image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನೈರುತ್ಯ ರೈಲ್ವೆಯ 228 ನಿಲ್ದಾಣಗಳಲ್ಲಿ ಎಐ ಸಿಸಿಟಿವಿ ಕ್ಯಾಮರಾ ಅಳವಡಿಕೆ...!

ನೈರುತ್ಯ ರೈಲ್ವೆಯ 228 ನಿಲ್ದಾಣಗಳಲ್ಲಿ ಎಐ ಸಿಸಿಟಿವಿ ಕ್ಯಾಮರಾ ಅಳವಡಿಕೆ...!

ಹುಬ್ಬಳ್ಳಿ : ನೈರುತ್ಯ ರೈಲ್ವೆ ಮೊದಲ ಬಾರಿಗೆ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು, ಅಪರಾಧಿಗಳನ್ನು‌ ನಿಖರವಾಗಿ ಗುರುತಿಸಲು, ಅತ್ಯಾಧುನಿಕ ಕನ್ವರ್ಜ್ ಕಮ್ಯುನಿಕೇಷನ್ ಸಿಸ್ಟಮ್ (CCS) ಸ್ಥಾಪಿಸಲು ಮುಂದಾಗಿದೆ. ಸುಮಾರು 55 ಕೋಟಿ ರೂಪಾಯಿ ವೆಚ್ಚದ ಈ ಮಹತ್ವಾಕಾಂಕ್ಷೆ ಯೋಜನೆ ಧ್ವನಿ, ವಿಡಿಯೋ ಮತ್ತು ಡೇಟಾ ಸೇವೆಗಳನ್ನು ಒಂದೇ ನೆಟ್ವರ್ಕ್‌ಗೆ ಸಂಯೋಜಿಸುವ ಮೂಲಕ ಕಾರ್ಯಾಚರಣಾ ಸಂವಹನ ಮತ್ತು ಭದ್ರತಾ ಮೂಲಸೌಕರ್ಯವನ್ನು ಸಮಗ್ರವಾಗಿ ಪರಿವರ್ತಿಸಲು ಉದ್ದೇಶಿಸಿರುತ್ತದೆ.

ಅಪರಾಧಿ ಚಟುವಟಿಕೆಗಳ ಹಿನ್ನೆಲೆಯುಳ್ಳವರು ರೈಲು ನಿಲ್ದಾಣಕ್ಕೆ ಕಾಲಿಟ್ಟರೆ ಸಾಕು, ಅವರ ಭಾವಚಿತ್ರ ತಕ್ಷಣ ಆರ್‌ಪಿಎಫ್ (ರೈಲ್ವೆ ರಕ್ಷಣಾ ಪಡೆ) ಠಾಣೆಗೆ ರವಾನೆಯಾಗುತ್ತದೆ. ಯಾವುದಾದರೂ ವಸ್ತು ಗಂಟೆಗಟ್ಟಲೇ ಒಂದೇ ಸ್ಥಳದಲ್ಲಿದ್ದರೆ, ಯಾರಾದರೂ ರೈಲು ಹಳಿಗೆ ಅಥವಾ ಪ್ಲಾಟ್‌ಫಾರ್ಮ್‌ನಲ್ಲಿ ಬಿದ್ದರೆ ಕ್ಷಣ ಮಾತ್ರದಲ್ಲಿ ಅದರ ಮಾಹಿತಿಯ ವಿಡಿಯೋ ಹಾಗೂ ಫೋಟೊ ಆರ್‌ಪಿಎಫ್ ಸಿಬ್ಬಂದಿಗೆ ಸಿಗುತ್ತದೆ.

ಶಂಕಿತ ವ್ಯಕ್ತಿಯನ್ನು ಪತ್ತೆ ಮಾಡಬೇಕಾದರೆ ಆತ ಧರಿಸಿದ ಬಟ್ಟೆಯ ಬಣ್ಣದಿಂದ ಆ ವ್ಯಕ್ತಿ ಅಥವಾ ಮಹಿಳೆ ಯಾವ ರೈಲು ನಿಲ್ದಾಣದಲ್ಲಿ ಇದ್ದಾರೆಂಬುದನ್ನು ಕ್ಷಣಮಾತ್ರದಲ್ಲಿ ಕಂಡು ಹಿಡಿಯಬಹುದು. ಎಲ್ಲ ರೈಲು ನಿಲ್ದಾಣಗಳಲ್ಲಿ ಅಳವಡಿಸುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಇನ್ನಿತರ ಅತ್ಯಾಧುನಿಕ ತಂತ್ರಜ್ಞಾನದ ಸಿಸಿಟಿವಿ ಕ್ಯಾಮರಾಗಳಿಂದ ಇದೆಲ್ಲ ಸಾಧ್ಯವಾಗಲಿದೆ.

ಎಲ್ಲ ಡೇಟಾವನ್ನು ವಿಭಾಗೀಯ ಹಾಗೂ ವಲಯ ಮಟ್ಟದ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಇದು 30 ದಿನಗಳವರೆಗೆ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇವುಗಳಲ್ಲಿ 14 ನಿಲ್ದಾಣಗಳನ್ನು ನಿರ್ಭಯಾ ನಿಧಿಯಿಂದ ಹಾಗೂ ಉಳಿದ 214 ನಿಲ್ದಾಣಗಳನ್ನು ಬಂಡವಾಳ ವೆಚ್ಚದಿಂದ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ನೈಋತ್ಯ ರೈಲ್ವೆ ವ್ಯಾಪ್ತಿಯ ಒಟ್ಟು 228 ರೈಲು ನಿಲ್ದಾಣಗಳಲ್ಲಿ ಎಐ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ಮೈಸೂರು ವಿಭಾಗ ವ್ಯಾಪ್ತಿಯ ನಿಲ್ದಾಣಗಳಲ್ಲಿ ಅಳವಡಿಕೆಯಾಗಿವೆ. ಈ ವರ್ಷಾಂತ್ಯದ ಒಳಗಾಗಿ ಬೆಂಗಳೂರು ಹಾಗೂ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಎಲ್ಲ ‌ನಿಲ್ದಾಣಗಳಲ್ಲಿ ಅಳವಡಿಸಲಾಗುತ್ತದೆ.

Category
ಕರಾವಳಿ ತರಂಗಿಣಿ