image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮೊದಲ ಬಾರಿಗೆ 90 ಸಾವಿರದ ಗಡಿ ದಾಟಿದ ಬಂಗಾರದ ದರ

ಮೊದಲ ಬಾರಿಗೆ 90 ಸಾವಿರದ ಗಡಿ ದಾಟಿದ ಬಂಗಾರದ ದರ

ಬೆಂಗಳೂರು: ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಯಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಚಿತ್ತ ಹರಿಸುತ್ತಿದ್ದಾರೆ. ಹೀಗಾಗಿ ಚಿನ್ನದ ದರ ನಿರಂತರ ಏರಿಕೆಯತ್ತ ಸಾಗುವಂತೆ ಮಾಡಿದೆ. ಅಮೂಲ್ಯವಾದ ಲೋಹ ಬಂಗಾರ ಇದೇ ಮೊದಲ ಬಾರಿಗೆ ಪ್ರತಿ ಔನ್ಸ್​ ಗೆ 3,000 ಡಾಲರ್​​ ಆಗಿದೆ.

ಇನ್ನು ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಂದೂ ಕೂಡಾ ಭಾರೀ ಏರಿಕೆಯಾಗಿದೆ. ಗುರುವಾರ 10 ಗ್ರಾಂ ಚಿನ್ನದ ಬೆಲೆ ರೂ.89,550 ಇದ್ದರೆ, ಶುಕ್ರವಾರ ರೂ.920 ಏರಿಕೆಯಾಗಿ ರೂ.90,470 ಆಗಿತ್ತು. ಶನಿವಾರವಾದ ಇಂದು ಮತ್ತೆ 300 ರೂಗಳಷ್ಟು ಏರಿಕೆ ಕಂಡು 90724ಕ್ಕೆ ತಲುಪಿದೆ. ಪ್ರತಿ ಕೆಜಿ ಬೆಳ್ಳಿಯ ಬೆಲೆ ಗುರುವಾರ ರೂ.1,01,29 ರಷ್ಟಿದ್ದರೆ, ಶುಕ್ರವಾರ ರೂ.1101 ಏರಿಕೆಯಾಗಿ ರೂ.1,02,400 ರಷ್ಟಿತ್ತು. ಇಂದು ಈ ಬೆಲೆ 102622ಗೆ ಮುಟ್ಟಿದ್ದು, 200 ರೂ ಹೆಚ್ಚಳವಾಗಿದೆ.

 

Category
ಕರಾವಳಿ ತರಂಗಿಣಿ