image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಹುಸಿ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ

ಹುಸಿ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಪಡೆಗೆ ಹುಸಿ ಬಾಂಬ್ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ ಕೈಗೊಳ್ಳಲಾಯಿತು ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಬುಧವಾರ ರಾತ್ರಿ ಭಯೋತ್ಪಾದಕನ ಹೆಸರಿನಲ್ಲಿ ಕಳುಹಿಸಲಾದ ಇಮೇಲ್‌ನಲ್ಲಿ ಎರಡು ಬಾಂಬ್‌ಗಳನ್ನು ಇಡಲಾಗುತ್ತಿರುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಒಂದು "ಪ್ಲಾನ್ ಎ" ನ ಭಾಗವಾಗಿ ಮೊದಲನೇ ಬಾಂಬ್ ಇಡುವುದಾಗಿ ಹಾಗೂ ಒಂದು ವೇಳೆ ಮೊದಲನೆಯದು ವಿಫಲವಾದರೆ "ಪ್ಲಾನ್ ಬಿ" ಅಡಿಯಲ್ಲಿ ಎರಡನೇಯ ಬಾಂಬ್ ಇಡುವ ಬಗ್ಗೆ ಇಮೇಲ್​​ನಲ್ಲಿ ತಿಳಿಸಲಾಗಿತ್ತು.

ವಿಮಾನ ನಿಲ್ದಾಣದ ಶೌಚಾಲಯದ ಪೈಪ್‌ಲೈನ್‌ನೊಳಗೆ ಸ್ಫೋಟಕ ಸಾಧನ ಇರಿಸಲಾಗಿದೆ ಎಂದು ಇ-ಮೇಲ್​ ನಲ್ಲಿ ಉಲ್ಲೇಖ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಭದ್ರತಾ ಸಂಸ್ಥೆಗಳು ಆವರಣದ ಸಮಗ್ರ ತಪಾಸಣೆ ನಡೆಸಿವೆ. ವಿವರವಾದ ಪರಿಶೀಲನೆಯ ನಂತರ, ಯಾವುದೇ ಸ್ಫೋಟಕಗಳು ಕಂಡು ಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಮತ್ತು ಬೆದರಿಕೆಯನ್ನು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಬೆದರಿಕೆ ಕಳುಹಿಸಲು ಬಳಸಲಾದ ಇಮೇಲ್ ಐಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಔಪಚಾರಿಕ ತನಿಖೆ ನಡೆಯುತ್ತಿದೆ.

Category
ಕರಾವಳಿ ತರಂಗಿಣಿ