image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮುಜರಾಯಿ ದೇವಸ್ಥಾನಗಳ ಆಸ್ತಿ ಸಂರಕ್ಷಣೆಗೆ ಮುಂದಾದ ರಾಜ್ಯ ಧಾರ್ಮಿಕ ದತ್ತಿ ಇಲಾಖೆ

ಮುಜರಾಯಿ ದೇವಸ್ಥಾನಗಳ ಆಸ್ತಿ ಸಂರಕ್ಷಣೆಗೆ ಮುಂದಾದ ರಾಜ್ಯ ಧಾರ್ಮಿಕ ದತ್ತಿ ಇಲಾಖೆ

ಬೆಂಗಳೂರು: ರಾಜ್ಯ ಧಾರ್ಮಿಕ ದತ್ತಿ ಇಲಾಖೆಯು ಮುಜರಾಯಿ ದೇವಸ್ಥಾನಗಳ ಆಸ್ತಿ ಸಂರಕ್ಷಣೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಆಸ್ತಿ ಸರ್ವೆ ಕಾರ್ಯ ನಡೆಸುತ್ತಿದೆ. ಒತ್ತುವರಿ ತೆರವುಗೊಳಿಸಿ ದೇವಸ್ಥಾನಗಳ ಹೆಸರಿಗೆ ಖಾತೆ ದಾಖಲು ಮಾಡಲಾಗುತ್ತಿದೆ. ಮುಜರಾಯಿ ವ್ಯಾಪ್ತಿಯ ದೇವಾಲಯಗಳ ಸಾವಿರಾರು ಎಕರೆ ಜಮೀನು ಒತ್ತುವರಿಯಾಗಿದ್ದು, ಸುದೀರ್ಘ ವರ್ಷಗಳಿಂದ ಮನೆ, ಕಟ್ಟಡಗಳನ್ನು ನಿರ್ಮಿಸಿ ವಾಸವಾಗಿದ್ದಾರೆ. ಮೊದಲಿಗೆ ಆಸ್ತಿಗಳ ಪತ್ತೆ ಕಾರ್ಯ ನಡೆಸಿ, ಮುಜರಾಯಿ ದೇವಾಲಯಗಳ ಆಸ್ತಿಗೆ ಫೆನ್ಸಿಂಗ್ ಅಳವಡಿಸಿ ರಕ್ಷಿಸುವಂತೆ ಮುಜರಾಯಿ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. ಬಳಿಕ ಒತ್ತುವರಿ ಭೂಮಿಯನ್ನು ತೆರವು ಮಾಡುವ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಸುವ ಸಂಬಂಧ ದಾಖಲೆಗಳನ್ನು ಕ್ರೋಢೀಕರಿಸುವಂತೆ ಸೂಚಿಸಿದ್ದಾರೆ. ಎಲ್ಲಾ ಅಧಿಸೂಚಿತ ಮುಜರಾಯಿ ಸಂಸ್ಥೆಗಳಿಗೆ ಸೇರಿದ ಜಮೀನುಗಳ ಪಹಣಿಗಳನ್ನು ಪರಿಶೀಲಿಸಿ, ದೇವಾಲಯದ ಜಮೀನುಗಳು ಅರ್ಚಕರ ಹೆಸರಿನಲ್ಲಿ/ಆಡಳಿತ ಕಮಿಟಿ/ವ್ಯವಸ್ಥಾಪನಾ ಕಮಿಟಿ ಅಥವಾ ಯಾವುದೇ ದೇವಾಲಯದ ಕಾರ್ಯನಿರ್ವಾಹಕರ ಹೆಸರಿನಲ್ಲಿ ದಾಖಲಾಗಿದ್ದಲ್ಲಿ ಕೋರ್ಟ್ ಆದೇಶದಂತೆ ದೇವಾಲಯದ ಹೆಸರಿಗೆ ಖಾತೆ ದಾಖಲು ಮಾಡಿ ''ದೇವಾಲಯದ ಹೆಸರು- ಧಾರ್ಮಿಕ ದತ್ತಿ ಇಲಾಖೆ" ಎಂದು ನಮೂದಿಸುವಂತೆ ಸೂಚಿಸಲಾಗಿದೆ. ಎಲ್ಲಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ಪ್ರಕ್ರಿಯೆ ಚಾಲನೆಯಲ್ಲಿದೆ.

