image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಹನಿಟ್ರ್ಯಾಪ್ ಮಾಡೋದರ ಬಗ್ಗೆ ಸದನದಲ್ಲಿ ಚರ್ಚೆ ಆಗಿದೆ. ಇದಕ್ಕೆ ಕಾಯ್ದೆ, ತಿದ್ದುಪಡಿ ಆಗಬೇಕು -ಶಾಸಕ ವಿನಯ್ ಕುಲಕರ್ಣಿ

ಹನಿಟ್ರ್ಯಾಪ್ ಮಾಡೋದರ ಬಗ್ಗೆ ಸದನದಲ್ಲಿ ಚರ್ಚೆ ಆಗಿದೆ. ಇದಕ್ಕೆ ಕಾಯ್ದೆ, ತಿದ್ದುಪಡಿ ಆಗಬೇಕು -ಶಾಸಕ ವಿನಯ್ ಕುಲಕರ್ಣಿ

ಧಾರವಾಡ: "ಹನಿಟ್ರ್ಯಾಪ್ ಮಾಡೋದು ಕೆಳಮಟ್ಟದ ರಾಜಕಾರಣವಾಗಿದೆ" ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು.

ಧಾರವಾಡ ಹೊರವಲಯದ ಕಿತ್ತೂರಿನಲ್ಲಿ ಮಾತನಾಡಿದ ಅವರು, "ನಮ್ಮನ್ನು ಜನ ಸಾಮಾನ್ಯರು ನೋಡುತ್ತಿದ್ದಾರೆ. ಹನಿಟ್ರ್ಯಾಪ್ ಬಗ್ಗೆ ನನಗೆ ಅಷ್ಟೊಂದು ಮಾಹಿತಿ ಇಲ್ಲ. ರಾಜಕಾರಣದಲ್ಲಿ ಮಹಿಳೆಯರನ್ನು ಮುಂದೆ ಬಿಟ್ಟು ಇಂತಹ ಕೆಲಸಗಳು ನಡೆಯುತ್ತಿವೆ. ಹನಿಟ್ರ್ಯಾಪ್ ಮಾಡೋದರ ಬಗ್ಗೆ ಸದನದಲ್ಲಿ ಚರ್ಚೆ ಆಗಿದೆ. ಇದಕ್ಕೆ ಕಾಯ್ದೆ, ತಿದ್ದುಪಡಿ ಆಗಬೇಕು" ಎಂದು ಆಗ್ರಹಿಸಿದರು.

"ಪತ್ನಿ ಶಿವಲೀಲಾ ಕುಲಕರ್ಣಿ ಪ್ರೋಟೋಕಾಲ್ ಉಲ್ಲಂಘಿಸಿದ ಆರೋಪದ ಬಗ್ಗೆ ಮಾತನಾಡಿ, ನಾನು ಕ್ಷೇತ್ರದಲ್ಲಿ ಇದ್ದಿದ್ದರೆ ಹೇಳುತ್ತಿದ್ದೆ. ನನಗೆ ಧಾರವಾಡ ಕ್ಷೇತ್ರಕ್ಕೆ ಬರದೆ ಇರೋ ರೀತಿ ಮಾಡಿದ್ದು ಬಿಜೆಪಿಯವರು. ಅವರು ನಾಚಿಕೆಗೇಡು ಜನ, ಅವರಿಗೆ ಮಾನ ಮರ್ಯಾದೆ ಇಲ್ಲ. ನನ್ನ ಪತ್ನಿ ಒಬ್ಬ ಮಹಿಳೆಯಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿಸುತ್ತಿದ್ದಾಳೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗದಿರಲಿ ಎಂದು ಮುಂದೆ ನಿಂತು ಕೆಲಸ ಮಾಡಿಸುತ್ತಿದ್ದಾಳೆ. ಅವಳ ಮೇಲೆ ಆರೋಪ ಮಾಡುವವರಿಗೆ ಬಾಯಿಂದ ಯಾವ ಶಬ್ದ ಬಳಸಿದರೂ ಕಮ್ಮಿ" ಎಂದು ಹರಿಹಾಯ್ದರು.

"ನನ್ನ ಅನುಪಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿಸುತ್ತಿದ್ದಾಳೆ. ಇವರು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿ ಪಡಿಸುತ್ತಿದ್ದಾರೆ. ಕೋಳಿಕೆರೆಯ ಹೂಳೆತ್ತುವಾಗ ಬಿಜೆಪಿ ಪಾಲಿಕೆ ಸದಸ್ಯ ಕೆಲಸವನ್ನು ಬಂದ್​ ಮಾಡಿಸಿದ್ದರು. ಅವರಿಗೆ ಪರ್ಸೆಂಟೇಜ್ ಕೊಡದೆ ಇರೋದಕ್ಕೆ ಜೆಸಿಬಿ ಮುಂದೆ ಬಂದು ಮಲಗಿದ್ದರು. ಗುತ್ತಿಗೆದಾರರ ಪರ್ಸೆಂಟೇಜ್ ಕೊಡದೇ ಇದ್ದಿದ್ದಕ್ಕೆ ಬಿಜೆಪಿ ಪಾಲಿಕೆ ಸದಸ್ಯ ಇದನ್ನ ಮಾಡಿಸಿದ್ದರು. ಇವಾಗ ನಮ್ಮ ಕ್ಷೇತ್ರದಲ್ಲಿ ಕೆಲಸವಾಗುತ್ತಿದೆ. ಇದಕ್ಕೆ ವಿರೋಧ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಆಗದಷ್ಟು ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆರೋಪ ಮಾಡೋರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ. ಸುಖಾ ಸುಮ್ಮನೆ ನನ್ನ ಪತ್ನಿ ಮೇಲೆ ಆರೋಪ ಮಾಡುತ್ತಿದ್ದಾರೆ" ಎಂದು ಶಾಸಕ ವಿನಯ್​ ಕುಲಕರ್ಣಿ ಕಿಡಿಕಾರಿದರು.

Category
ಕರಾವಳಿ ತರಂಗಿಣಿ