image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಯುಜಿಡಿ ಬ್ಲಾಕೇಜ್​​ ಪತ್ತೆಗೆ ರೋಬೋಟ್​​​....

ಯುಜಿಡಿ ಬ್ಲಾಕೇಜ್​​ ಪತ್ತೆಗೆ ರೋಬೋಟ್​​​....

ಬೆಳಗಾವಿ:  ಬೆಳಗಾವಿ ಮಹಾನಗರ ಪಾಲಿಕೆಯು ಒಳಚರಂಡಿ ಪೈಪ್​ನಲ್ಲಿ ಬ್ಲಾಕೇಜ್ ಸಮಸ್ಯೆ ಪತ್ತೆ ಹಚ್ಚಲು ಪ್ರಾಯೋಗಿಕವಾಗಿ ರೋಬೋಟ್ ಪರೀಕ್ಷೆ ಮಾಡಿದೆ. ಈ ಮೂಲಕ ರಾಜ್ಯದಲ್ಲೇ ಮೊದಲ ಪ್ರಯೋಗ ಪಾಲಿಕೆಯಿಂದ ನಡೆದಿದೆ. ಮಳೆಗಾಲದ ಸಂದರ್ಭದಲ್ಲಿ ಹೆಚ್ಚಾಗಿ ಉಂಟಾಗುವ ಒಳಚರಂಡಿ ಬ್ಲಾಕೇಜ್ ಸಮಸ್ಯೆಯನ್ನು ರೋಬೋಟ್ ಯಂತ್ರ ಬಳಸಿ ಪರಿಹರಿಸಲು ಮಹಾನಗರ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ರೋಬೋಟ್ ಪೈಪ್​​ಲೈನ್ ಬ್ಲಾಕೇಜ್, ಲಿಕೇಜ್, ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣ ಆಗಿರುವ ಸಮಸ್ಯೆಗಳನ್ನು ತಕ್ಷಣ ಪತ್ತೆ ಹಚ್ಚಲಿದ್ದು, ಏಷ್ಯಾದಲ್ಲಿಯೇ ಇದು ಪ್ರಖ್ಯಾತಿಯನ್ನು ಪಡೆದಿದೆ. ಈಗಾಗಲೇ ಭಾರತ ದೇಶದ ವಿವಿಧೆಡೆ ಇದು ಯಶಸ್ವಿಯಾಗಿದೆ.

"ಮದ್ರಾಸ್ ಐಐಟಿಯ ಸಂಶೋಧಕರು ಸೋಲಿನಾಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಹಯೋಗದಲ್ಲಿ ಈ ರೋಬೋಟ್ ಸಿದ್ಧಪಡಿಸಿದ್ದಾರೆ. ಸುಮಾರು 30 ಲಕ್ಷ ರೂ. ಮೌಲ್ಯದ ರೋಬೋಟ್​​ ಇದಾಗಿದ್ದು, ಕಂಪನಿಯು ರೋಬೋಟ್​ ನೀಡಿ, ಒಂದು ತಿಂಗಳ ಕಾಲ ತರಬೇತಿಯನ್ನು ಕೊಡಲಿದೆ. 5 ಕೋಟಿ ರೂ. ನೀಡಿದರೆ, 3 ವರ್ಷ ಕಂಪನಿಯೇ ಕಾರ್ಯ ನಿರ್ವಹಿಸಲಿದೆ. ರೋಬೋಟ್​ ಖರೀದಿಯಿಂದ ಪೌರ ಕಾರ್ಮಿಕರ ಕೆಲಸ ಕಡಿಮೆಯಾಗುವುದಿಲ್ಲ. ಆದರೆ, ಸಮಸ್ಯೆಯನ್ನು ಪತ್ತೆ ಹಚ್ಚಿ ಪೌರಕಾರ್ಮಿಕರಿಗೆ ಉಂಟಾಗುತ್ತಿದ್ದ ಕಿರಿಕಿರಿ ತಪ್ಪಲಿದೆ" ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು. ಮೊದಲು ಡ್ರೈನೇಜ್​​ ಪೈಪ್​ನಲ್ಲಿ ರೋಬೋಟ್​​ ಇಳಿಸಲಾಗುತ್ತದೆ. ಅದು ಪೈಪ್​ನಲ್ಲಿ ಕಲ್ಲು, ಮರದ ಬೇರು ಸೇರಿ ಏನಾದರೂ ಸಿಕ್ಕಿಹಾಕಿಕೊಂಡು ಬ್ಲಾಕೇಜ್ ಆಗಿದ್ದರೆ ಅದರ ಫೋಟೊವನ್ನು ಕಳಿಸಿಕೊಡುತ್ತದೆ. ಕುಡಿಯುವ ನೀರಿನ ಜೊತೆಗೆ ಡ್ರೈನೇಜ್ ನೀರು ಮಿಶ್ರಣವಾಗಿದ್ದರೆ ಅದರ ಫೋಟೋವನ್ನೂ ಕಳಿಸುತ್ತದೆ. ಒಟ್ಟಾರೆ, ಪೈಪ್​​ಲೈನ್ ಸ್ಥಿತಿಗತಿ ಕುರಿತು ಸ್ಪಷ್ಟಚಿತ್ರಣ ನೀಡುತ್ತದೆ. ರಿಮೋಟ್ ಕಂಟ್ರೋಲ್ ಮೂಲಕ ಇದು ಕೆಲಸ ನಿರ್ವಹಿಸಲಿದೆ.

Category
ಕರಾವಳಿ ತರಂಗಿಣಿ