image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಅಗ್ನಿಹೋತ್ರ ಕಾರ್ಯಕ್ರಮ ದಾಖಲೆ : 11,111 ಕುಟುಂಬಗಳ ಸದಸ್ಯರು ಅಗ್ನಿಹೋತ್ರದಲ್ಲಿ ಭಾಗಿ

ಅಗ್ನಿಹೋತ್ರ ಕಾರ್ಯಕ್ರಮ ದಾಖಲೆ : 11,111 ಕುಟುಂಬಗಳ ಸದಸ್ಯರು ಅಗ್ನಿಹೋತ್ರದಲ್ಲಿ ಭಾಗಿ

ಧಾರವಾಡ: ಯುನಿವರ್ಸಲ್​ ನಾಲೆಡ್ಜ್​​ ಟ್ರಸ್ಟ್​ ಪ್ರೇರಣೆಯಿಂದ ಗ್ರಾಮ ವಿಕಾಸ ಸಂಸ್ಥೆ ಆಯೋಜಿಸಿದ್ದ ಅಗ್ನಿಹೋತ್ರ ಕಾರ್ಯಕ್ರಮ ವಿಶ್ವ ದಾಖಲೆ ನಿರ್ಮಾಣ ಮಾಡಿತು. ಮನಸೂರಿನ ಹೊರವಲಯದ ಜಮೀನಿನಲ್ಲಿ ಕರ್ನಾಟಕ ಅಗ್ನಿಹೋತ್ರ ಸ್ಪೆಕ್ಟ್ಯಾಕ್ಯುಲರ್ ಕಾರ್ಯಕ್ರಮದಲ್ಲಿ 11,111 ಕುಟುಂಬಗಳ ಸದಸ್ಯರು ಸೂರ್ಯಾಸ್ತದ ಸಮಯಕ್ಕೆ ಅಗ್ನಿಹೋತ್ರದಲ್ಲಿ ಪಾಲ್ಗೊಂಡು ದಾಖಲೆ ನಿರ್ಮಿಸಿದರು.

ನೋಬೆಲ್ ವರ್ಲ್ಡ್ ರೆಕಾರ್ಡ್ ತಂಡದ ನಾಲ್ವರು ಸದಸ್ಯರು ದಾಖಲೆಯನ್ನು ಘೋಷಿಸಿದರು. ಗ್ರಾಮ ವಿಕಾಸ ಸೊಸೈಟಿಯ ಅಧ್ಯಕ್ಷ ಜಗದೀಶ ಶೇಖರ ನಾಯಿಕ ನೇತೃತ್ವದಲ್ಲಿ ಅಗ್ನಿಹೋತ್ರ ಕಾರ್ಯಕ್ರಮ‌ ನಡೆಯಿತು.

ಬಳಿಕ‌ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾಧ್ಯಮದವರೊಂದಿಗೆ ಮಾತನಾಡಿ, "ಅಗ್ನಿಹೋತ್ರ ಅನ್ನೋದು ಸನಾತನ ಪರಂಪರೆಯಲ್ಲಿ ಬಂದಿರುವುದು ಕೇವಲ ಹಿಂದೂಗಳ ಅಷ್ಟೇ ಅಲ್ಲದೇ ಮುಸ್ಲಿಂ, ಕ್ರೈಸ್ತರು ಸೇರಿದಂತೆ ವಿವಿಧ ಜನರು ಭಾಗವಹಿಸಿದ್ದು, ಭಾರತದ ಮೂಲ ಇರುವುದು ಎನರ್ಜಿಯ ಸೃಷ್ಟಿಯಲ್ಲಿದೆ. ಜಲದಲ್ಲಿದೆ. ಸೂರ್ಯನಲ್ಲಿದೆ. ಭೂಮಿಯಲ್ಲಿದೆ. ಪಾಸಿಟಿವ್ ಎನರ್ಜಿಯ ಜೊತೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡುವುದು ವೈಜ್ಞಾನಿಕವಾಗಿ ಸಿದ್ದಗೊಂಡಿರುವ ಸತ್ಯವಿದು" ಎಂದರು.

"ಅಗ್ನಿಹೋತ್ರ ನಮ್ಮ ಸನಾತನ ಪರಂಪರೆಯ ಪದ್ಧತಿಯಾಗಿದೆ. ಇಂತಹ ಪದ್ಧತಿಗಳ ಬಗ್ಗೆ ಹೆಚ್ಚಿನ ಅಧ್ಯಯನ ಆಗಬೇಕು. ಎಲ್ಲ ಧರ್ಮದವರೂ ಅಗ್ನಿ ಹೋತ್ರದಲ್ಲಿ ಭಾಗವಹಿಸಬಹುದು. ದೇಶದಲ್ಲಿ ಕೆಲ ಎಡಪಂಥಿಯರು ಟೀಕೆ ಮಾಡುತ್ತಾರೆ. ಹಿಂದೂ ಸಮಾಜದಲ್ಲಿ ಹುಟ್ಟಿದವರು. ಆದರೂ ಭಾರತದ ಆಚಾರ ವಿಚಾರ ಟೀಕೆ ಮಾಡತಾರೆ. ಅಯೋಧ್ಯೆ, ಕುಂಭಮೇಳದ ಬಗ್ಗೆ ಬಹಳ ಟೀಕೆ ಮಾಡಿದ್ದರು. ಬೇರೆಯವರ ಬಗ್ಗೆ ಹೀಗೆ ಮಾತನಾಡಲಿ ನೋಡೋಣಾ? ನಮ್ಮ ಬಗ್ಗೆಯೇ ಮಾತನಾಡುತ್ತಾರೆ. ಇಲ್ಲೇ ಇರ್ತಾರೆ. ಹಿಂದೂಗಳದ್ದು ಸಹಿಷ್ಣು ಗುಣ ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಹೀಗಾಗಿ ಅವರು ಮಾತನಾಡುತ್ತಾ ಇಲ್ಲೇ ಇರುತ್ತಾರೆ".

"ಹಿಂದೂ ಜೀವನದ ಪದ್ಧತಿ ಜಾತಿ, ಮತ, ಪಂಥದ ಪ್ರಶ್ನೆ ಬರೋದಿಲ್ಲ ದೇವರ ಪೂಜೆ ಮಾಡಿದರೂ ಓಕೆ ಮಾಡದಿದ್ದರೂ ಓಕೆ ಆದರೆ ಹಿಂದೂಗಳ ಟೀಕೆ ಮಾಡ್ತಾರೆ. ಅದರಿಂದ ಮುಸ್ಲಿಂ, ಕ್ರಿಶ್ಚಿಯನರ್ ಬೆಂಬಲ ಪಡಿತಾರೆ. ಇದು ಭಾರತೀಯ ಅಸ್ಮಿತೆ ದುರ್ಬಲಗೊಳಸಿವ ಪ್ರಯತ್ನ" ಎಂದರು.

 

Category
ಕರಾವಳಿ ತರಂಗಿಣಿ