image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಧಾರವಾಡ ನಗರದ ರಜತಗಿರಿ ಬಡಾವಣೆಯಲ್ಲಿ ಗ್ಯಾಸ್​ ಪೈಪ್ ಸೋರಿಕೆಯಾಗಿ ಬೆಂಕಿ

ಧಾರವಾಡ ನಗರದ ರಜತಗಿರಿ ಬಡಾವಣೆಯಲ್ಲಿ ಗ್ಯಾಸ್​ ಪೈಪ್ ಸೋರಿಕೆಯಾಗಿ ಬೆಂಕಿ

ಧಾರವಾಡ : ಗ್ಯಾಸ್ ಪೈಪ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಗರದ ರಜತಗಿರಿ ಬಡಾವಣೆಯಲ್ಲಿ ನಡೆದಿದೆ‌. ಮನೆ ಮನೆಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಪೈಪ್ ಲೈನ್ ಇದಾಗಿದ್ದು, ಏಕಕಾಲಕ್ಕೆ ಎರಡು ಕಡೆಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುವಂತಾಗಿದೆ. ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

ಈ ಬಗ್ಗೆ ಸ್ಥಳೀಯರು ಮಾತನಾಡಿ, 'ಬೆಳಗ್ಗೆ ನೋಡಿದಾಗ ಹೊಗೆ ಬರುತ್ತಿತ್ತು. ನಂತರ ಅದು ಬೆಂಕಿಯಾಯಿತು. ಗ್ಯಾಸ್​ ಕಂಪನಿಯವರಿಗೆ ಫೋನ್ ಮಾಡಿದೆ. ಆದ್ರೆ ಅವರು ಇದುವರೆಗೂ ಬಂದಿಲ್ಲ. ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ. ಅದರ ವಾಲ್ ಹುಡುಕಿ ಬಂದ್ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ಆದರೆ ಆಗುತ್ತಿಲ್ಲ. ಸಣ್ಣಪುಟ್ಟ ಮಕ್ಕಳು ಇಲ್ಲಿ ಆಟವಾಡುತ್ತಿರುತ್ತಾರೆ. ಇಲ್ಲಿಯೇ ಪಕ್ಕದಲ್ಲಿ ಲೈಟ್ ಕಂಬ ಇದೆ. ಹೀಗಾಗಿ ಕೆಇಬಿಗೆ ಫೋನ್ ಮಾಡಿದ್ದೆವು. ಪಕ್ಕದಲ್ಲಿ ತೆಂಗಿನಮರವಿದೆ. ಅದಕ್ಕೆ ಬೆಂಕಿ ಹತ್ತುತ್ತದೆ' ಎಂದು ಆತಂಕ ವ್ಯಕ್ತಪಡಿಸಿದರು.

Category
ಕರಾವಳಿ ತರಂಗಿಣಿ