image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಚಿತ್ರನಗರಿ ನಿರ್ಮಾಣಕ್ಕೆ ಕೆಐಎಡಿಬಿಗೆ ಸಂಬಂಧಿಸಿದ ಸಮಸ್ಯೆ ಇದೆ : ಸಚಿವ ಡಾ. ಹೆಚ್​. ಸಿ. ಮಹದೇವಪ್ಪ

ಚಿತ್ರನಗರಿ ನಿರ್ಮಾಣಕ್ಕೆ ಕೆಐಎಡಿಬಿಗೆ ಸಂಬಂಧಿಸಿದ ಸಮಸ್ಯೆ ಇದೆ : ಸಚಿವ ಡಾ. ಹೆಚ್​. ಸಿ. ಮಹದೇವಪ್ಪ

ಮೈಸೂರು: ಚಿತ್ರನಗರಿ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿರುವ ಕೋಚನಹಳ್ಳಿ ಕೈಗಾರಿಕಾ ಪ್ರದೇಶದ ಹಿಮ್ಮಾವು ಜಾಗದಲ್ಲಿ ಕೆಐಎಡಿಬಿಗೆ ಸಂಬಂಧಿಸಿದಂತೆ ಸ್ವಲ್ಪ ಸಮಸ್ಯೆ ಇದೆ ಎಂದು ಸಚಿವ ಡಾ. ಹೆಚ್​. ಸಿ. ಮಹದೇವಪ್ಪ ತಿಳಿಸಿದರು. ಜಿಲ್ಲಾ ಸಭಾಂಗಣದಲ್ಲಿ ಮಾತನಾಡಿದ ಅವರು, "ಈ ಭಾಗದ 800 ಎಕರೆ ಜಾಗವನ್ನು ನಿಯಮಾನುಸಾರ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಅದಾದ ನಂತರ ಕೆಲವರು ಅನಧಿಕೃತವಾಗಿ ಭೂಮಿಯನ್ನು ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದರು. ಇವರು ಯಾವುದೇ ಆಧಾರವಿಲ್ಲದಿದ್ದರೂ ಈ ಜಾಗ ನಮಗೆ ಸೇರಬೇಕೆಂದು ಹೇಳುತ್ತಿದ್ದಾರೆ. ಹಾಗಾಗಿ ಅವರಿಗೆ ಮಾನವೀಯತೆ ಆಧಾರದಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಹಾಗೂ ಧನಸಹಾಯ ಮಾಡಲು ಪರಿಶೀಲಿಸಲಾಗುವುದು" ಎಂದರು.

"ಕೋಚನಹಳ್ಳಿ ಭೂಮಿ ವಿಚಾರದಲ್ಲಿ ಗಾಲ್ಫ್‌ನವರಿಗೆ ರೈತರು ಜಮೀನು ಕೊಟ್ಟಿದ್ದಾರೆ. ನಂತರ ಗಾಲ್ಫ್‌ನವರು ಕೆಐಎಡಿಬಿಗೆ ಮಾರಾಟ ಮಾಡಿದ್ದಾರೆ. ಗಾಲ್ಫ್ ಕೆಲಸ ಮಾಡುತ್ತಿರುವವರು ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ. ಅವರಿಗೆ 10 ಎಕರೆ ಜಾಗದಲ್ಲಿ ಮನೆ ಕೊಡಬಹುದೇ ಇಲ್ಲವೇ ಇನ್ಯಾವುದೇ ರೀತಿ ಪರಿಹಾರ ನೀಡಲು ವಿಚಾರ ಮಾಡುವಂತೆ ಸೂಚಿಸಿದ್ದೇನೆ" ಎಂದು ಉತ್ತರಿಸಿದರು. "ಫಿಲಂ ಸಿಟಿ ಜಾಗಕ್ಕೆ ಪರ್ಯಾಯವಾಗಿ ಪರಿಹಾರ ಕೊಡುವಂತೆ ಸಾವಿರಾರು ಮಂದಿ ಬರುತ್ತಿದ್ದಾರೆ. ಇದರಿಂದ ಕೈಗಾರಿಕೆಗಳು, ಚಿತ್ರನಗರಿ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ. ಇಂತವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿರುವುದಾಗಿ" ತಿಳಿಸಿದರು.

Category
ಕರಾವಳಿ ತರಂಗಿಣಿ