image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಂವಿಧಾನ ಬದಲಾವಣೆ ಮಾಡಬೇಕು ಅಂತಾ ನಾನು ಹೇಳಿಲ್ಲ. ಬಿಜೆಪಿಯುವರು ಸುಳ್ಳು ಹೇಳುತ್ತಿದ್ದಾರೆ : ಡಿ ಕೆ ಶಿವಕುಮಾರ್

ಸಂವಿಧಾನ ಬದಲಾವಣೆ ಮಾಡಬೇಕು ಅಂತಾ ನಾನು ಹೇಳಿಲ್ಲ. ಬಿಜೆಪಿಯುವರು ಸುಳ್ಳು ಹೇಳುತ್ತಿದ್ದಾರೆ : ಡಿ ಕೆ ಶಿವಕುಮಾರ್

ಬೆಂಗಳೂರು: ಸಂವಿಧಾನ ಬದಲಾವಣೆ ಮಾಡಬೇಕು ಎಂದು ನಾನು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚುತ್ತಿದ್ದಾರೆ. ಸಂವಿಧಾನ ರಕ್ಷಣೆ ನಮ್ಮ ಪಕ್ಷದ ಜನ್ಮ ಸಿದ್ಧ ಹಕ್ಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸುಳ್ಳು ಹೇಳುತ್ತಿದೆ. ಸಂವಿಧಾನ ಬದಲಾವಣೆ ಬಗ್ಗೆ ನಾನು ಎಲ್ಲಿ ಹೇಳಿದ್ದೇನೆ?. ಸಾಕಷ್ಟು ಸಲ ಸಂವಿಧಾನ ಬದಲಾವಣೆ ಆಗಿದೆ, ಆದರೆ ಬದಲಾವಣೆ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚುತ್ತಿದ್ದಾರೆ. ನಾನು ಕಾನೂನು ಹೋರಾಟ ಮಾಡುತ್ತೇನೆ. ಸಂವಿಧಾನ ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು. ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡೋದು, ಸುಳ್ಳು ಹೇಳೋದು ಅವರ ಕೆಲಸವಾಗಿದೆ. ಜೆ.ಪಿ‌. ನಡ್ಡಾಗಿಂತ ನಾನು ಸೆನ್ಸಿಬಲ್ ರಾಜಕಾರಣಿ. ನಾನು‌ 36 ವರ್ಷದಿಂದ ಶಾಸಕ ಆಗಿದ್ದೇನೆ. ನಮ್ಮದು ರಾಷ್ಟ್ರೀಯ ಪಕ್ಷ. ನನಗೆ ಗೊತ್ತಿದೆ ಸಂವಿಧಾನ ಏನು?. ಸಂವಿಧಾನ ಏನು ಹೇಳುತ್ತೆ ಅನ್ನೋ ಪರಿಜ್ಞಾನ ಇದೆ. ನನ್ನ ಹೆಸರನ್ನು ಎಲ್ಲ ಕಡೆ ತೆಗೆದುಕೊಂಡರೆ ತೆಗೆದುಕೊಳ್ಳಲಿ ಎಂದು ತಿಳಿಸಿದರು. 

 ನಾನು ಜೆ.ಪಿ. ನಡ್ಡಾ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ. ಬಿಜೆಪಿ ಅವರು ಮಿಸ್ ಗೈಡ್ ಮಾಡ್ತಿದ್ದಾರೆ. ಅವರ ಗ್ರಾಫ್ ಇಳಿಯುತ್ತಿದೆ. ನನಗೆ ಬೇಸಿಕ್ ಕಾಮನ್ ಸೆನ್ಸ್ ಇದೆ. ಸಾಕಷ್ಟು ಸಲ ಸಂವಿಧಾನ ಬದಲಾವಣೆ ಆಗಿದೆ ಅಂತ ಹೇಳಿದ್ದೇನೆ. ಆದರೆ ಅವರು ಸುಳ್ಳು ಹೇಳುತ್ತಿದ್ದಾರೆ, ನನ್ನ ಹೇಳಿಕೆಯನ್ನು ಮಿಸ್ ಕೋಟ್ ಮಾಡುತ್ತಿದ್ದಾರೆ. ನಾನು ಈ ವಿಷಯಗಳ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಅವರು ನನ್ನ ಹೆಸರನ್ನು ಎಲ್ಲಾ ಕಡೆ ದುರುಪಯೋಗ ಮಾಡುತ್ತಿದ್ದಾರೆ. ಬಿಜೆಪಿಯವರು ದೇಶವನ್ನು ಮಿಸ್ ಗೈಡ್ ಮಾಡಿದ್ದಾರೆ. ಫೇಕ್ ನ್ಯೂಸ್ ಮಾಡುವುದರಲ್ಲಿ ಅವರು ಪರಿಣಿತರು. ಮೀಸಲಾತಿ ಕುರಿತು ಹಲವು ರಾಜ್ಯಗಳಲ್ಲಿ ಕೋರ್ಟ್ ಮೊರೆ ಹೋಗಲಾಗಿದೆ ಅಷ್ಟೇ. ಗಾಂಧಿ ಕುಟುಂಬದ ಹೆಸರು ಹೇಳದಿದ್ರೆ ಅವರಿಗೆ ಸಮಾಧಾನ ಆಗಲ್ಲ. ಏನು ಕಾನೂನು ಹೋರಾಟ ಮಾಡಬೇಕೋ ಮಾಡುತ್ತೇನೆ. ಬಿಜೆಪಿಯವರ ಆರೋಪ ಅಪ್ಪಟ ಸುಳ್ಳು ಎಂದು ಡಿಸಿಎಂ ಆರೋಪಿಸಿದರು.

Category
ಕರಾವಳಿ ತರಂಗಿಣಿ