image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ತೀವ್ರ ಹೃದಯಾಘಾತದಿಂದ 3ನೇ ತರಗತಿ ವಿದ್ಯಾರ್ಥಿನಿ ಸಾವು...!

ತೀವ್ರ ಹೃದಯಾಘಾತದಿಂದ 3ನೇ ತರಗತಿ ವಿದ್ಯಾರ್ಥಿನಿ ಸಾವು...!

ಚಾಮರಾಜನಗರ:  ತೀವ್ರ ಹೃದಯಾಘಾತಕ್ಕೆ ಒಳಗಾದಂತ 3ನೇ ತರಗತಿ ವಿದ್ಯಾರ್ಥಿನಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವಂತ ಶಾಕಿಂಗ್ ಘಟನೆ ಚಾಮರಾಜನಗರ ತಾಲೂಕಿನ ಬನದಗುಪ್ಪೆ ಗ್ರಾಮದಲ್ಲಿ ನಡೆದಿದೆ. ಲಿಂಗರಾಜು ಮತ್ತು ಶ್ರುತಿ ದಂಪತಿಯ ಪುತ್ರಿ ತೇಜಸ್ವಿನಿ ಎಂಬುವರೇ ತೀವ್ರ ಹೃದಯಾಘಾತದಿಂದ ನಿಧನರಾದಂತ ಬಾಲಕಿಯಾಗಿದ್ದಾರೆ. ಇಂದು ಶಾಲೆಗೆ ತೆರಳಿದ್ದಂತ ತೇಜಸ್ವಿನಿ, ಶಿಕ್ಷಕರಿಗೆ ನೋಟ್ಸ್ ತೋರಿಸುತ್ತಿದ್ದಾಗಲೇ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಕುಸಿದು ಬಿದ್ದಂತ 3ನೇ ತರಗತಿ ವಿದ್ಯಾರ್ಥಿನಿ, ಬಟ್ಟೆಯಲ್ಲೇ ಮೂತ್ರ ವಿಸರ್ಜನೆ ಕೂಡ ಮಾಡಿಕೊಂಡಿದೆ ಎನ್ನಲಾಗಿದೆ.

ಶಾಲೆಯಲ್ಲೇ ಹೃದಯಾಘಾತಕ್ಕೆ ಒಳಗಾದಂತ ಆಕೆಯನ್ನು ಶಿಕ್ಷಕರು, ಶಾಲಾ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ಆದರೆ ಮಾರ್ಗ ಮಧ್ಯದಲ್ಲಿ ಮಗು ಸಾವನ್ನಪ್ಪಿದೆ. ವೈದ್ಯರು ಇದನ್ನು ದೃಢ ಪಡಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Category
ಕರಾವಳಿ ತರಂಗಿಣಿ