ಮೈಸೂರು: ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಭೂ ಸ್ವಾಧೀನ ಪ್ರಕ್ರಿಯೆ ಹಾಗೂ ಮೈಸೂರು - ಬೆಂಗಳೂರು ಹೈವೇಯಲ್ಲಿ ಟೋಲ್ ಸಮಸ್ಯೆಗೆ ಪರಿಹಾರ, ಅರ್ಜುನ ಆನೆ ಸ್ಮಾರಕ ಹಾಗೂ ಮುಡಾ ಹಗರಣ ಕುರಿತು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ಮೈಸೂರು ಜಿಲ್ಲಾ ಅಭಿವೃದ್ದಿ ಸಭೆಯಲ್ಲಿ ಮೈಸೂರು ವಿಮಾನ ನಿಲ್ದಾಣ ಅಭಿವೃದ್ದಿಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ. ಅವರು ಕೇಂದ್ರ ಸರ್ಕಾರದ ಅನುದಾನಕ್ಕೆ ಪತ್ರ ಬರೆದಿದ್ದಾರೆ. ಭೂ ಸ್ವಾಧೀನ ಮಾಡಿಕೊಳ್ಳುವ ಕಾರ್ಯವೂ ಒಂದು ವಾರದಲ್ಲಿ ಮುಗಿಯುತ್ತದೆ. ನಂತರ ವಿಮಾನ ನಿಲ್ದಾಣದ ಫೇಸ್ ಒನ್ ಅಭಿವೃದ್ದಿಯಾಗುತ್ತದೆ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.
ಹೈವೇ ನವೀಕರಣಕ್ಕೆ 711 ಕೋಟಿ ಟೆಂಡರ್ ಪ್ರಕ್ರಿಯೆ ಸಿದ್ಧವಾಗಿದೆ. 3 ತಿಂಗಳ ಒಳಗೆ ಕೆಲಸ ಆರಂಭವಾಗಲಿದೆ. ಟೋಲ್ ವಿಚಾರಕ್ಕೂ ಪರಿಹಾರ ಬರುತ್ತದೆ. ಬೆಂಗಳೂರು - ಮೈಸೂರು ಟೋಲ್ಗೆ ಸಂಬಂಧಿಸಿ ಕಚೇರಿಗೆ ಅಧಿಕ ಬೇಡಿಕೆ ಬಂದಿವೆ. ಪೂರ್ಣ ಪ್ರಮಾಣದ ಟೋಲ್ ವಿರುದ್ದ ಸಾರ್ವಜನಿಕರು ಕಂಪ್ಲೇಟ್ ನೀಡಿದ್ದಾರೆ ಎಂದು ಹೇಳಿದರು.