image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಭದ್ರಾ ಬಲದಂಡೆ ಕಾಲುವೆ ಕಾಮಗಾರಿ ವಿರೋಧಿಸಿ ಭಾರತೀಯ ರೈತ ಒಕ್ಕೂಟ ಹಾಗೂ ಬಿಜೆಪಿ ಮುಖಂಡರಿಂದ ಇಂದು ದಾವಣಗೆರೆ ಬಂದ್

ಭದ್ರಾ ಬಲದಂಡೆ ಕಾಲುವೆ ಕಾಮಗಾರಿ ವಿರೋಧಿಸಿ ಭಾರತೀಯ ರೈತ ಒಕ್ಕೂಟ ಹಾಗೂ ಬಿಜೆಪಿ ಮುಖಂಡರಿಂದ ಇಂದು ದಾವಣಗೆರೆ ಬಂದ್

ದಾವಣಗೆರೆ: ಭದ್ರಾ ಬಲದಂಡೆ ಕಾಲುವೆಯನ್ನು ಸೀಳಿ ಹೊಸದುರ್ಗ, ಕಡೂರು, ಅಜ್ಜಪುರ, ತರೀಕೆರೆ ತಾಲೂಕಿನ 1,200 ಹಳ್ಳಿಗಳಿಗೆ ನೀರು ಹರಿಸಲು ನಡೆದಿರುವ ಕಾಮಗಾರಿ ವಿರೋಧಿಸಿ ಭಾರತೀಯ ರೈತ ಒಕ್ಕೂಟ ಹಾಗೂ ಬಿಜೆಪಿ ಮುಖಂಡರು ಇಂದು ದಾವಣಗೆರೆ ಬಂದ್​​​ ಕರೆ ನೀಡಿದ್ದಾರೆ. ಆದರೆ ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಭಾರತೀಯ ರೈತ ಒಕ್ಕೂಟ ಹಾಗೂ ಎಂ.ಪಿ.ರೇಣುಕಾಚಾರ್ಯ, ಮಾಡಾಳ್​ ಮಲ್ಲಿಕಾರ್ಜುನ ಹಾಗೂ ಇತರರು ದಾವಣಗೆರೆ ನಗರದಾದ್ಯಂತ ಸಂಚರಿಸಿ ಅಂಗಡಿಗಳನ್ನು ಬಂದ್​ ಮಾಡಿಸಿದರು. ಎಂದಿನಂತೆ ಸಂಚರಿಸುತ್ತಿರುವ ಬಸ್​, ಆಟೋ ಸ್ಥಗಿತಗೊಳಿಸುವಂತೆ ಅವರು ಮನವಿ ಮಾಡಿದರು. ನಮ್ಮ ನೀರು, ನಮ್ಮ ಹಕ್ಕು ಎಂಬ ಧ್ಯೇಯ ವಾಕ್ಯದೊಂದಿಗೆ ನೀರಿಗಾಗಿ ಹೋರಾಟ ನಡೆಸುತ್ತಿದ್ದೇವೆ, ಬಂದ್​ಗೆ ಬೆಂಬಲ ನೀಡಿ ಎಂದು ಕೋರಿದರು. ಜೊತೆಗೆ, ನಗರದ ವಿದ್ಯಾ ಸರ್ಕಲ್​, ವಿದ್ಯಾರ್ಥಿಭವನ, ಲಕ್ಷ್ಮಿ ಫ್ಲೋರ್​ ಮಿಲ್​ ವೃತ್ತ ಸೇರಿದಂತೆ ವಿವಿಧೆಡೆ ಪ್ರತಿಭಟನಾಕಾರರು ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ ನಗರದಲ್ಲಿ ಬಂದ್​​ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿಲ್ಲ. ಎಂದಿನಂತೆ ಬಸ್, ಆಟೋ ಹಾಗೂ ಇತರ ವಾಹನಗಳ ಸಂಚಾರ ಸಾಗಿದೆ. ಅಂಗಡಿ, ಹೋಟೆಲ್​ಗಳನ್ನು ತೆರೆಯಲಾಗಿದ್ದು, ಹೂವಿನ ಮಾರುಕಟ್ಟೆ, ‌ಎಪಿಎಂಸಿ ಕೂಡ ಆರಂಭವಾಗಿದೆ. ನಗರದ ಜಯದೇವ ವೃತ್ತ, ಹಳೇ ಪಿಬಿ ರಸ್ತೆ, ಅಂಬೇಡ್ಕರ್ ಸರ್ಕಲ್, ವಿದ್ಯಾರ್ಥಿ ಭವನ ಸರ್ಕಲ್, ಕೆಎಸ್ಆರ್​ಟಿಸಿ ಬಸ್ ನಿಲ್ದಾಣ ಇನ್ನಿತರ ಕಡೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್​ ಬಂದೋಬಸ್ತ್ ಮಾಡಲಾಗಿದೆ. ಸದ್ಯ ದಾವಣಗೆರೆ ಹೃದಯಭಾಗ ಜಯದೇವ ವೃತ್ತಕ್ಕೆ ಮಾತ್ರ ಬಂದ್ ಸೀಮಿತವಾದಂತಿದೆ.

Category
ಕರಾವಳಿ ತರಂಗಿಣಿ