image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರೇರಾ ರಿಜಿಸ್ಟ್ರಾರ್ ಅರ್ಜಿಗಳ ವಿಚಾರಣೆ ಅರ್ಹತೆ ಕುರಿತು ನಿರ್ಧರಿಸಲು ಸಾಧ್ಯವಿಲ್ಲ - ಹೈಕೋರ್ಟ್

ರೇರಾ ರಿಜಿಸ್ಟ್ರಾರ್ ಅರ್ಜಿಗಳ ವಿಚಾರಣೆ ಅರ್ಹತೆ ಕುರಿತು ನಿರ್ಧರಿಸಲು ಸಾಧ್ಯವಿಲ್ಲ - ಹೈಕೋರ್ಟ್

ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (RERA) (KRARA)ದಲ್ಲಿ ದಾಖಲಾಗುವ ಅರ್ಜಿಗಳ ವಿಚಾರಣೆಗೆ ಅರ್ಹವೆಂದು ರಿಜಿಸ್ಟ್ರಾರ್(registrar)​ ಅವರು ನಿರ್ಧರಿಸುವುದಕ್ಕೆ ಸಾಧ್ಯವಿಲ್ಲ. ಪ್ರಾಧಿಕಾರದ ಸದಸ್ಯರು ಮಾತ್ರ ನಿರ್ಧರಿಸಬಹುದಾಗಿದೆ ಎಂದು ಹೈಕೋರ್ಟ್(high court)​ ತಿಳಿಸಿದೆ.

ರಿಯಲ್ ​ಎಸ್ಟೇಟ್​ ಡೆವಲಪರ್(real estate developer)​ ವಿರುದ್ಧದ ದೂರನ್ನು ತಿರಸ್ಕರಿಸಿ ರೇರಾ ರಿಜಿಸ್ಟ್ರಾರ್​ ಅವರು ಇ-ಮೇಲ್​(e-mail) ಮೂಲಕ ತಿಳಿಸಿದ್ದ ಆದೇಶವನ್ನು ಪ್ರಶ್ನಿಸಿ ಅಮಿತ್​ ಗರ್ಗ್​ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ರೇರಾದಲ್ಲಿ ಸಲ್ಲಿಕೆಯಾಗುವಂತಹ ಅರ್ಜಿಗಳನ್ನು ರೇರಾ ಪ್ರಾಧಿಕಾರದ ಮುಂದೆ ಇಡಬೇಕಾಗುತ್ತದೆ. ದೂರು ವಿಚಾರಣೆಗೆ ಅರ್ಹವಿದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರದ ಸದಸ್ಯರು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಆದರೆ, ರೇರಾದ ರಿಜಿಸ್ಟ್ರಾರ್​ ಅವರಿಗೆ ಅರ್ಜಿಯನ್ನು ತಿರಸ್ಕರಿಸುವ ಮತ್ತು ಅರ್ಜಿ ವಿಚಾರಣೆಗೆ ಅರ್ಹವಿಲ್ಲ ಎಂಬುದಾಗಿ ಆದೇಶಿಸುವುದಕ್ಕೆ ಅಧಿಕಾರವಿಲ್ಲ ಎಂದು ಪೀಠ ಹೇಳಿದೆ.

ಹೀಗಾಗಿ ಈ ಅಂಶವನ್ನು ರೇರಾ ಸದಸ್ಯರು ಗಂಭೀರವಾಗಿ ಪರಿಗಣಿಸಬೇಕು. ನಿರ್ವಹಣೆಗೆ ಸಂಬಂಧಿಸಿದಂತೆಯೂ ತೀರ್ಪು ನೀಡುವ ಅಧಿಕಾರವನ್ನು ಶಾಸನದಿಂದ(legislation) ರಿಜಿಸ್ಟ್ರಿಗೆ ನೀಡಲಾಗಿಲ್ಲ. ಹಾಗಿರುವಾಗ, ವಿಚಾರಣೆಯನ್ನು ಕೊನೆಗೊಳಿಸುವ ಇ-ಮೇಲ್​ ಮೇಲ್ನೋಟಕ್ಕೆ ಕಾನೂನುಬಾಹಿರ(illegal) ಎಂದು ಪೀಠ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಿಜಿಸ್ಟ್ರಾರ್​ ಅವರಿಗೆ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಅರ್ಹವಿಲ್ಲ ಎಂಬುದಾಗಿ ಆದೇಶ ನೀಡುವುದಕ್ಕೆ ಯಾವುದೇ ಅಧಿಕಾರವಿಲ್ಲ. ಅರ್ಜಿ ವಿಚಾರಣೆಗೆ ಅರ್ಹವಿಲ್ಲದಿದ್ದರೂ, ಅದನ್ನು ರೇರಾ ಸದಸ್ಯರು ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಪೀಠಕ್ಕೆ ವಿವರಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ರೇರಾ ಪರ ವಕೀಲರು, ಅರ್ಜಿದಾರರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಅರ್ಹವಿಲ್ಲ ಎಂದು ಇ-ಮೇಲ್​ ಮೂಲಕ ಸಂವಹನ ಮಾಡಲಾಗಿದೆ. ಆದ್ದರಿಂದ ಅರ್ಜಿ ವಿಚಾರಣೆಗೆ ಅರ್ಹವಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.

ಸುಪ್ರೀಂಕೋರ್ಟ್​ನ ಆದೇಶಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ರಿಜಿಸ್ಟ್ರಾರ್​ ಅವರ ಕಾರ್ಯಗಳು ಸಂಪೂರ್ಣವಾಗಿ ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಿಸಿದ್ದಾಗಿವೆ. ನ್ಯಾಯಾಂಗದ ಕಾರ್ಯವಾಗಿರುವ ಅರ್ಜಿಯ ನಿರ್ವಹಣೆಯನ್ನು ನಿರ್ಧರಿಸಲು ಅವರಿಗೆ ಅಧಿಕಾರವಿಲ್ಲ ಎಂದು ತಿಳಿಸಿದ ನ್ಯಾಯಪೀಠ, ಇ-ಮೇಲ್​ ಮೂಲಕ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ.

Category
ಕರಾವಳಿ ತರಂಗಿಣಿ