image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಉತ್ತರ ಕನ್ನಡದಲ್ಲಿ ಪಾಕಿಸ್ತಾನ ಮೂಲದ ಒಟ್ಟು 15 ಮಹಿಳೆಯರು

ಉತ್ತರ ಕನ್ನಡದಲ್ಲಿ ಪಾಕಿಸ್ತಾನ ಮೂಲದ ಒಟ್ಟು 15 ಮಹಿಳೆಯರು

ಉತ್ತರ ಕನ್ನಡ: "ಜಿಲ್ಲೆಯಲ್ಲಿ ಪಾಕಿಸ್ತಾನ ಮೂಲದ ಒಟ್ಟು 15 ಮಹಿಳೆಯರಿದ್ದಾರೆ. ಆದರೆ ಲಾಂಗ್ ಟರ್ಮ್ ವೀಸಾದಲ್ಲಿರುವ ಯಾರೊಬ್ಬರನ್ನು ಗಡಿಪಾರು ಮಾಡುವುದಿಲ್ಲ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪಾಕಿಸ್ತಾನಿ ಪ್ರಜೆಗಳಿಗೆ ಕೊಟ್ಟ ಎಲ್ಲಾ ರೀತಿಯ ವೀಸಾ ರದ್ದು ಮಾಡಲಾಗಿದೆ. ಅದರಂತೆ ಏ.27 ರೊಳಗೆ ಎಲ್ಲಾ ರೀತಿಯ ವೀಸಾ ಹಾಗೂ ಏ. 29 ರೊಳಗೆ ವೈದ್ಯಕೀಯ ವೀಸಾ ಪಡೆದವರು ವಾಪಸ್ ತೆರಳಬೇಕಿದೆ. ರಾಜ್ಯದಲ್ಲಿ ಒಟ್ಟು 88 ಜನ ಪಾಕಿಸ್ತಾನಿಯರಿದ್ದು, ನಾಲ್ವರು ಮೆಡಿಕಲ್ ವೀಸಾ ಪಡೆದವರಿದ್ದಾರೆ" ಎಂದರು.

"ಉತ್ತರ ಕನ್ನಡದಲ್ಲಿ ಮೂವರು ಮಕ್ಕಳು ಸೇರಿದಂತೆ 15 ಮಂದಿ ಪಾಕಿಸ್ತಾನಿ ಮಹಿಳೆಯರಿದ್ದಾರೆ. ಅವರ ಪೈಕಿ ಕಾರವಾರದ ಓರ್ವ ಮಹಿಳೆ ಜೈಲಿನಲ್ಲಿದ್ದಾರೆ. ಹೊನ್ನಾವರದ ವಲ್ಕಿಯ ಮಹಿಳೆಯು ಮದುವೆಯಾಗಿ ಪಾಕಿಸ್ತಾನಕ್ಕೆ ಹೋಗಿದ್ದಾರೆ. ಜಿಲ್ಲೆಯಲ್ಲಿರುವ ಪಾಕಿಸ್ತಾನ ಮೂಲದ ಮಹಿಳೆಯರು ಇಲ್ಲಿಯವರನ್ನು ಮದುವೆಯಾದ ಕಾರಣ ಗಡಿಪಾರು ಮಾಡುವ ಅಗತ್ಯವಿಲ್ಲ. ಆದರೂ ಸರ್ಕಾರದ ಆದೇಶದಂತೆ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದರು.

"ಜಿಲ್ಲೆಯಲ್ಲಿರುವ ಪಾಕಿಸ್ತಾನಿ ಮಹಿಳೆಯರು ಎಲ್ಲರೂ ನವಾಯತ್ ಮುಸ್ಲಿಂ ಆಗಿದ್ದು, ಯಾರೂ ಕೂಡ ಭಾರತೀಯ ಪೌರತ್ವ ಪಡೆದಿಲ್ಲ. ಅಲ್ಲದೇ ಬಾಂಗ್ಲಾ ನುಸುಳುಕೋರರ ಬಗ್ಗೆಯೂ ನಿರಂತರವಾಗಿ ತಪಾಸಣೆ ಮಾಡುತ್ತಿದ್ದೇವೆ" ಎಂದು ತಿಳಿಸಿದರು.

ಮತ್ತೊಂದೆಡೆ, ಪಾಕಿಸ್ತಾನದ ಮಹಿಳೆಯೊಬ್ಬರು ಕೇಂದ್ರ ಸರ್ಕಾರದಿಂದ ಎಲ್​ಟಿವಿ ಶೈಕ್ಷಣಿಕ ವೀಸಾ (long term visa) ಪಡೆದು ಜಿಲ್ಲೆಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡ್ತಿದ್ದಾರೆ.‌ ಈ ಮಹಿಳೆ ವಿರುದ್ಧ ಕ್ರಮದ ಅವಶ್ಯಕತೆ ಇರುವುದಿಲ್ಲ ಎಂದು ದಾವಣಗೆರೆ ಎಸ್​​ಪಿ ಉಮಾಪ್ರಶಾಂತ್ ತಿಳಿಸಿದ್ದಾರೆ.

 

Category
ಕರಾವಳಿ ತರಂಗಿಣಿ