image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರೈಲು ನಿಲ್ಲುವುದಕ್ಕೂ ಮುನ್ನ ಇಳಿಯಲು ಹೋಗಿ, ಯುವಕ ದುರಂತ ಸಾವು!

ರೈಲು ನಿಲ್ಲುವುದಕ್ಕೂ ಮುನ್ನ ಇಳಿಯಲು ಹೋಗಿ, ಯುವಕ ದುರಂತ ಸಾವು!

ತುಮಕೂರು : ರೈಲು ನಿಲ್ಲುವುದಕ್ಕೂ ಮುನ್ನವೇ ಇಳಿಯಲು ಹೋಗಿ, ಹಳಿಗೆ ಕಾಲು ಸಿಲುಕಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತುಮಕೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

 ಸಾವನ್ನಪ್ಪಿದ ಯುವಕನನ್ನು ತುರುವೇಕೆರೆ ಅಮ್ಮಸಂದ್ರ ಮೂಲದ ಛಾಯಾಂಕ್ ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ ಯುವಕ ಪುಷ್ಪಲ್ ಟ್ರೈನ್‌ಗೆ ಬಂದಿದ್ದ. ಈ ವೇಳೆ ರೈಲು ನಿಲ್ಲುವ ಮೊದಲು ಇಳಿಯಲು ಹೋಗಿ ಬ್ಯಾಗ್ ರೈಲಿನ ಹ್ಯಾಂಡಲ್‌ಗೆ ಸಿಲುಕಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಘಟನೆ ವೇಳೆ ರೈಲ್ವೆ ನಿಯಮದ ಪ್ರಕಾರ ಯಾರು ಮುಟ್ಟುವಂತಿಲ್ಲ ಹಾಗಾಗಿ ಸಾರ್ವಜನಿಕರು ಸಹ ಯಾರು ಯುವಕನಿಗೆ ಸಹಾಯ ಮಾಡಲಿಲ್ಲ. ಈ ವೇಳೆ ಯುವಕ ತಮ್ಮವರಿಗೆ ಕರೆ ಮಾಡಲು ಫೋನ್ ಹುಡುಕಾಡುತ್ತಿದ್ದ. ಆದರೆ 25 ನಿಮಿಷ ಕಳೆದರೂ ಗಾಯಾಳುವನ್ನು ಆಸ್ಪತ್ರೆ ಸಾಗಿಸದೆ, ಪೊಲೀಸರು ವಿಳಾಸ ಪತ್ತೆ ಮಾಡಲು ಕಾಲಹರಣ ಮಾಡಿದ್ದಾರೆ ಎನ್ನಲಾಗಿದ್ದು, ಯುವಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.

Category
ಕರಾವಳಿ ತರಂಗಿಣಿ