ಬೆಂಗಳೂರು: ಇತಿಹಾಸ ಮತ್ತು ಚಮತ್ಕಾರ ಒಂದಡೆ ಸಮ್ಮಿಳಿತಗೊಂಡಿದೆ. ಬೆಂಗಳೂರಿನಲ್ಲಿ ನಯಾಗರಾ ಜಲಪಾತ ಅನಾವರಣಗೊಳಿಸಲಾಗಿದೆ. ವಿಶ್ವಪ್ರಸಿದ್ಧ ನೈಸರ್ಗಿಕ ಅದ್ಭುತದ 200 ಅಡಿ ಉದ್ದ ಮತ್ತು 25 ಅಡಿ ಎತ್ತರದ ಪ್ರತಿಕೃತಿ ನಿರ್ಮಾಣ ಮಾಡಲಾಗಿದೆ.
ಚಾಮರಾಜಪೇಟೆಯ ಇಟಿಎ ಮಾಲ್ ಬಳಿಯ ಐತಿಹಾಸಿಕ ಬಿನ್ನಿ ಮಿಲ್ ಮೈದಾನದಲ್ಲಿ ನೆಲೆಗೊಂಡಿರುವ ಈ ಅದ್ಭುತ ಪ್ರತಿಕೃತಿ ನಿರ್ಮಾಣ ಮಾಡಲಾಗಿದ್ದು, ಜನಮನ ಸೂರೆಗೊಳ್ಳುತ್ತಿದೆ. ಎರಡು ತಿಂಗಳ ಅವಧಿಯ ಮಹೋತ್ಸವ ಈಗ ನೋಡುಗರ ಕಣ್ಮನ ಸೆಳೆಯುತ್ತಿದೆ. ವಿಸ್ಮಯ - ಸ್ಫೂರ್ತಿದಾಯಕ ಮನರಂಜನೆಯ ಭಾಗವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಬೋರ್ಗರೆವ ನೀರಿನ ಕ್ಯಾಸ್ಕೇಡ್, ಮಂಜಿನ ಹನಿಗಳು ಮತ್ತು ಬೆರಗುಗೊಳಿಸುವ ಬೆಳಕಿನ ಪ್ರದರ್ಶನದೊಂದಿಗೆ ಎಲ್ಲರ ಚಿತ್ತವನ್ನು ಚೋರಿ ಮಾಡುವಂತೆ ನಿರ್ಮಾಣ ಮಾಡಲಾಗಿದೆ.
ಮೂಲ ಜಲಪಾತದ ಉಸಿರು ಮತ್ತು ಸೌಂದರ್ಯವನ್ನು ಪುನರಾವರ್ತಿಸುವಂತೆ ಮಾಡುವ ಸಲುವಾಗಿ ಪ್ರತಿ ಗಂಟೆಗೆ 1 ಲಕ್ಷ ಲೀಟರ್ ನೀರನ್ನು ಪಂಪ್ ಮಾಡಲಾಗುತ್ತದೆ. ನೀರಿನ ಭೋರ್ಗರೆತ, ಎಲೆಕ್ಟ್ರಿಕ್ ಬ್ಲೂಸ್‌ನಿಂದ ಉರಿಯುತ್ತಿರುವ ಕೆಂಪು ಬಣ್ಣಕ್ಕೆ ಬದಲಾಗುವ ಡೈನಾಮಿಕ್ ಲೈಟಿಂಗ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದು ಸಾಟಿಯಿಲ್ಲದ ದೃಶ್ಯವನ್ನು ಸೃಷ್ಟಿಸುವಂತೆ ಮಾಡುತ್ತಿದೆ.