image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವಾಯುವ್ಯ KSRTCಗೆ 700 ನೂತನ ಬಸ್ಸುಗಳನ್ನು ನೀಡುವುದಾಗಿ ಸಚಿವ ರಾಮಲಿಂಗಾರೆಡ್ಡಿ ಘೋಷಣೆ

ವಾಯುವ್ಯ KSRTCಗೆ 700 ನೂತನ ಬಸ್ಸುಗಳನ್ನು ನೀಡುವುದಾಗಿ ಸಚಿವ ರಾಮಲಿಂಗಾರೆಡ್ಡಿ ಘೋಷಣೆ

ಉತ್ತರ ಕನ್ನಡ : 'ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 700 ನೂತನ ಬಸ್ಸುಗಳನ್ನು ನೀಡಲಾಗುತ್ತದೆ' ಎಂದು ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರಕನ್ನಡ ವಿಭಾಗದ ಶಿರಸಿ ಕೇಂದ್ರ ಬಸ್​ ನಿಲ್ದಾಣ ಮತ್ತು ಸಾರಿಗೆ ಇಲಾಖೆಯ ಶಿರಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೂತನ ಕಟ್ಟಡವನ್ನು ಉದ್ಘಾಟಿಸಿ ಸಚಿವರು ಮಾತನಾಡಿದ ಅವರು, 

"ಸಾರಿಗೆ ಸಂಸ್ಥೆಗೆ ಶಕ್ತಿ ನೀಡಲು ರಾಜ್ಯ ಸರ್ಕಾರ 2 ಸಾವಿರ ಬಸ್‌ಗಳ ಖರೀದಿಗೆ ಬಜೆಟ್‌ನಲ್ಲಿ ಅನುದಾನ ನೀಡಿದೆ. ಮೊದಲ ಹಂತದಲ್ಲಿ 300 ಬಸ್ಸುಗಳನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ನೀಡಲು ಸೂಚನೆ ನೀಡಿದ್ದೇನೆ. ಎರಡನೆಯ ಹಂತದಲ್ಲಿ ಹೆಚ್ಚಿವರಿಯಾಗಿ 400 ಬಸ್ಸುಗಳನ್ನು ನೀಡುತ್ತೇನೆ. ಸಂಸ್ಥೆಯು 6 ಜಿಲ್ಲೆಗಳನ್ನು ಒಳಗೊಂಡಿದ್ದು, ಜಿಲ್ಲೆಗೆ 100 ಬಸ್ಸುಗಳಿಗೆ ಹೆಚ್ಚುವರಿಯಾಗಿ 100 ಬಸ್ಸು ಸೇರಿ ಒಟ್ಟು 700 ಬಸ್ಸು ನೀಡಲಾಗುತ್ತದೆ" ಎಂದರು.

ಶಕ್ತಿ ಯೋಜನೆ ಪ್ರಾರಂಭವಾದ ನಂತರ 1 ಕೋಟಿಗಿಂತ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಇಲ್ಲಿಯವರೆಗೆ 426 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕಳೆದ 4 ವರ್ಷಗಳಿಂದ ಬಸ್ ಖರೀದಿಯಾಗಿರಲಿಲ್ಲ. ಚಾಲಕ-ನಿರ್ವಾಹಕರು, ಮೆಕ್ಯಾನಿಕಲ್ ಮತ್ತು ಉಳಿದ ಸಿಬ್ಬಂದಿಗಳು 2016 ರಲ್ಲಿ ನೇಮಕಾತಿ ಆದ ನಂತರ ನೇಮಕಾತಿ ಆಗಿಲ್ಲ. ನೇಮಕಾತಿಗೆ ಸರ್ಕಾರ ಒಪ್ಪಿಗೆ ನೀಡಿದ್ದು, 9 ಸಾವಿರ ಸಿಬ್ಬಂದಿಗಳ ನೇಮಕಾತಿ ಆಗಲಿದೆ. ದೂರದ ಊರುಗಳಿಗೆ ತೆರಳಲು ಬಸ್ ಇಲ್ಲ. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಖಾಸಗಿ ಬಸ್‌ಗಳನ್ನು ಅವಲಂಬಿಸಬೇಕಾಗಿದೆ. ಆದ್ದರಿಂದ 30 ಐಷಾರಾಮಿ ಬಸ್‌ಗಳ ಖರೀದಿಗೆ ಟೆಂಡರ್ ಆಗಿದೆ".

"ನನ್ನ ಇಲಾಖೆಯಲ್ಲಿ 1 ಲಕ್ಷ ನೌಕರರಿದ್ದಾರೆ. ನಮ್ಮ ನೌಕರರ ಯೋಗಕ್ಷೇಮ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಆದ್ದರಿಂದ ಪ್ರತಿ ವರ್ಷಕ್ಕೆ 850ರೂ. ಪಾವತಿ ಜತೆ ನೌಕರರ ಕುಟುಂಬಕ್ಕೆ ಮತ್ತು ಅವರ ತಂದೆ-ತಾಯಿಗೆ ಸೇರಿ ಉಚಿತ ಆರೋಗ್ಯ ಸೇವೆ ಕಲ್ಪಿಸಿದ್ದೇವೆ" ಎಂದು ತಿಳಿಸಿದರು.

 

Category
ಕರಾವಳಿ ತರಂಗಿಣಿ