುವರೆಸುವಂತೆ ಒತ್ತಾಯಿಸುವುದಕ್ಕೆ ಅವಕಾಶವಿಲ್ಲ

ನಿರ್ದಿಷ್ಟ ಸಮುದಾಯ ವೃತ್ತಿಯನ್ನು ತಿರಸ್ಕರಿಸಿದ ಬಳಿಕವೂ ಮುಂದುವರೆಸುವಂತೆ ಒತ್ತಾಯಿಸುವುದಕ್ಕೆ ಅವಕಾಶವಿಲ್ಲ

ಬೆಂಗಳೂರು: ಒಂದು ನಿರ್ದಿಷ್ಟ ಸಮುದಾಯ ಸಾಂಪ್ರದಾಯಿಕವಾಗಿ ಅನುಸರಿಸಿಕೊಂಡು ಬಂದಿರುವ ವೃತ್ತಿಯನ್ನು ತಿರಸ್ಕರಿಸಿದ ಬಳಿಕವೂ ಅದೇ ವೃತ್ತಿಯನ್ನು ಮುಂದುವರೆಸುವಂತೆ ಒತ್ತಾಯಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಹಲಗೆ(ತಮಟೆ) ಹೊಡೆಯುವ ವೃತ್ತಿ ತಿರಸ್ಕರಿಸಿದ ಬಳಿಕವೂ ಅದೇ ವೃತ್ತಿ ಮುಂದುವರೆಸುವಂತೆ ಒತ್ತಾಯಿಸಿದ್ದ ಕ್ರಮ ಪ್ರಶ್ನಿಸಿ ಮಾದಿಗ ದಂಡೋರ ಸಮುದಾಯದವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವವರಿಗೆ ಸೂಕ್ತ ರಕ್ಷಣೆ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಪೀಠ ಹೇಳಿದೆ. ಒಬ್ಬ ಮನುಷ್ಯ ಮತ್ತೊಬ್ಬರನ್ನು ಮನುಷ್ಯರಂತೆ ಹಾಗೂ ಭಾರತೀಯ ಎಂಬುದಾಗಿ ಗುರುತಿಸುವುದರಲ್ಲಿ ದೇಶದ ಉದ್ಧಾರವಿದೆ. ಅದನ್ನು ಹೊರತುಪಡಿಸಿ ಇತರರಂತೆ ಗುರುತಿಸುವುದು ದ್ವಿತೀಯ ವ್ಯಕ್ತಿಯನ್ನಾಗಿ ನೋಡಿದಂತಾಗುತ್ತದೆ. ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ಸಾಮರಸ್ಯದಿಂದ ಆಚರಿಸುತ್ತಿರುವ ಮುಸ್ಲಿಂ ಹಬ್ಬ ಹಿಂದೂಗಳಲ್ಲಿ ಮೇಲ್ಜಾತಿ, ದಲಿತರ ನಡುವಿನ ಕೋಮು ಸಂಘರ್ಷಕ್ಕೆ ಕಾರಣವಾಗಿರುವುದು ದುರುದೃಷ್ಟಕರ ಸಂಗತಿ ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.

ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಸಮುದಾಯದ ಹಬ್ಬಗಳಲ್ಲಿ ಭಾಗವಹಿಸುವ ಮೂಲಕ ಕೋಮ ಸಾಮರಸ್ಯ ಕಾಪಾಡುತ್ತಿದೆ. ಶರಣ ಬಸವೇಶ್ವರ ದೇವಸ್ಥಾನ, ಖಾಜಾ ಬಂದನನವಾಜ್‌ ದರ್ಗಾದಂತ ಸಂಸ್ಥೆಗಳು ಕೋಮ ಸಾಮರಸ್ಯದ ಉದಾಹರಣೆಗಳಾಗಿದ್ದು, ಇದನ್ನು ಇಡೀ ದೇಶ ಅನುಸುವಂತಾಗಬೇಕು ಎಂದಿದೆ. ಅರ್ಜಿದಾರರ ಮನವಿಯ ಸಂಬಂಧ ಈ ರೀತಿಯ ಸಮಾರಂಭಗಳಲ್ಲಿ ಭಾಗವಹಿಸುವ ಎಲ್ಲ ವರ್ಗದವರನ್ನು ವಿಚಾರಣೆ ನಡೆಸಿ ಕಾನೂನಿನ ಪ್ರಕಾರ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಪೀಠ ಸರ್ಕಾರಕ್ಕೆ ಸೂಚನೆ ನೀಡಿತು.

Category
ಕರಾವಳಿ ತರಂಗಿಣಿ