image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕನ್ನಡ ಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ ಎಫೆಕ್ಟ್​ನಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ಮಧ್ಯದ ಬಸ್ ಸಂಚಾರ ಸ್ಥಗಿತ

ಕನ್ನಡ ಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ ಎಫೆಕ್ಟ್​ನಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ಮಧ್ಯದ ಬಸ್ ಸಂಚಾರ ಸ್ಥಗಿತ

ಬೆಳಗಾವಿ : ಹಿರಿಯ ಕನ್ನಡ ಹೋರಾಟಗಾರ ವಾಟಾಳ್​ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಮಧ್ಯೆ ಸಂಚರಿಸುವ ಬಸ್​ಗಳ ಸೇವೆ ಸಂಪೂರ್ಣ ಸ್ಥಗಿತವಾಗಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ.

ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್ ಹಾಗೂ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಬೇಕಿದ್ದ ಬಸ್​​ಗಳ ಸಂಚಾರ ಕೂಡ ಬಂದ್ ಆಗಿದೆ. ಇನ್ನುಳಿದಂತೆ ಬೆಳಗಾವಿ ನಗರ, ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆ ಎಂದಿನಂತೆ ಬಸ್​​ಗಳು ಕಾರ್ಯಾಚರಣೆ ಮಾಡುತ್ತಿವೆ.

ಮಹಾರಾಷ್ಟ್ರದ ಪುಣೆ, ಥಾಣೆ, ಮುಂಬೈ, ಮೀರಜ್, ಸಾಂಗ್ಲಿಯಿಂದ ಬಸ್ ಸೇವೆ ಸಂಪೂರ್ಣ ಸ್ಥಗಿತವಾಗಿದೆ. ಮಹಾರಾಷ್ಟ್ರದಿಂದ ನಿತ್ಯ ಬೆಳಗಾವಿಗೆ 90 ಬಸ್‌ಗಳು ಆಗಮಿಸುತ್ತಿದ್ದವು. ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಮಹಾರಾಷ್ಟ್ರ ಸರ್ಕಾರ ತಮ್ಮ ಬಸ್​​ಗಳನ್ನು ವಾಪಸ್​ ಕರೆಸಿಕೊಂಡಿದೆ. ಹೂವು ವ್ಯಾಪಾರಿಗಳಿಗೂ ಕರ್ನಾಟಕ ಬಂದ್ ಬಿಸಿ ತಟ್ಟಿದೆ. ವ್ಯಾಪಾರ-ವಾಹಿವಾಟುವಿಲ್ಲದೇ ಬೆಳಗಾವಿಯ ಹೂವು ಮಾರಾಟಗಾರರು ಕಂಗಾಲಾಗಿದ್ದಾರೆ. ಚಿತ್ರದುರ್ಗ, ಶಿರಾ ಭಾಗದಿಂದ ಬೆಳಗಾವಿಗೆ ತರಹೇವಾರಿ ಹೂವುಗಳು ಬರುತ್ತಿದ್ದವು. ಆಬೂಲಿ, ಮೈಸೂರು ಮಲ್ಲಿಗೆ, ಸಾದಾ ಮಲ್ಲಿಗೆ, ತುಳಸಿ ಮಾಲೆ ಅಲ್ಲಿಂದ ತರಿಸಲಾಗುತ್ತಿತ್ತು.

ಒಂದೆಡೆ ಕನ್ನಡ ಹೋರಾಟಗಾರರು ಪ್ರತಿಭಟನೆಗೆ ಸಜ್ಜಾಗಿದ್ದರೆ, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ.

Category
ಕರಾವಳಿ ತರಂಗಿಣಿ