ರಾಜ್ಯದಲ್ಲಿ ಒಟ್ಟು 34,565 ಅಧಿಸೂಚಿತ ಮುಜರಾಯಿ ದೇವಸ್ಥಾನಗಳಿವೆ. ಈ ಪೈಕಿ ಎ ದರ್ಜೆಯ 208, ಬಿ ದರ್ಜೆಯ 193 ಹಾಗೂ ಸಿ ದರ್ಜೆಯ 34,565 ದೇವಸ್ಥಾನಗಳಿವೆ. ಎ ದರ್ಜೆಯ ದೇವಸ್ಥಾನಗಳ ಸುಮಾರು 1,750 ಆಸ್ತಿಗಳಿವೆ. ಬಿ ದರ್ಜೆ ದೇವಸ್ಥಾನಗಳ 873 ಆಸ್ತಿಗಳಿದ್ದರೆ, ಸಿ ದರ್ಜೆ ದೇವಸ್ಥಾನಗಳ ಸುಮಾರು 42,292 ಆಸ್ತಿಗಳಿವೆ. ಅಂದರೆ ಒಟ್ಟು 34,565 ಅಧಿಸೂಚಿತ ದೇವಾಲಯಗಳು ಸುಮಾರು 45,915 ಆಸ್ತಿಗಳನ್ನು ಹೊಂದಿರುವುದಾಗಿ ಮುಜರಾಯಿ ಇಲಾಖೆ ಮಾಹಿತಿ ನೀಡಿದೆ. ಕಳೆದ ಮೂರು ತಿಂಗಳಲ್ಲಿ ಒಟ್ಟು 11,350 ಆಸ್ತಿಗಳನ್ನು ಗುರುತಿಸಿ ನಮೂದಿಲಾಗಿದೆ. ಒಟ್ಟು 36,817.668 ಎಕರೆ ವಿಸ್ತೀರ್ಣದ ಆಸ್ತಿಗಳನ್ನು ಮುಜರಾಯಿ ದೇವಾಸ್ಥಾನಗಳು ಹೊಂದಿವೆ.‌ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಮತ್ತು ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಿರಾಸ್ತಿಯ ಮಾಹಿತಿಯನ್ನು ಮುಜರಾಯಿ ಇಲಾಖೆಗೆ ಸಲ್ಲಿಸಿದ್ದಾರೆ. ಅದರಂತೆ ಗ್ರೇಡ್ ಎ 208 ದೇವಾಲಯಗಳ ಒಟ್ಟು ಸ್ಥಿರಾಸ್ತಿ ಸುಮಾರು 6,323 ಎಕರೆ ಇದೆ. ಇನ್ನು ಗ್ರೇಡ್ ಬಿ 193 ದೇವಾಲಯಗಳ ಒಟ್ಟು ಸ್ಥಿರಾಸ್ತಿ ಸುಮಾರು 1,555 ಎಕರೆ ಇದೆ ಎಂದು ಮಾಹಿತಿ ನೀಡಿದೆ. ಈವರೆಗೆ ಸುಮಾರು 18,528 ದೇವಾಲಯಗಳ ಆಸ್ತಿ ಸರ್ವೆ ಕಾರ್ಯ ಮಾಡಲಾಗಿದೆ. ಇನ್ನೂ ಸುಮಾರು 27,387 ಮುಜರಾಯಿ ದೇವಾಲಯಗಳ ಆಸ್ತಿ ಅಳತೆ ಮಾಡಲು ಬಾಕಿ ಇದೆ ಎಂದು ಮುಜರಾಯಿ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ಗ್ರಾಮದಲ್ಲಿ 1236 ದೇವಸ್ಥಾನಗಳ ಆಸ್ತಿ ಸರ್ವೆಯಾಗಿದ್ದು, 14 ಆಸ್ತಿಗಳ ಸರ್ವೆ ಬಾಕಿ ಇವೆ‌. ರಾಮನಗರದಲ್ಲಿ 151 ಆಸ್ತಿಗಳ ಸರ್ವೆಯಾಗಿದ್ದು, 1782 ಬಾಕಿ ಇದೆ. ಚಿಕ್ಕಬಳ್ಳಾಪುರದಲ್ಲಿ 583 ದೇವಸ್ಥಾನ ಆಸ್ತಿಗಳ ಸರ್ವೆಯಾಗಿದ್ದು, 1,387 ಬಾಕಿ ಇದೆ. ತುಮಕೂರಿನಲ್ಲಿ 534 ಆಸ್ತಿಗಳ ಸರ್ವೆಯಾಗಿದ್ದು, 2,216 ಬಾಕಿಯಾಗಿದೆ.

Category
ಕರಾವಳಿ ತರಂಗಿಣಿ