image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಫ್ರೀ ಪಾಸ್​, ಅಧಿಕ ಜನಜಂಗುಳಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಕಾಲ್ತುಳಿಕ್ಕೆ ಕಾರಣ : ಪೊಲೀಸ್

ಫ್ರೀ ಪಾಸ್​, ಅಧಿಕ ಜನಜಂಗುಳಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಕಾಲ್ತುಳಿಕ್ಕೆ ಕಾರಣ : ಪೊಲೀಸ್

ಬೆಂಗಳೂರು: ಆರ್​ಸಿಬಿ ವಿಜಯೋತ್ಸವ ಮೆರವಣಿಗೆ, ಫ್ರೀ ಪಾಸ್​, ಅಧಿಕ ಜನಜಂಗುಳಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಕಾಲ್ತುಳಿಕ್ಕೆ ಕಾರಣವಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಆರ್​ಸಿಬಿ ಗೆಲುವಿನ ಸಂಭ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಕ್ರೀಡಾಂಗಣಕ್ಕೆ ಅಧಿಕೃತ ಟಿಕೆಟ್​ ಹೊಂದಿದವರಿಗೆ ಮಾತ್ರ ಪ್ರವೇಶ ಎಂದು ತಿಳಿದಾಕ್ಷಣ, ಅನೇಕ ಮಂದಿ ಟಿಕೆಟ್​ ಇಲ್ಲದೆ, ಟಿಕೆಟ್​ ಇರುವವರೊಂದಿಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಜನ ದಟ್ಟಣೆ ಉಂಟಾಗಿ ಕೆಲವರು ಕೆಳಗೆ ಬಿದ್ದಿದ್ದಾರೆ. ಸ್ಟೇಡಿಯಂ ಗೇಟ್​ ಅನ್ನು ಹತ್ತಿ ಒಳನುಗ್ಗಲು ಪ್ರಯತ್ನಿಸಿದಾಗ ಕೆಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದು, 33 ಮಂದಿ ಗಾಯಗೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಾವನ್ನಪ್ಪಿದವರಲ್ಲಿ ಬಹುತೇಕ ಯುವಕರಾಗಿದ್ದು, ಮಹಿಳೆಯರು ಮತ್ತು ಪುರುಷರು ಆಗಿದ್ದು, ಅನೇಕರು ವಿದ್ಯಾರ್ಥಿಗಳಾಗಿದ್ದಾರೆ.

 ಸ್ಟೇಡಿಯಂ ಆಸನಗಳ ಸಾಮರ್ಥ್ಯ 35 ಸಾವಿರವಿದ್ದು, 2ರಿಂದ 3 ಲಕ್ಷ ಜನರು ಬಂದಿದ್ದಾರೆ. ಮಂಗಳವಾರ ಸಂಜೆ ಐಪಿಎಲ್​ ಅಂತಿಮ ಪಂದ್ಯ ನಡೆದಿದ್ದು, ಮರುದಿನ ಹೆಚ್ಚಿನ ಜನರು ಸೇರುವುದಿಲ್ಲ ಎಂದು ಕ್ರಿಕೆಟ್​ ಅಸೋಸಿಯೇಷನ್​ ಕಾರ್ಯಕ್ರಮ ಆಯೋಜಿಸಿದೆ. ಆದರೆ, ಯಾರು ನಿರೀಕ್ಷಿಸದ ಪ್ರಮಾಣದಲ್ಲಿ ಜನರು ಆಗಮಿಸಿದ್ದು, ಕ್ರೀಡಾಂಗಣದ ಆಸನ ಸಾಮರ್ಥ್ಯಕ್ಕಿಂತ ಸ್ವಲ್ಪ ಹೆಚ್ಚು ಜನರು ಸೇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಮಟ್ಟಿನ ಜನರನ್ನು ನಿರೀಕ್ಷಿಸಿರಲಿಲ್ಲ ಎಂದು ಸಿಎಂ ತಿಳಿಸಿದ್ದಾರೆ.

ಸ್ಟೇಡಿಯಂನಲ್ಲಿ ಸಣ್ಣ ಗೇಟ್​ಗಳಿದ್ದು, ಅದರ ಮೂಲಕವೇ ಜನರು ಹೋಗಬೇಕಿದೆ. ಈ ಗೇಟ್​ಗಳನ್ನು ಮುರಿದು ಒಳನುಗ್ಗಲಾರಂಭಿಸಿದಾಗ ಕಾಲ್ತುಳಿತ ಸಂಭವಿಸಿದೆ. ಈ ಮಟ್ಟದ ಜನರು ಬರುತ್ತಾರೆ ಎಂದು ಯಾರು ನಿರೀಕ್ಷಿಸಿರಲಿಲ್ಲ. ಇದೇ ಈ ಘಟನೆಗೆ ಪ್ರಮುಖ ಕಾರಣವಾಗಿದೆ. ಏನು ಆಗಿಲ್ಲ ಎಂದು ನಾನು ಹೇಳುವುದಿಲ್ಲ. ಈ ಘಟನೆ ಕುರಿತು ತನಿಖೆ ನಡೆಸಲಾಗುವುದು ಎಂದರು. ಭದ್ರತಾ ದೃಷ್ಟಿಯಿಂದ ಕ್ರೀಡಾಂಗಣದಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸುವುದಿಲ್ಲ, ಬದಲಿಗೆ ಅಭಿನಂದನಾ ಕಾರ್ಯಕ್ರಮ ಮಾತ್ರ ನಡೆಯಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು 11.56ಕ್ಕೆ ಘೋಷಿಸಿದರು.

ಈ ನಡುವೆ ಆರ್​ಸಿಬಿ ತಂಡ 3.14ಕ್ಕೆ ಬುಧವಾರ ಸಂಜೆ 5ಕ್ಕೆ ವಿಕ್ಟರಿ ಪೆರೇಡ್​ ನಡೆಸುವುದಾಗಿ ತಿಳಿಸಿತು. ಈ ಕುರಿತು ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ, ವಿಜಯೋತ್ಸವದ ಮೆರವಣಿಗೆಯ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಎಲ್ಲರೂ ರೋಡ್ ಶೋ ಅನ್ನು ಶಾಂತಿಯುತವಾಗಿ ಆನಂದಿಸಲು ಪೊಲೀಸರು ಮತ್ತು ಇತರ ಅಧಿಕಾರಿಗಳು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಲು ಕೋರುತ್ತೇವೆ. ಸೀಮಿತ ಪ್ರವೇಶದ ಉಚಿತ ಪಾಸ್​ಗಳು shop.royalchallengers.com ಲಭ್ಯವಿದೆ ಎಂದು ಪೋಸ್ಟ್​ ಮಾಡಿತ್ತು.

Category
ಕರಾವಳಿ ತರಂಗಿಣಿ