ಬೆಂಗಳೂರು: "ಮುಂದಿನ ಸಲ ಕಾಂಗ್ರೆಸ್ ಗೆಲ್ಲೋದಿಲ್ಲ, ಇವರ ನಂತರ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನಾವು ಬಂದ ನಂತರ ಈಗಿರುವ ಬಿಬಿಎಂಪಿಗೆ ಚುನಾವಣೆ ನಡೆಸುತ್ತೇವೆ" ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ರೇಟರ್ ಬೆಂಗಳೂರು ಕಾಯ್ದೆ ವಾಪಸ್ ಪಡೆಯುವ ಸುಳಿವು ಕೊಟ್ಟಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಕಾಯ್ದೆಗೆ ರಾಜ್ಯಪಾಲರ ಅನುಮತಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಇಲ್ಲದಿರೋದನ್ನು ಇದೆ ಅಂತ ತೋರಿಸಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಗ್ರೇಟರ್ ಬೆಂಗಳೂರು ಕಾಯ್ದೆ ಮೂಲಕ ಬಿಬಿಎಂಪಿ ಚುನಾವಣೆ ಇನ್ನಷ್ಟು ವಿಳಂಬ ಮಾಡಲು ಹೊರಟಿದ್ದಾರೆ. ಇವರು ಬಂದ ನಂತರ ಕನಿಷ್ಠ ರಸ್ತೆ ಗುಂಡಿ ಮುಚ್ಚಿಲ್ಲ, ಅಭಿವೃದ್ಧಿ ಇಲ್ವೇ ಇಲ್ಲ. ಇದೆಲ್ಲ ಡಿಕೆಶಿ ನಿರ್ಧಾರಗಳು. ಅವರೇ ಈ ಕಾಯ್ದೆ ತರಲು ಹೊರಟಿರುವ ಬಾಸ್. ಮುಂದಿನ ಸಲ ಇವರು ಗೆಲ್ಲೋದಿಲ್ಲ, ಇವರ ನಂತರ ನಾವೇ ಮತ್ತೆ ಅಧಿಕಾರಕ್ಕೆ ಬರ್ತೇವೆ. ನಾವು ಬಂದ ನಂತರ ಈಗಿರುವ ಬಿಬಿಎಂಪಿಗೆ ಚುನಾವಣೆ ನಡೆಸ್ತೇವೆ" ಎಂದು ತಿಳಿಸಿದರು.