ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಿಗೆ ಪಹಣಿಯಲ್ಲಿ ಆಯಾ ದೇವಸ್ಥಾನಗಳ ಹೆಸರಿಗೆ ಒಟ್ಟು 15,413.17 ಎಕರೆ ಜಾಗದ ಖಾತೆ ಬದಲಾವಣೆ ಮಾಡಲಾಗಿದೆ.
ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಕಂದಾಯ ಇಲಾಖೆಗೆ ಮಾಡಿ ಆಯಾ ದೇವಸ್ಥಾನಗಳ ಹೆಸರಿಗೆ ಪಹಣಿ ಬದಲಾಯಿಸಲು ಸೂಚಿಸಿದ್ದರು. ಅದರಂತೆ ಒಟ್ಟು 15,413.17 ಎಕರೆ ಜಾಗವನ್ನು ಆಯಾ ದೇವಸ್ಥಾನದ ಹೆಸರಿಗೆ ಖಾತೆ ಇಂಡೀಕರಣ ಮಾಡಲಾಗಿದೆ.
ಬೆಳಗಾವಿ, ವಿಜಯಪುರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ರಾಯಚೂರು ಜಿಲ್ಲೆಗಳ ಮಾಹಿತಿಯನ್ನು ತಹಶೀಲ್ದಾರ್ಗಳಿಂದ ಪಡೆದುಕೊಂಡು ನಮೂದಿಸಲಾಗಿದೆ. ಕೊಡಗು, ರಾಮನಗರ, ಯಾದಗಿರಿ, ಉಡುಪಿ, ಧಾರವಾಡ , ಕೋಲಾರ ಜಿಲ್ಲೆಗಳಲ್ಲಿ ಮುಜರಾಯಿ ದೇವಾಲಯಗಳ ವಿವಿಧ ಸರ್ವೇ ನಂಬರ್ಗಳಲ್ಲಿ ಗ್ರಾಮ ಠಾಣೆ ಹೊಂದಿರುವ ಆಸ್ತಿಗಳ ವಿವರ, ಸಮೀಕ್ಷೆ, ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಬೀದರ್ ಜಿಲ್ಲೆಯ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಅಳತೆ ಆಗಿರುವ ದೇವಾಲಯಗಳ ಒಟ್ಟು ಸರ್ವೆ ನಂಬರ್ಗಳು ಹಾಗೂ ಜಮೀನಿನ ಮಾಹಿತಿ ನಮೂದಿಸಲಾಗಿದೆ.