image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವರ್ಷದ 11 ತಿಂಗಳು 200 ರೂ ವೃತ್ತಿ ತೆರಿಗೆ ವಿಧಿಸಿದರೆ, ಫೆಬ್ರವರಿಯಲ್ಲಿ 300 ರೂ ತೆರಿಗೆ

ವರ್ಷದ 11 ತಿಂಗಳು 200 ರೂ ವೃತ್ತಿ ತೆರಿಗೆ ವಿಧಿಸಿದರೆ, ಫೆಬ್ರವರಿಯಲ್ಲಿ 300 ರೂ ತೆರಿಗೆ

ಬೆಂಗಳೂರು: ಇನ್ನು ಮುಂದೆ ಉದ್ಯೋಗಿಗಳ ಫೆಬ್ರವರಿ ತಿಂಗಳ ವೇತನದಿಂದ 300 ರೂ. ವೃತ್ತಿ ತೆರಿಗೆ ಕಡಿತವಾಗಲಿದೆ. ವರ್ಷದ 11 ತಿಂಗಳು ಉದ್ಯೋಗಿಗಳ ವೇತನದಿಂದ 200 ರೂ.ನಂತೆ ವೃತ್ತಿ ತೆರಿಗೆ ಕಡಿತವಾದರೆ ಒಂದು ತಿಂಗಳು ಮಾತ್ರ 300 ರೂ. ವೃತ್ತಿ ತೆರಿಗೆ ವಿಧಿಸಲಾಗುವುದು. ಅಷ್ಟಕ್ಕೂ ರಾಜ್ಯ ಸರ್ಕಾರ ವರ್ಷದಲ್ಲಿ ಒಂದು ತಿಂಗಳಿಗೆ ಸೀಮಿತವಾಗಿ ಮಾತ್ರ 300 ರೂ.ಗೆ ವೃತ್ತಿ ತೆರಿಗೆ ಏರಿಕೆ ಮಾಡಲು ಮುಂದಾಗಿರುವ ಹಿಂದಿನ ಸ್ವಾರಸ್ಯಕರ ವರದಿ ಇಲ್ಲಿದೆ.

ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ವೃತ್ತಿಗಳ, ಕಸುಬುಗಳ, ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ ನೀಡಲಾಗಿದೆ. ಪ್ರಸಕ್ತ ವೃತ್ತಿಪರ ಉದ್ಯೋಗಿಗಳಿಗೆ ಮಾಸಿಕ ವೇತನದಲ್ಲಿ 200 ರೂ. ವೃತ್ತಿ ತೆರಿಗೆ ವಿಧಿಸಲಾಗುತ್ತಿದೆ. ಈ ತಿದ್ದುಪಡಿ ವಿಧೇಯಕದಂತೆ ತೆರಿಗೆಯನ್ನು ಫೆಬ್ರವರಿ ತಿಂಗಳಲ್ಲಿ ಮಾತ್ರ 100 ರೂ. ಹೆಚ್ಚಿಸಲಾಗುವುದು. ಆ ಮೂಲಕ ಪ್ರೊಫೆಷನಲ್ ತೆರಿಗೆ 300 ರೂ.ಗೆ ಏರಿಕೆಯಾಗಲಿದೆ. ಇದೇ ಅಧಿವೇಶನದಲ್ಲಿ ತಿದ್ದುಪಡಿ ವಿಧೇಯಕ ಮಂಡನೆ ಮಾಡಲು ತೀರ್ಮಾನಿಸಲಾಗಿದೆ.

 

Category
ಕರಾವಳಿ ತರಂಗಿಣಿ