ಬೆಂಗಳೂರು: ಸುರ್ವೆ ಕಲ್ಚರಲ್ ಅಕಾಡೆಮಿ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ.) ಜಂಟಿಯಾಗಿ, ತನ್ನ 32ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ, 2024ರ ಡಿಸೆಂಬರ್ 27, ಶುಕ್ರವಾರದಂದು, ಬೆಂಗಳೂರಿನ ನಯನ ರಂಗಮಂದಿರದಲ್ಲಿ ಪೂರ್ಣ ದಿನ, ಅಖಿಲ ಭಾರತ ಕನ್ನಡ ಕವಿಗಳ ಸಮ್ಮೇಳನ ಹಮ್ಮಿಕೊಂಡಿದೆ. ಇದರಲ್ಲಿ 10ನೇ ರಾಷ್ಟ್ರೀಯ ನೃತ್ಯ ಕಲಾಮೇಳ ಮತ್ತು 71ನೇ ಸಾಂಸ್ಕøತಿಕ ಪ್ರತಿಭೋತ್ಸವ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ಕನ್ನಡದ ಹೆಸರಾಂತ ಕವಿಗಳು ಮತ್ತು ಸಾಹಿತಿ ಶ್ರೀ ಮ.ಚಿ. ಕೃಷ್ಣರವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ಅವರ ನೇತೃತ್ವದಲ್ಲಿ ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಿರಿಯ ಲೇಖಕ ಮ.ಚಿ. ಕೃಷ್ಣರವರು ಈಗಾಗಲೇ ರಾಜ್ಯಮಟ್ಟದಲ್ಲಿ ಕವನ ಸಂಕಲನ, ಜೀವನ ಚರಿತ್ರೆ, ಪತ್ರಿಕಾ ಲೇಖನ, ನಾಟಕ, ಕಾದಂಬರಿ ಸೇರಿದಂತೆ, 100ಕ್ಕೂ ಹೆಚ್ಚು ಕೃತಿಗಳನ್ನು ರಚನೆ ಮಾಡಿದ್ದಾರೆ.
ಸಮ್ಮೇಳನ ಉದ್ಘಾಟನೆ ಬೆಳಿಗ್ಗೆ 9.30 ಕ್ಕೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯ ಮತ್ತು ರಂಗ ನಿರ್ದೇಶಕ ದೇವರಾಜ್ ಡಿ. ಸಮಾರಂಭವನ್ನು ಉದ್ಘಾಟಿಸಲಿದ್ದು, ಸಾನಿಧ್ಯವನ್ನು ಬೆಳಗಾವಿ ಜಿಲ್ಲೆ ಚಿಪ್ಪಲಕಟ್ಟಿಯ ಹಿರೇಮಠದ ಡಾ. ಕಲ್ಮೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಸಮ್ಮೇಳನಾಧ್ಯಕ್ಷರಾದ ಶ್ರೀ ಮ.ಚಿ. ಕೃಷ್ಣ ಸಾಹಿತಿಗಳು, ಸಂಘದ ಗೌರವ ಅಧ್ಯಕ್ಷೆ ಡಾ. ಸುಮತಿಶ್ರೀ ನವಲಿ ಹಿರೇಮಠ ಮತ್ತು ಪಾರಿವಾಳ ಪತ್ರಿಕೆಯ ಸಂಪಾದಕರಾದ ಅತ್ತಿಕುಪ್ಪೆ ರವಿಕುಮಾರ್ ಉಪಸ್ಥಿತರಿರುತ್ತಾರೆ.
