image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕಲ್ಯಾಣ ಕರ್ನಾಟಕ ಭಾಗದಲ್ಲಿ 5267 ಶಿಕ್ಷಕರ ಹುದ್ದೆಗಳ ಭರ್ತಿ....

ಕಲ್ಯಾಣ ಕರ್ನಾಟಕ ಭಾಗದಲ್ಲಿ 5267 ಶಿಕ್ಷಕರ ಹುದ್ದೆಗಳ ಭರ್ತಿ....

ಬೆಂಗಳೂರು: ರಾಜ್ಯದಲ್ಲಿ ಎಸ್​​ಎಸ್​ಎಲ್​ಸಿ ಮತ್ತು ಪಿಯುಸಿ ಫಲಿತಾಂಶ ಸುಧಾರಣೆಗೆ ಸರ್ಕಾರ ಮುಂದಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವ ನಿಟ್ಟಿನಲ್ಲಿ ಹಲವು ಅಂಶಗಳನ್ನು ರಾಜ್ಯ ಬಜೆಟ್​ನಲ್ಲಿ ಹಲವು ಪ್ರಮುಖ ಕ್ರಮಕ್ಕೆ ಮುಂದಾಗಲಾಗಿದೆ. 

ಆಯಾ ತರಗತಿಗೆ ತಕ್ಕಂತೆ ಕಲಿಕೆ ಮಟ್ಟಕ್ಕೆ ಹೊಂದಿಕೆಯಾಗುವ ನಿಟ್ಟಿನಲ್ಲಿ ಮೂರು ವರ್ಷದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಜಾರಿ. ಪ್ರಸ್ತತ 2,619 ಸರ್ಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆ 50 ಸಾವಿರ ಶಾಲೆಗಳಿಗೆ ಯೋಜನೆ ವಿಸ್ತರಣೆ.

ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ ಸಂತಸದಾಯಕ ಕಲಿಕೆಗೆ 'ಕಲಿಕಾ ಚಿಲುಮೆ' ಕಾರ್ಯಕ್ರಮ ಅನುಭವ. 3 ರಿಂದ 5ನೇ ವಿದ್ಯಾರ್ಥಿಗಳಿಗೆ ಗಣಿತ ಕೌಶಲ್ಯ ಅಭಿವೃದ್ಧಿಗೆ 'ಗಣಿತ ಗಣಕ' ಕಾರ್ಯಕ್ರಮವ್ನು ರಾಜ್ಯದಲ್ಲಿ ವಿಸ್ತರಿಸುವುದು. 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಕೌಶಲ್ಯಕ್ಕಾಗಿ 'ಓದು ಕಾರ್ಯಕ್ರಮ ಯೋಜನೆ' ಅಭಿವೃದ್ಧಿ

ಸರ್ಕಾರಿ ಶಾಲೆಗಳಲ್ಲಿ ಕಲಿಕೆಯಲ್ಲಿ ಅತಿ ಕಡಿಮೆ ಸ್ತರದಲ್ಲಿ 6ರಿಂದ 10ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ 'ಮರು ಸಿಂಚನ' ಕಾರ್ಯಕ್ರಮ ವಿಸ್ತರಣೆ. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಆತ್ಮವಿಶ್ವಾಸದಿಂದ ಓದಲು ಹಾಗೂ ಗಣಿತ ಸಾಮರ್ಥ್ಯ ಹೊಂದಲು EK-Step ಸಂಸ್ಥೆಯ ಸಹಯೋಗದೊಂದಿಗೆ 2000 ಶಾಲೆಗಳಿಗೆ ಎಐ ಆಧಾರಿತ 'ಕಲಿಕಾ ದೀಪಾ' ಕಾರ್ಯಕ್ರಮ.

ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಭೋದನೆಯಲ್ಲಿ ನಾವೀನ್ಯತೆಗೆ 'ಜ್ಞಾನಸೇತು' ಕಾರ್ಯಕ್ರಮ. ಇದರಿಂದ 5000 ಸರ್ಕಾರಿ ಶಾಲೆ 20 ವಿದ್ಯಾರ್ಥಿಗಳು ಹಾಗೂ 15,000 ಶಿಕ್ಷಕರಿಗೆ ಪ್ರಯೋಜನ.ಸರ್ಕಾರಿ ಶಾಲೆಗಳಲ್ಲಿ ಕೋಡಿಂಗ್​ ಕಲಿಕೆಗೆ ಐ ಕೋಡ್​ ಲ್ಯಾಬ್​ ಸ್ಥಾಪನೆ.

ಸರ್ಕಾರಿ ಪಿಯು ಕಾಲೇಜುಗಳಲ್ಲಿ 25 ಸಾವಿರ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್​, ಜೆಇಇ ತರಬೇತಿಗೆ ವಿದ್ಯಾ ವಿಜೇತ ಕಾರ್ಯಕ್ರಮ ಮುಂದುವರೆಸಲು 5 ಕೋಟಿ ರೂ. ಮೀಸಲಿಡಲಾಗಿದೆ.

Category
ಕರಾವಳಿ ತರಂಗಿಣಿ