image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಿನಿಮಾದವರ ನಟ್ಟು ಬೋಲ್ಟ್​ ಟೈಟ್​ ಮಾಡುತ್ತೇನೆ ಎಂಬ ಡಿಸಿಎಂ ಮಾತಿಗೆ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್​ ತಿರುಗೇಟು

ಸಿನಿಮಾದವರ ನಟ್ಟು ಬೋಲ್ಟ್​ ಟೈಟ್​ ಮಾಡುತ್ತೇನೆ ಎಂಬ ಡಿಸಿಎಂ ಮಾತಿಗೆ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್​ ತಿರುಗೇಟು

ಹಾಸನ: ಸಿನಿಮಾದವರ ನಟ್ಟು ಬೋಲ್ಟ್​ ಟೈಟ್​ ಮಾಡುತ್ತೇನೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್​ ಅವರ ಮಾತಿಗೆ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್​ ತಿರುಗೇಟು ನೀಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಿನಿಮಾ ನಟರು ಖಾಸಗಿ ಜನಗಳು. ಹೋರಾಟದಲ್ಲಿ ಭಾಗವಹಿಸಬೇಕೋ, ಬೇಡವೋ ಎಂಬುದು ಅವರಿಗೆ ಬಿಟ್ಟಿದ್ದು. ಪಕ್ಷದಿಂದ ಹೋರಾಟ ಮಾಡಿದ್ದರೆ ಪಕ್ಷದವರು ಸೇರಿ ಮಾಡುತ್ತಾರೆ. ಆದರೆ ಚಲನಚಿತ್ರ ರಂಗದವರು ಪಕ್ಷಕ್ಕೆ ಸೇರಿರುವುದಿಲ್ಲ. ಈ ನಿಟ್ಟಿನಲ್ಲಿ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಪ್ರಶ್ನೆ ಮಾಡುವುದು ಸೂಕ್ತವಲ್ಲ" ಎಂದರು.

"ಸಿನಿಮಾ ನಟರಾಗಿ ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದರೆ, ಪಕ್ಷದವರೆಲ್ಲರೂ ಸೇರಿ ಹೋರಾಟ ಮಾಡ್ತಾರೆ. ಚಿತ್ರರಂಗದ ಕೆಲವರು ರಾಜಕೀಯ ಪ್ರವೇಶ ಮಾಡದಿದ್ದರೆ, ಅವರು ರಾಜಕೀಯದವರ ಹೋರಾಟಕ್ಕೆ ಬಂದಿಲ್ಲ, ನಟ್ಟು ಬೋಲ್ಟ್ ಟೈಟ್​ ಮಾಡುತ್ತೇನೆ ಎನ್ನುವುದು ತರವಲ್ಲ. ಇದು ಅಧಿಕಾರದ ಪರಮಾವಧಿ. ಅಧಿಕಾರದಲ್ಲಿರುವವರು ಸರ್ವಾಧಿಕಾರಿ ಧೋರಣೆ ತೋರುವುದು ಸರಿಯಲ್ಲ. ಡಿಕೆಶಿ ವರ್ತನೆ ಅವರ ಅಹಂಕಾರ ತೋರಿಸುತ್ತದೆ" ಎಂದರು.

"ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಸಮುದಾಯಕ್ಕೆ ಬಳಸಬಾರದು ಎಂದು ಆದೇಶವಿದ್ದರೂ, 2023ರಲ್ಲಿ ಗ್ಯಾರಂಟಿ ಯೋಜನೆಯ ಭರವಸೆ ನೀಡಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, 2023ರಲ್ಲಿ ಎಸ್​ಇಪಿ, ಟಿಎಸ್‌ಪಿ 11,144 ಸಾವಿರ ಕೋಟಿ, 2024ರಲ್ಲಿ 14,282 ಸಾವಿರ ಕೋಟಿ ಹಣ ದುರ್ಬಳಕೆ ಮಾಡಿದೆ. ಎರಡು ವರ್ಷಗಳಲ್ಲಿ ದುರ್ಬಳಕೆ ಮಾಡಿಕೊಂಡು ಗ್ಯಾರಂಟಿಗಾಗಿ ಬಳಸಿಕೊಂಡಿರುವುದನ್ನು ನಾನು ಮತ್ತು ನಮ್ಮ ಪಕ್ಷ ಖಂಡಿಸುತ್ತೇವೆ. ಈ ವಿಚಾರವಾಗಿ ಶ್ವೇತಪತ್ರ ಹೊರಡಿಸಬೇಕು" ಎಂದು ಆಗ್ರಹಿಸಿದರು.

Category
ಕರಾವಳಿ ತರಂಗಿಣಿ