image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ಸಂಚಾರ ನಿಷೇಧವನ್ನು ಮುಂದುವರಿಸಲು ಒತ್ತಾಯಿಸಿ ಪರಿಸರವಾದಿಗಳ ಅಭಿಯಾನ

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ಸಂಚಾರ ನಿಷೇಧವನ್ನು ಮುಂದುವರಿಸಲು ಒತ್ತಾಯಿಸಿ ಪರಿಸರವಾದಿಗಳ ಅಭಿಯಾನ

ಚಾಮರಾಜನಗರ: ಬಂಡೀಪುರದಲ್ಲಿ (bandipur) ರಾತ್ರಿ ಸಂಚಾರ ನಿಷೇಧವನ್ನು ಮುಂದುವರಿಸಲು ಒತ್ತಾಯಿಸಿ ಪರಿಸರವಾದಿಗಳು(environment) ಅಭಿಯಾನ ಆರಂಭಿಸಿದ್ದಾರೆ.

ಇದರ ನಡುವೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಚೆಕ್​ಪೋಸ್ಟ್​ನಲ್ಲಿ(check post) ಪರಿಸರವಾದಿ ಜೋಸೆಫ್ ಹೂವರ್, ರೈತ ಮುಖಂಡ ನಾಗಾರ್ಜುನ ನೇತೃತ್ವದಲ್ಲಿ ಬಂಡೀಪುರದಲ್ಲಿ ರಾತ್ರಿ‌ ಸಂಚಾರ ನಿರ್ಬಂಧ ತೆರವು ಬೇಡ ಎಂದು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಸಂಸದೆ ಪ್ರಿಯಾಂಕಾ ಗಾಂಧಿ, ಕೇರಳಿಗರ ಒತ್ತಡಕ್ಕೆ ಮಣಿಯದೇ ರಾಜ್ಯದ ಹಿತವನ್ನು ಕಾಪಾಡಬೇಕು, ರಾತ್ರಿ ಸಂಚಾರ ನಿರ್ಬಂಧದಲ್ಲಿ ಯಾವುದೇ ಸಡಿಲಿಕೆ ಆಗಬಾರದು ಎಂದು ಆಗ್ರಹಿಸಿದರು.

ಪರಿಸರವಾದಿ ಜೋಸೆಫ್ ಹೂವರ್ ಮಾತನಾಡಿ, ಬಂಡೀಪುರದಲ್ಲಿ ರಾತ್ರಿ ಸಂಚಾರ (night travel) ನಿರ್ಬಂಧ ತೆರವಿಗೆ ಸಾಕಷ್ಟು ಲಾಬಿ ನಡೆಯುತ್ತಿದೆ‌‌. ಈಗಾಗಲೇ, ಪರ್ಯಾಯವಾಗಿ ರಸ್ತೆ ಇದ್ದರೂ ಕೂಡ ರಾಷ್ಟ್ರೀಯ ಹೆದ್ದಾರಿ 766(NH766)ರಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ‌‌. ರಾತ್ರಿ ಸಂಚಾರ ನಿರ್ಬಂಧ ಮುಂದುವರೆಯಬೇಕು. ರಾಜ್ಯ ಸರ್ಕಾರವು ಯಾವುದೇ ಲಾಬಿಗೆ ಮಣಿಯದೇ ನಾಡಿನ ಅರಣ್ಯ, ವನ್ಯಜೀವಿ ರಕ್ಷಣೆಗೆ ಮುಂದಾಗಬೇಕು. ಕರ್ನಾಟಕ ಮತ್ತು ಕೇರಳ ಚೆಕ್​​ಪೋಸ್ಟ್​ನಲ್ಲಿ ಇಂದು ನೈಟ್ ಟ್ರಾಫಿಕ್ ಬೇಡ ಅಭಿಯಾನ ಆರಂಭಗೊಂಡಿದೆ. ಇದನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.

ಅಭಿಯಾನದಲ್ಲಿ ರೈತರು(fqrmers), ಪರಿಸರವಾದಿಗಳು, ಪರಿಸರ ಪ್ರೇಮಿಗಳು ಭಾಗಿಯಾಗಿದ್ದರು.

Category
ಕರಾವಳಿ ತರಂಗಿಣಿ