ಧಾರವಾಡ: "ನಕ್ಸಲರನ್ನು ಸರೆಂಡರ್ ಮಾಡಿದ್ದು ಒಳ್ಳೆಯ ಕೆಲಸ. ಇಂಟಲಿಜೆನ್ಸ್ ನಿಂಬಾಳ್ಕರ್ ಅವರು ಅದರಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಸಿಎಂ ಗೃಹ ಕಚೇರಿಯಲ್ಲಿ ಅವರನ್ನು ಸರೆಂಡರ್ ಮಾಡಿಸಿದ್ದು ಸರಿಯಲ್ಲ. ಪೊಲೀಸ್ ಠಾಣೆ ಅಥವಾ ಕೋರ್ಟ್ನಲ್ಲಿ ಸೆರೆಂಡರ್ ಮಾಡಿಸಬೇಕಿತ್ತು" ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದರು.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಿಎಂ ಕಚೇರಿಯಲ್ಲಿ ಮಾಡಿ, ಅದರಲ್ಲಿ ಪಾಲಿಟಿಕ್ಸ್ ಮಾಡಿ ಲಾಭ ಪಡೆಯೋದು ಸರಿಯಲ್ಲ. ಈ ರೀತಿ ಬಹಳಷ್ಟು ತಪ್ಪು ಮಾಡಿಕೊಂಡು ಹೊರಟಿದ್ದಾರೆ. ನಾವು ಹಿಂದೆ ಎಷ್ಟೋ ಟೆರರಿಸ್ಟ್ಗಳನ್ನು ಅರೆಸ್ಟ್ ಮಾಡಿದ್ದೇವೆ. ಆಗ ಠಾಣೆಯಲ್ಲಿ ಅವರ ತಂದೆ ತಾಯಿಗಳಿಗೆ ಭೇಟಿ ಮಾಡಿ ಮಾತಾಡಲು ಅವಕಾಶ ಕೊಟ್ಟಿದ್ದೆವು. ಆದರೆ, ಅವರನ್ನು ಮಂತ್ರಿಗಳ ಹತ್ತಿರ ಗೃಹ ಸಚಿವರ ಬಳಿ ಕರೆದುಕೊಂಡು ಹೋಗುವ ಕೆಲಸ ಮಾಡಿಲ್ಲ" ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಿರ್ಜಿ ಅಸಮಾಧಾನ ವ್ಯಕ್ತಪಡಿಸಿದರು.
"ಈಗ ಸರ್ಕಾರ ಸೆರೆಂಡರ್ ಮಾಡಿಸಿದ್ದು ಸರಿ ಇದೆ. ಆದರೆ ಅದನ್ನು ಪ್ರಚಾರಕ್ಕೆ ಮಾಡಿದ್ದು ತಪ್ಪು ಸಂದೇಶ ಕೊಟ್ಟಿದೆ. ಅದರ ಕ್ರೆಡಿಟ್ ಪಡೆಯಲು ಹೋಗಿ ಅದು ಉಲ್ಟಾ ಆಗಿದೆ. ನಕ್ಸಲರ ಹಾಗೂ ಸರ್ಕಾರದ ನಡುವೆ ಏನು ಮಾತುಕತೆ ಆಗಿದೆಯೋ ಗೊತ್ತಿಲ್ಲ. ಪರಿಹಾರ ಏನು ಕೊಡಬೇಕು ಎಂದು ಮಧ್ಯಸ್ಥಿಕೆ ವಹಿಸಿದವರಿಗೆ ಗೊತ್ತಿರುತ್ತದೆ. ಅದಾದ ನಂತರವು ಅವರು ಸೆರೆಂಡರ್ ಆದ ಮೇಲೆ ಏನೇ ಕೊಟ್ಟರೂ ತಪ್ಪಲ್ಲ. ಇದು ಇಂಟೆಲಿಜೆನ್ಸ್ ಆಪರೇಷನ್, ಅದರ ಚೀಫ್ ನಿಂಬಾಳ್ಕರ್ ನಕ್ಸಲರನ್ನು ವಿಧಾನಸೌಧದಲ್ಲಿ ಕೂಡಾ ಸೆರೆಂಡರ್ ಮಾಡಿಸಬಹುದಿತ್ತು. ಒಂದೊಂದಕ್ಕೆ ಒಂದೊಂದು ಸ್ಥಾನ ಇರುತ್ತದೆ. ಹೆಚ್ಚಾಗಿ ಜಿಲ್ಲೆಯಲ್ಲಿ ಸೆರೆಂಡರ್ ಆಗಬೇಕು. ಜಿಲ್ಲಾಧಿಕಾರಿ ಕಡೆ ಹೋಗಿ ಸೆರೆಂಡರ್ ಆಗಬೇಕು.