image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಅಂಡರ್ ಗ್ರೌಂಡ್ ಡಸ್ಟ್ ಬಿನ್​​ಗಳನ್ನು ಅಳವಡಿಸಿದ ಬೆಳಗಾವಿ ನಗರ ಪಾಲಿಕೆ

ಅಂಡರ್ ಗ್ರೌಂಡ್ ಡಸ್ಟ್ ಬಿನ್​​ಗಳನ್ನು ಅಳವಡಿಸಿದ ಬೆಳಗಾವಿ ನಗರ ಪಾಲಿಕೆ

ಬೆಳಗಾವಿ: ಕಸ ವಿಲೇವಾರಿ ಮತ್ತು ನಗರವನ್ನು ಸ್ವಚ್ಛವಾಗಿಡಲು ಬೆಳಗಾವಿ ಮಹಾನಗರ ಪಾಲಿಕೆ ಹಲವು ಕ್ರಮಗಳನ್ನು ಕೈಗೊಂಡಿದೆ. ಅದರ ಭಾಗವಾಗಿ ಅಂಡರ್ ಗ್ರೌಂಡ್ ಡಸ್ಟ್ ಬಿನ್​​ಗಳನ್ನು ನಗರದ ವಿವಿಧೆಡೆ ಅಳವಡಿಸಿದೆ. ಗುಜರಾತ್​​ನ ಸೂರತ್ ಬಿಟ್ಟರೆ ಬೆಳಗಾವಿಯಲ್ಲಿ ಈ ಅಂಡರ್ ಗ್ರೌಂಡ್ ಡಸ್ಟ್ ಬಿನ್ ಅಳವಡಿಸಲಾಗಿದೆ.

ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯಡಿ ಮೊದಲ ಹಂತದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ 24 ಕಡೆಗಳಲ್ಲಿ ಈ ಅಂಡರ್‌ ಗ್ರೌಂಡ್ ಡಸ್ಟ್‌ ಬಿನ್‌ಗಳನ್ನು ಕಳೆದ ಎರಡು ವರ್ಷಗಳ ಹಿಂದೆ ಅಳವಡಿಸಿದ್ದು, ಅವು ಕಾರ್ಯನಿರ್ವಹಿಸುತ್ತಿವೆ. ಇನ್ನು ಉತ್ತರ ಕ್ಷೇತ್ರದಲ್ಲೂ ಶೀಘ್ರದಲ್ಲಿ ಈ ಡಸ್ಟ್ ಬಿನ್ ಅಳವಡಿಕೆಗೆ ಪಾಲಿಕೆ ಸಿದ್ಧತೆ ನಡೆಸಿದೆ.

ಸಾರ್ವಜನಿಕರು ಡಸ್ಟ್ ಬಿನ್‌ಗಳಲ್ಲಿ ಹಾಕುವ ಕಸ ವಿಲೇವಾರಿಗೆ 1.85 ಕೋಟಿ ರೂ. ವೆಚ್ಚದಲ್ಲಿ ಹೈಡ್ರೋಲಿಕ್ ಕ್ರೇನ್ ಆಧಾರಿತ ವಾಹನ ಖರೀದಿಸಲಾಗಿದ್ದು, ಅತ್ಯಾಧುನಿಕ ಬೆಲಿಂಗ್ ಮಷಿನ್, ಪ್ಲಾಸ್ಟಿಕ್ ಸ್ಟಡ್ಡಿಂಗ್ ಮಶಿನ್, ಜೆಸಿಬಿ ಮಾದರಿಯ ಲೋಡರ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಮೊದಲ ಹಂತದಲ್ಲಿ ದಕ್ಷಿಣ ಕ್ಷೇತ್ರದ ಶಹಾಪುರ ಆನಂದವಾಡಿ ಪಿ.ಕೆ. ಕ್ವಾಟರ್ಸ್, ಖಾಸಬಾಗ ಹಳೇ ಪಿ.ಬಿ. ರಸ್ತೆ, ವಡಗಾವಿ ಓಂಕಾರ ನಗರ, ಶಿವಚರಿತ್ರೆ ರಸ್ತೆ, ಉದ್ಯಮಬಾಗ ಉತ್ಸವ ಹೋಟೆಲ್ ಬಳಿ, ಶಹಾಪುರ ಸ್ಮಶಾನ ರಸ್ತೆ, ಧಾಮನೆ ರಸ್ತೆ ವಡಗಾವಿ, ಅನಗೋಳ ಅಂಬೇಡ್ಕ‌ರ್ ಗಲ್ಲಿ, ಜಟಪಟ ಗಲ್ಲಿ, ಬಬಲೆ ಗಲ್ಲಿ, ಸಂತ ರೋಹಿದಾಸ ಕಾಲನಿ ಮಜಗಾಂವ ರಸ್ತೆ, ಮಜಗಾಂವ ಕನ್ನಡ ಸರ್ಕಾರಿ ಶಾಲೆ, ಭಾಗ್ಯ ನಗರ 4ನೇ ಕ್ರಾಸ್, ಅನಗೋಳ ನಾಕಾ, ಖಾನಾಪುರ ಮುಖ್ಯ ರಸ್ತೆ ಇಂಡಿಯನ್ ಆಯಿಲ್ ಹಿಂದೆ, ಟಿಳಕವಾಡಿ ಬುಧವಾರ ಪೇಟೆ, ಗೋವಾವೇಸ್, ಜಕ್ಕೇರಿ ಹೊಂಡ, ಹಿಂದವಾಡಿ ಕುಸ್ತಿ ಅಖಾಡ, ಹಿಂದವಾಡಿ ಲಿಂಗಾಯತ ಸ್ಮಶಾನ, ಶಾಂತಿ ನಗರ ನಾಲಾ ಹಿಂದೆ, ಮಂಡೋಳಿ ರಸ್ತೆ ಸೇರಿ 24 ಕಡೆ ಅಂಡರ್‌ ಗ್ರೌಂಡ್ ಡಸ್ಟ್‌ ಬಿನ್ ಅಳವಡಿಸಲಾಗಿದೆ.

 

Category
ಕರಾವಳಿ ತರಂಗಿಣಿ