image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಚಿಕ್ಕಮಗಳೂರು ಜಿಲ್ಲೆ ಎನ್.ಆರ್‌.ಪುರದ 23 ವರ್ಷದ ಯುವಕನಲ್ಲಿ ಕೆಎಫ್​ಡಿ ಪತ್ತೆ

ಚಿಕ್ಕಮಗಳೂರು ಜಿಲ್ಲೆ ಎನ್.ಆರ್‌.ಪುರದ 23 ವರ್ಷದ ಯುವಕನಲ್ಲಿ ಕೆಎಫ್​ಡಿ ಪತ್ತೆ

ಶಿವಮೊಗ್ಗ: 2025ರ ಮೊದಲ ಮಂಗನ ಕಾಯಿಲೆಯ ಪಾಸಿಟಿವ್ ಪ್ರಕರಣ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ‌ ಪತ್ತೆಯಾಗಿದೆ.

ತೀರ್ಥಹಳ್ಳಿ ತಾಲೂಕಿನ‌ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 63 ವರ್ಷದ ವೃದ್ಧರೊಬ್ಬರಲ್ಲಿ‌ ಪಾಸಿಟಿವ್ ಕಂಡು ಬಂದಿದೆ. ಇವರಿಗೆ ಮೊದಲು ಜ್ವರ ಕಂಡು ಬಂದಿತ್ತು. ಇವರನ್ನು ದೇವಂಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿದಾಗ ಅನುಮಾನಗೊಂಡು, ಶಿವಮೊಗ್ಗದ ಕೆಎಫ್​ಡಿ ಲ್ಯಾಬ್​ನಲ್ಲಿ ತಪಾಸಣೆ ನಡೆಸಲಾಯಿತು. ಆಗ ಕೆಎಫ್​ಡಿ ಸಾಬೀತಾಗಿದೆ.

ಸದ್ಯ ಕೆಎಫ್​ಡಿ ಪಾಸಿಟಿವ್​ ಬಂದಿರುವ ರೋಗಿಯನ್ನು ತೀರ್ಥಹಳ್ಳಿಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ‌ ನೀಡಿ ಹೆಚ್ಚಿನ ಚಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆ ಎನ್.ಆರ್‌.ಪುರದ 23 ವರ್ಷದ ಯುವಕನಲ್ಲೂ ಸಹ ಕೆಎಫ್​ಡಿ ಕಂಡು ಬಂದಿದೆ.

ಶಿವಮೊಗ್ಗ ಡಿಎಫ್​ಓ ನಟರಾಜ್​ ಮಾಹಿತಿ ನೀಡುತ್ತಾ, ನಮ್ಮ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಒಬ್ಬರಲ್ಲಿ ಕೆಎಫ್​ಡಿ ಪತ್ತೆಯಾಗಿದೆ. ಸದ್ಯ ಅವರು ಆರೋಗ್ಯವಾಗಿದ್ದು, ಇನ್ನೆರಡು ದಿನಗಳಲ್ಲಿ ಅವರು ಮನೆಗೆ ವಾಪಸ್ ಆಗಬಹುದು. ರೋಗ ಹರಡುವುದನ್ನು ತಡೆಯಲು ನಾವು ಜಿಲ್ಲೆಯಲ್ಲಿ ಕೆಎಫ್​ಡಿ ಹಾಟ್ ಸ್ಪಾಟ್ ಎಂದು ಗುರುತಿಸಿರುವ ಭಾಗದಲ್ಲಿ ಹೆಚ್ಚಿನ ತಪಾಸಣೆ ನಡೆಸುತ್ತಿದ್ದೇವೆ. ಮಳೆ ಬಂದರೆ ಕೆಎಫ್​ಡಿ ಹರಡುವುದನ್ನು ತಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