ಬೆಂಗಳೂರು: ಸರ್ಕಾರಿ ಸಿಬ್ಬಂದಿಗಳಿಗೆ ವಿವಿಧ ಬ್ಯಾಂಕ್‌ಗಳು ಒದಗಿಸುವ ಸಂಬಳ ಪ್ಯಾಕೇಜ್‌ಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದನ್ನು ಕಡ್ಡಾಯಗೊಳಿಸಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.
ಸರ್ಕಾರಿ ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ವಿವಿಧ ಬ್ಯಾಂಕ್‌ಗಳು ಒದಗಿಸುವ "ಸಂಬಳ ಪ್ಯಾಕೇಜ್‌ಗಳ" ಅಡಿಯಲ್ಲಿ ಖಾತೆಗಳನ್ನು ತೆರೆಯುವುದು, ಆಯ್ಕೆ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಬ್ಯಾಂಕ್‌ಗಳು ಅಥವಾ ಅಂಚೆ ಕಚೇರಿಗಳು ನೀಡುವ PMJJBY ಮತ್ತು PMSBY ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವಿಮಾ ರಕ್ಷಣೆಯನ್ನು ಪಡೆಯಲು ಅಧಿಕಾರಿ/ನೌಕರರಿಗೆ ಸಂಬಂಧಿತ ಇಲಾಖೆ ಉತ್ತೇಜಿಸಬೇಕು. ಬ್ಯಾಂಕ್‌ಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಅಧಿಕಾರಿ/ನೌಕರರನ್ನು ಸಂಬಂಧಪಟ್ಟ ಇಲಾಖೆ ಪ್ರೋತ್ಸಾಹಿಸುವಂತೆ ಆದೇಶಿಸಲಾಗಿದೆ.
ಇತ್ತೀಚೆಗೆ, ಅನೇಕ ಬ್ಯಾಂಕ್‌ಗಳು ಸರ್ಕಾರಿ ಅಧಿಕಾರಿಗಳು/ನೌಕರರು ತಮ್ಮ ಉಳಿತಾಯ ಬ್ಯಾಂಕ್ ಖಾತೆಗಳನ್ನು ತೆರೆಯಲು ಆಕರ್ಷಕ "ಸಂಬಳ ಪ್ರಾಕೇಜ್‌ಗಳನ್ನು" ನೀಡುತ್ತಿವೆ. ಇದರಲ್ಲಿ ಅಧಿಕಾರಿಗಳು/ನೌಕರರಿಗೆ ವಿವಿಧ ರಿಯಾಯಿತಿಗಳು ಮತ್ತು ಅಧಿಕಾರಿ/ನೌಕರರ ಕುಟುಂಬಗಳಿಗೆ ಹೆಚ್ಚುವರಿ ಪ್ರಯೋಜನಗಳು ಸೇರಿವೆ. ಈ ಸಂಬಳ ಪ್ಯಾಕೇಜ್‌ಗಳಲ್ಲಿ, ಬ್ಯಾಂಕ್ಗಳ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವನ್ನು ಕಡ್ಡಾಯಗೊಳಿಸದೇ ಇರುವುದು, 2 ಅಥವಾ 3 ತಿಂಗಳ ನಿವ್ವಳ ವೇತನವನ್ನು ಓವರ್‌ಡ್ರಾಫ್ಟ್ (ಮುಂಗಡ) ಆಗಿ ನೀಡುವುದು, ವಸತಿ ಸಾಲಗಳ ಮೇಲೆ ಕಡಿಮೆ ಬಡ್ಡಿದರವನ್ನು ವಿಧಿಸುವುದು, ಉಚಿತ NEFT/RTGS ವರ್ಗಾವಣೆಗಳು, ಉಚಿತ ಡಿಮ್ಯಾಂಡ್ ಡ್ರಾಫ್ಟ್ಗಳು, ಉಚಿತ ರುಪೇ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ವಿಮೆ, ಬ್ಯಾಗೇಜ್ ವಿಮೆಗಳನ್ನು ನೀಡುವುದು ಮತ್ತು ಲಾಕರ್ ಬಾಡಿಗೆಯಲ್ಲಿ ರಿಯಾಯಿತಿ ಇತ್ಯಾದಿಗಳನ್ನು ನೀಡುವುದು ಸೇರಿವೆ.