image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕಾರವಾರದ ಬಂದರಿಗೆ ಹಡಗಿನ ಮೂಲಕ ಆಗಮಿಸಿದ್ದ ಪಾಕ್ ಹಾಗೂ ಸಿರಿಯಾದ ಪ್ರಜೆಗಳನ್ನು ನಿಬಂಧನೆಯೊಂದಿಗೆ ಅದೇ ಹಡಗಿನ ಮೂಲಕ ವಾಪಸ್​​ ಕಳುಹಿಸಿದ ಪೊಲೀಸರು

ಕಾರವಾರದ ಬಂದರಿಗೆ ಹಡಗಿನ ಮೂಲಕ ಆಗಮಿಸಿದ್ದ ಪಾಕ್ ಹಾಗೂ ಸಿರಿಯಾದ ಪ್ರಜೆಗಳನ್ನು ನಿಬಂಧನೆಯೊಂದಿಗೆ ಅದೇ ಹಡಗಿನ ಮೂಲಕ ವಾಪಸ್​​ ಕಳುಹಿಸಿದ ಪೊಲೀಸರು

ಕಾರವಾರ : ಭಾರತ-ಪಾಕಿಸ್ತಾನ ಮಧ್ಯೆ ಬಿಕ್ಕಟ್ಟಿನ ನಡುವೆ ಇರಾಕ್ ಮೂಲದ ಸರಕು ಸಾಗಾಟ ಹಡಗಿನ ಮೂಲಕ ಕಾರವಾರದ ಬಂದರಿಗೆ ಆಗಮಿಸಿದ್ದ ಪಾಕ್ ಹಾಗೂ ಸಿರಿಯಾ ಮೂಲದ ಪ್ರಜೆಗಳಿಗೆ ಹಡಗಿನಲ್ಲಿಯೇ ದಿಗ್ಬಂಧನ ವಿಧಿಸಿ, ಇದೀಗ ವಾಪಸ್​​ ಕಳುಹಿಸಲಾಗಿದೆ. ಇರಾಕ್​ನ ಅಲ್ ಜುಬೇರ್​ನಿಂದ ಕಾರವಾರ ಬಂದರಿಗೆ ಪಾಕಿಸ್ತಾನದ ಓರ್ವ, ಭಾರತ ಮೂಲದ 15 ಹಾಗೂ ಸಿರಿಯಾದ ಇಬ್ಬರು ಪ್ರಜೆಗಳು ಸರಕು ಸಾಗಾಣಿಕೆ ಹಡಗಿನ ಮೂಲಕ ಆಗಮಿಸಿದ್ದರು.

ಬಿಟುಮಿನ್ ತುಂಬಿಕೊಂಡು ಆಗಮಿಸಿದ್ದ ಹಡಗಿನಲ್ಲಿ ಎರಡು ದಿನ ಇವೆರಲ್ಲರೂ ಕಾರವಾರ ಬಂದರಿನಲ್ಲಿದ್ದರು. ಈ ವಿಚಾರವು ಬಂದರು ಇಲಾಖೆ ಅಧಿಕಾರಿಗಳಿಗೆ ತಿಳಿದು ಕರಾವಳಿ ಕಾವಲುಪಡೆಗೆ ಮಾಹಿತಿ ನೀಡಿದ್ದರು. ಅದರಂತೆ, ಪಾಕಿಸ್ತಾನಿ ಹಾಗೂ ಸಿರಿಯಾ ಪ್ರಜೆಗಳ ದಾಖಲಾತಿ ಪರಿಶೀಲಿಸಿದ ಪೊಲೀಸರು ವಿಚಾರಣೆ ನಡೆಸಿದ್ದರು.

ಬಳಿಕ ಅವರ ಮೊಬೈಲ್​ಗಳನ್ನು ಹಡಗಿನ ಕ್ಯಾಪ್ಟನ್​ ಮೂಲಕ ಸೀಜ್ ಮಾಡಿಸಿ, ಬಂದರಿಗೆ ಇಳಿಯದಂತೆ ಸೂಚನೆ ನೀಡಲಾಗಿತ್ತು. ಬುಧವಾರ ಬಂದರಿನಲ್ಲಿ ಅನ್​ಲೋಡ್ ಕಾರ್ಯ ಮುಕ್ತಾಯಗೊಂಡಿದ್ದು, ನಿಬಂಧನೆ ಮೂಲಕ ಅದೇ ಹಡಗಿನ ಮೂಲಕ ವಾಪಸ್​​ ಕಳುಹಿಸಲಾಗಿದೆ. ಪಹಲ್ಗಾಮ್​ ದಾಳಿಯ ನಂತರ ಭಾರತದ ಬಂದರುಗಳಿಗೆ ಪಾಕಿಸ್ತಾನ ಹಾಗೂ ಚೀನಾದ ಹಡಗುಗಳಿಗೆ ನಿರ್ಬಂಧ ವಿಧಿಸಲಾಗಿದೆ.

''ಇರಾಕ್ ಮೂಲಕ ಆಗಮಿಸಿದ ಸರಕು ಸಾಗಣೆಯ ಹಡಗಿನಲ್ಲಿ ಪಾಕಿಸ್ತಾನ ಹಾಗೂ ಸಿರಿಯಾದ ಪ್ರಜೆಗಳು ಆಗಮಿಸಿದ್ದರು. ಅವರಿಗೆ ಮೊಬೈಲ್ ಬಳಸದಂತೆ ಸೂಚನೆ ನೀಡಿ ವಾಪಸ್​ ಕಳುಹಿಸಿದ್ದೇವೆ. ಕರಾವಳಿ ತೀರದಲ್ಲಿಯೂ ಭದ್ರತೆಯನ್ನು ಹೆಚ್ಚಿಸಿ ಸೂಕ್ಷ್ಮ ಪ್ರದೇಶದಲ್ಲಿ ಹದ್ದಿನ ಕಣ್ಣಿಡಲಾಗಿದೆ'' ಎಂದು ಕರಾವಳಿ ಕಾವಲು ಪಡೆಯ ಇನ್ಸ್​ಪೆಕ್ಟರ್​ ನಿಶ್ಚಲಕುಮಾರ್ ಮಾಹಿತಿ ನೀಡಿದ್ದಾರೆ.

Category
ಕರಾವಳಿ ತರಂಗಿಣಿ