image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರೈತರು ಪಾರಂಪರಿಕ ವ್ಯವಸಾಯಕ್ಕೆ ಸೀಮಿತವಾಗದೆ, ರಫ್ತು ಸಾಧನೆಗಳತ್ತ ಗಮನ ಹರಿಸಬೇಕು : ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್

ರೈತರು ಪಾರಂಪರಿಕ ವ್ಯವಸಾಯಕ್ಕೆ ಸೀಮಿತವಾಗದೆ, ರಫ್ತು ಸಾಧನೆಗಳತ್ತ ಗಮನ ಹರಿಸಬೇಕು : ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್

ಬೆಂಗಳೂರು: ರೈತರು ಪಾರಂಪರಿಕ ವ್ಯವಸಾಯಕ್ಕೆ ಸೀಮಿತವಾಗದೆ, ವೈವಿಧ್ಯಮಯ ಕೃಷಿ, ಪ್ರೊಸೆಸಿಂಗ್ ಮತ್ತು ರಫ್ತು ಸಾಧನೆಗಳತ್ತ ಗಮನ ಹರಿಸಬೇಕು. ಕೇಂದ್ರ ಸರ್ಕಾರ ಯಾವತ್ತೂ ರೈತರಿಗೆ ಬೆಂಬಲವಾಗಿ ನಿಂತಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು. ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ದ ಅಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ತೋಟಗಾರಿಕಾ ಸಂಸ್ಥೆಯಲ್ಲಿ ಶ್ಲಾಘನೀಯ ಸಂಶೋಧನೆ ನಡೆಯುತ್ತಿದೆ. ರೈತರೂ ಸಹ ಹೊಸ ಪ್ರಯೋಗಗಳ ಮೂಲಕ ನಾವೀನ್ಯತೆ ತರುತ್ತಿದ್ದಾರೆ. ಕಮಲಂ (ಡ್ರಾಗನ್ ಫ್ರೂಟ್) ಕೃಷಿಯಲ್ಲಿ ಮೊದಲ ಎರಡು ವರ್ಷಗಳಲ್ಲಿ ಲಾಭ ಕಡಿಮೆ ಇದ್ದರೂ ಮೂರನೇ ವರ್ಷದಿಂದ 6-7 ಲಕ್ಷ ರೂ. ನಿಷ್ಕರ್ಷಿಸಲಾಗುತ್ತದೆ ಎಂದರು.

ರೈತರಿಗೆ ಲ್ಯಾಬ್‌ನಿಂದ ಲ್ಯಾಂಡ್‌ಗೆ ತಕ್ಷಣ ಮಾಹಿತಿ ತಲುಪಬೇಕು. ಕೃಷಿಯಲ್ಲಿ 5.4% ಜಿಡಿಪಿ ಕೊಡುಗೆ ಇದೆ. ಇದು ಅತ್ಯಂತ ಶ್ಲಾಘನೀಯ ಬೆಳವಣಿಗೆ. ನಕಲಿ ಮತ್ತು ನಿಖರತೆಯಿಲ್ಲದ ಕೀಟನಾಶಕಗಳ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಸಿದ್ಧ. ‘ಒಂದು ರಾಷ್ಟ್ರ – ಒಂದು ಕೃಷಿ – ಒಂದು ತಂಡ’ ಎಂಬ ದೃಷ್ಟಿಕೋನದೊಂದಿಗೆ ಕಾರ್ಯ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಹೇಳಿದರು.‌ ಬೆಂಗಳೂರು ಗ್ರಾಮೀಣ ಪ್ರದೇಶವು ತೋಟಗಾರಿಕಾ ವಲಯದಲ್ಲಿ ವಿಶೇಷ ಸಾಧನೆ ತೋರಿದೆ. ಸಂಶೋಧನೆಗಳಿಗೆ ರೈತರಿಗೆ ತಕ್ಷಣ ಅವಕಾಶ ಲಭ್ಯವಾಗಬೇಕು.‌ ರೈತರು ಈಗ ವಿಜ್ಞಾನಿಗಳು ಕೂಡ. ಕೃಷಿಯಲ್ಲಿ ಹೊಸ ಆಯಾಮ ಸೇರಿಸುತ್ತಿದ್ದಾರೆ. ಜಿಡಿಪಿಯಲ್ಲಿ ಕೃಷಿಯ ದೊಡ್ಡ ಪಾತ್ರವಿದೆ. ಪೋಷಕ ಆಹಾರದ ಮೂಲಕ ಆಹಾರ ಭದ್ರತೆ ಸಾಧಿಸುವ ಗುರಿ ಹೊಂದಲಾಗಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಕಲಿ ಬೀಜ ಹಾಗೂ ಕೀಟನಾಶಕ ತಯಾರಕರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುತ್ತಿದೆ. 145 ಕೋಟಿ ಜನಸಂಖ್ಯೆಗೆ ಪೋಷಕ ಆಹಾರ ಪೂರೈಕೆ ಗುರಿ ಹೊಂದಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

29 ಮೇ 2025ರಂದು ಒಡಿಶಾದಿಂದ ಆರಂಭವಾದ ಈ 15 ದಿನಗಳ ಅಭಿಯಾನ 12 ಜೂನ್‌ವರೆಗೆ ನಡೆಯಲಿದೆ. ಈಗಾಗಲೇ ಈ ಅಭಿಯಾನದ 11 ದಿನಗಳಲ್ಲಿ ಅವರು ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಪಂಜಾಬ್, ಉತ್ತರಾಖಂಡ್ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ರೈತರನ್ನು ಭೇಟಿಯಾಗಿ ಸಂವಾದ ನಡೆಸಿದ್ದಾರೆ ಎಂದು ತಿಳಿಸಿದರು.

Category
ಕರಾವಳಿ ತರಂಗಿಣಿ