image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಇ. ಡಿ ತನಿಖೆ ಎದುರಿಸಲು ಸಿದ್ಧ : ಡಿ. ಕೆ. ಶಿ

ಇ. ಡಿ ತನಿಖೆ ಎದುರಿಸಲು ಸಿದ್ಧ : ಡಿ. ಕೆ. ಶಿ

ಬೆಂಗಳೂರು : ನಮ್ಮ ಕುಟುಂಬ ಯಾವತ್ತೂ ಇ. ಡಿ. ತನಿಖೆ ಎದುರಿಸಲು ಸಿದ್ಧ. ನನ್ನ ಮೇಲೆ ಕೇಸ್ ಆದಾಗ ಯಾರೂ ರಕ್ಷಣೆಗೆ ಬಂದಿರಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇ.ಡಿ. ನನ್ನ ಮೇಲೂ ಕೇಸ್ ಹಾಕಿತ್ತು. ಆಮೇಲೆ ಏನಾಯಿತು?. ಯಾರೂ ನನ್ನ ರಕ್ಷಣೆಗೆ ಬಂದಿರಲಿಲ್ಲ. ನ್ಯಾಯಾಲಯ ನನ್ನ ರಕ್ಷಣೆಗೆ ಬಂತು ಎಂದರು.

ಈಗ ಯಾರೋ ಹೇಳಿಕೆ ನೀಡಿದ್ದಾರೆ ಅಂತ ಡಿ. ಕೆ. ಸುರೇಶ್​ರನ್ನು ಕರೆದಿದ್ದಾರೆ. ಜನಪ್ರತಿನಿಧಿಗಳನ್ನು ಅವರ ಕ್ಷೇತ್ರದಲ್ಲಿ ಅನೇಕರು ಭೇಟಿ ಮಾಡುತ್ತಾರೆ. ಇ. ಡಿ. ಏನೆಲ್ಲ ಪ್ರಶ್ನೆ ಕೇಳುತ್ತಾರೆ ಅದಕ್ಕೆ ಉತ್ತರ ಕೊಡುತ್ತಾರೆ. ತನಿಖೆಗೆ ಸಹಕಾರ ನೀಡಲು ಸಿದ್ಧರಿದ್ದಾರೆ. ನೀವು ಅದನ್ನು ದೊಡ್ಡದಾಗಿ ಬಿಂಬಿಸುತ್ತಿದ್ದೀರಿ. ಯಾವುದನ್ನು ಬಿಂಬಿಸಬೇಕೋ ಅದನ್ನು ಬಿಂಬಿಸಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಡಿಯವರು ವಿಚಾರಣೆಗೆ ಹಾಜರಾಗಿ ಎಂದು ತಿಳಿಸಿದ್ದಾರೆ. ನಾನು ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ. ಯಾವ ಮಾನದಂಡವಿಟ್ಟುಕೊಂಡು ನನ್ನನ್ನು ವಿಚಾರಣೆಗೆ ಕರೆದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವೆ ಎಂದು ಮಾಜಿ ಸಂಸದ, ಬಮೂಲ್​ ಅಧ್ಯಕ್ಷ ಡಿ. ಕೆ. ಸುರೇಶ್ ಹೇಳಿದರು.ಇಡಿ ನೋಟಿಸ್ ರಾಜಕೀಯ ಷಡ್ಯಂತ್ರವೆಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ವಿಚಾರಣೆಗೆ ಹೋದಾಗ ಇದರ ಬಗ್ಗೆ ತಿಳಿಯುತ್ತದೆ. ಅವರ ಪ್ರಶ್ನೆಗಳು ಯಾವ ಹಾದಿಯಲ್ಲಿವೆ, ವಿಚಾರಣೆಗೂ, ಪ್ರಕರಣಕ್ಕೂ ಸಂಬಂಧ ಇದೆಯೋ ಇಲ್ಲವೋ ಎಂದು ತಿಳಿಯುತ್ತದೆ. ಜೊತೆಯಲ್ಲಿ ವಕೀಲರು ಇರುತ್ತಾರೆ. ನಂತರ ಯಾವುದಕ್ಕೆ ಸಂಬಂಧ‌ವಿದೆ, ಅಸಂಬದ್ಧವಾಗಿದೆ ಎನ್ನುವುದರ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.

Category
ಕರಾವಳಿ ತರಂಗಿಣಿ