ಹುಬ್ಬಳ್ಳಿ: ಓರ್ವ ವ್ಯಕ್ತಿ ಬೈಕ್ ಓಡಿಸುತ್ತ, ಟ್ರಕ್ ಕೆಳಗೆ ನುಗ್ಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ಬೈಪಾಸ್ ರಸ್ತೆಯ ದಾರಾವತಿ ಹನಮಮಪ್ಪನ ದೇವಸ್ಥಾನದ ಬಳಿ ಈ ಘಟನೆ ವರದಿಯಾಗಿದ್ದು, ಸಿದ್ದಪ್ಪ ಕೆಂಚಣ್ಣವರ(42) ಮೃತ ದುರ್ದೈವಿಯಾಗಿದ್ದಾರೆ.
ಸಿದ್ಧಪ್ಪ ಉಣಕಲ್ ದುರ್ಗಮ್ಮನ ಓಣಿ ನಿವಾಸಿಯಾಾಗಿದ್ದು, ಮೀಟರ್ ಬಡ್ಡಿ ಕಿರುಕುಳಕ್ಕೆ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದಾರೆ. ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು, ಮಹೇಶ್ ಚಿಕ್ಕವೀರಮಠ ಎಂಬಾತ ಬಡ್ಡಿಗಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಮಹೇಶ್ ಚಿಕ್ಕವೀರಮಠ ಗೆ ತಕ್ಕ ಶಿಕ್ಷೆ ನೀಡಬೇಕೆಂದು ಡೆತ್ ನೋಟ್‌ನಲ್ಲಿ ಒತ್ತಾಯಿಸಲಾಗಿದೆ. ಅಲ್ಲದೇ, ತಾನು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡ ಕಾರಣಕ್ಕೆ, ಪೋಷಕರಲ್ಲಿ, ಕುಟುಂಬಸ್ಥರಲ್ಲಿ ಸಿದ್ದಪ್ಪ ಕ್ಷಮೆ ಕೇಳಿದ್ದಾರೆ.