image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕರ್ನಾಟಕ ವಿದ್ಯುತ್ ಕಾಯಿದೆ ತಿದ್ದುಪಡಿ ಅಸಿಂಧು : ಹೈಕೋರ್ಟ್ ಘೋಷಣೆ

ಕರ್ನಾಟಕ ವಿದ್ಯುತ್ ಕಾಯಿದೆ ತಿದ್ದುಪಡಿ ಅಸಿಂಧು : ಹೈಕೋರ್ಟ್ ಘೋಷಣೆ

ಬೆಂಗಳೂರು: ವಿದ್ಯುತ್ ಪೂರೈಕೆ ಮೇಲೆ ತೆರಿಗೆ ವಿಧಿಸುವ ಕರ್ನಾಟಕ ವಿದ್ಯುತ್ (ಬಳಕೆಯ ಮೇಲಿನ ತೆರಿಗೆ) ಕಾಯಿದೆ 1959ರ ಸೆಕ್ಷನ್ 3(1)ಕ್ಕೆ ತಿದ್ದಪಡಿ ಮಾಡಿದ್ದ ರಾಜ್ಯ ಸರ್ಕಾರದ ಕ್ರಮ ಅಸಾಂವಿಧಾನಿಕ ಎಂದು ಹೈಕೋರ್ಟ್ ಘೋಷಿಸಿದೆ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್​ಕೆೆಸಿಸಿಐ) ಹಾಗೂ ಮೆಸಸ್ ಸೋನಾ ಸಿಂಥೆಟೆಕ್ ಕಂಪೆನಿ ಸೇರಿದಂತೆ ವಿವಿಧ ಕಂಪೆನಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಸಂವಿಧಾನ ಏಳನೇ ಷಡ್ಯೂಲ್ಡ್​​ನಲ್ಲಿರುವ ವಿದ್ಯುತ್ ಮೇಲೆ ರಾಜ್ಯ ಸರ್ಕಾರ ಬಳಕೆ ಮತ್ತು ಮಾರಾಟದ ಮೇಲೆ ತೆರಿಗೆ ವಿಧಿಸುವ ಅಧಿಕಾರ ಸೀಮಿತವಾಗಿದೆ ಎಂದು ಸ್ಪಷ್ಟಪಡಿಸಿದೆ.

ವಿದ್ಯುತ್ ನಿರಂತರವಾಗಿ ಪೂರೈಕೆ ಮಾಡುವುದರ ಶುಲ್ಕಕ್ಕೆ ತೆರಿಗೆ ವಿಧಿಸಿದರೆ ಅದು ಮಾರಾಟವಾಗದ ಮತ್ತು ಮಾರಾಟ ಮಾಡಿಕೊಳ್ಳಲು ಒಪ್ಪಿಕೊಂಡಿರುವ ವಿದ್ಯುತ್ ಮೇಲಿನ ಶುಲ್ಕಕ್ಕೆ ತೆರಿಗೆ ವಿಧಿಸಿದಂತಾಗಲಿದೆ. ವಿದ್ಯುತ್ ಪೂರೈಕೆ ಎಂದರೆ ಅದು ವಿದ್ಯುತ್ ಮಾರಾಟ ಎಂದು ಅರ್ಥವಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ರಾಜ್ಯ ಸರ್ಕಾರಕ್ಕೆ ವಿದ್ಯುತ್ ಬಳಕೆ ಅಥವಾ ಮಾರಾಟದ ಮೇಲೆ ಮಾತ್ರ ತೆರಿಗೆ ವಿಧಿಸಲು ಅಧಿಕಾರವಿರಲಿದೆ. ಆದರೆ, ಪೂರೈಕೆಯ ಮೇಲೆ ತೆರಿಗೆ ವಿಧಿಸುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಕರ್ನಾಟಕ ವಿದ್ಯುತ್ (ಬಳಕೆಗೆ ಆಧಾರದಲ್ಲಿ ತೆರಿಗೆ) ಕಾಯಿದೆ 1959ರ ಸೆಕ್ಷನ್ 3(1)ಗೆ ತಂದಿರುವ 2003ರ ತಿದ್ದುಪಡಿ 7 ಮತ್ತು 2004ರ ತಿದ್ದುಪಡಿ 5 ಅನ್ನು ರಾಜ್ಯ ಸರ್ಕಾರ ಮಾಡಿದೆ. ಇದರಿಂದ ವಿದ್ಯುತ್ ಪೂರೈಕೆ ಶುಲ್ಕಕ್ಕೆ ತೆರಿಗೆ ವಿಧಿಸಲಾಗಿದೆ. ಈ ತೆರಿಗೆ ಕನಿಷ್ಠ ಸುಂಕವೂ ಸೇರಿ ವಿದ್ಯುತ್ ಶುಲ್ಕದ ಮೇಲಿನ ತೆರಿಗೆಯಾಗಿದ್ದು, ಅದನ್ನು ಈಗಾಗಲೇ ಪಾವತಿಸಲಾಗಿದೆ. ಈ ತಿದ್ದುಪಡಿ ನಿಯಮವು ವಿದ್ಯುತ್ ಪೂರೈಕೆ ಮೇಲೆ ತೆರಿಗೆ ವಿಧಿಸುವ ನಿಯಮ ತದ್ವಿರುದ್ಧವಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್​ಕೆೆಸಿಸಿಐ) ಹಾಗೂ ಮೆಸಸ್ ಸೋನಾ ಸಿಂಥೆಟೆಕ್ ಕಂಪೆನಿ ಸೇರಿದಂತೆ ವಿವಿಧ ಕಂಪೆನಿಗಳು ಅರ್ಜಿ ಸಲ್ಲಿಸಿವೆ. ವಿದ್ಯುತ್ ಪೂರೈಕೆಗಾಗಿ ಕನಿಷ್ಟ ಶುಲ್ಕಗಳ ಮೆಲೆ ತೆರಿಗೆಯನ್ನು ವಿಧಿಸುವುದು ಮತ್ತು ಸಂಗ್ರಹಿಸುವುದು ಕಾನೂನುಬಾಹಿರವಾಗುತ್ತದೆ. ಅಲ್ಲದೆ, ಈ ಹೆಚ್ಚುವರಿ ತರಿಗೆಯನ್ನು ಗ್ರಾಹಕರ ಮೇಲೆ ವಿಧಿಸಿಲ್ಲ. ಹೀಗಾಗಿ, ರಾಜ್ಯ ಸರ್ಕಾರ ಅನ್ಯಾಯವಾಗಿ ವಿದ್ಯುತ್ ಪೂರೈಕೆಯ ಮೇಲೆ ಸಂಗ್ರಹಿಸಿರುವ ತೆರಿಗೆಯನ್ನು ಹಿಂದಿರುಗಿರುಗಿಸಲು ಸೂಚನೆ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದೆ.

Category
ಕರಾವಳಿ ತರಂಗಿಣಿ