ಸಾಂಸ್ಕøತಿಕ ಕಾರ್ಯಕ್ರಮಗಳು : ಬೆಳಿಗ್ಗೆ 10 ರಿಂದ ಪ್ರಾರಂಭವಾಗಿ 2 ಗಂಟೆಯವರೆಗೆ ಭರತನಾಟ್ಯ, ಜಾನಪದ ನೃತ್ಯ, ಚಲನಚಿತ್ರ ನೃತ್ಯ, ವೆಸ್ಟ್ರನ್ ನೃತ್ಯ ಮತ್ತು ಹಲವು ನೃತ್ಯರೂಪಕ ಮತ್ತು ಸಮೂಹ ನೃತ್ಯಗಳನ್ನು ಸಾಂಸ್ಕøತಿಕ ಪ್ರತಿಭೋತ್ಸವದಲ್ಲಿ ಪ್ರದರ್ಶನ ನಡೆಯಲಿದೆ.
ಬಳ್ಳಾರಿಯ ಸೂರ್ಯ ಕಲಾ ಅಕಾಡೆಮಿಯ ನೃತ್ಯಗುರು ಅಭಿಷೇಕ್ ನೇತೃತ್ವದಲ್ಲಿ, ಸೋನಿಕಾ ರೆಡ್ಡಿ, ಅಂಕಿತಾ ಟಿ, ಪಿ. ಭಾವನ ಶಾಸ್ತ್ರೀ, ಎನ್.ಎ. ಅಕ್ಷಿತಾ, ಸಾನ್ವಿ ಪಾಟಿಲ್ ಬಿ., ಪೂಜಾರಿ ಹೇಮರಾಜ್, ಕೆ.ಎಸ್. ಅನಘ, ಹಿರಣ್ಯ ಅಂಜಲಿ, ತ್ರಿಪುರ ಕೆ.ಬಿ., ವಿ. ಬಿಂದು, ಬಿ.ಎಸ್. ನಿತ್ಯ ಭಾರ್ಗವಿ, ತೃಷಿಕಾ ವಿ.ಆರ್., ಮಹಿರಾ ತಾಜ್, ಎಚ್. ರಕ್ಷಿತಾ, ಎಚ್. ಶಾಲಿನಿ, ಕೆ. ಖುಷಿ, ಕಾವ್ಯ ಕೆ., ರಾಘವ ಕೆ.ಆರ್., ಪಿ. ಖುಷಿ ಪ್ರಾರ್ಥನ, ಅಮುಲ್ಯ ಪಿ. ಸೇರಿದಂತೆ 20ಕ್ಕೂ ಹೆಚ್ಚು ಮಕ್ಕಳು “ನಾಟ್ಯಾಂಜಲಿ” ವೈವಿದ್ಯಮಯ ನೃತ್ಯ ಪ್ರದರ್ಶನ ಮಾಡಲಿದ್ದಾರೆ.
ಧಾರವಾಡ ಜಿಲ್ಲೆಯ ರಾಧಾಕೃಷ್ಣ ಅಕಾಡೆಮಿ ಆಫ್ ಫೈನ್ ಆಟ್ರ್ಸ್ ಅಂಡ್ ಎಜ್ಯುಕೇಶನ್‍ನ ಮನೀಷ್ ಶಿಂಧೆ ಇವರ ನೇತೃತ್ವದಲ್ಲಿ ಐಶ್ವರ್ಯ ಜಿ.ಎಂ., ಆರುಷ್ ಶಿಂಧೆ, ಪ್ರೇಕ್ಷಾ ಪೋಲ, ಪ್ರಾರ್ಥನ ಪೊಲ, ಗಗನ ಕಾಲವಡ, ಅವಿಘ್ನ ಶಿಂಧೆ, ವೃಕ್ಷ ಗಿರಿನ್ನವರ್ ಕಲಾವಿದರು “ನೃತ್ಯ ವೈಭೋಗ” ಕಾರ್ಯಕ್ರಮ ನಡೆಸಲಿದ್ದಾರೆ.
ಮಾಲೂರಿನ ಶ್ರೇಯಾಂಕ ಡ್ಯಾನ್ಸ್ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಪ್ರಿಯಾಂಕ ವಿ.ಎಂ. ನೇತೃತ್ವದಲ್ಲಿ ಶ್ರೇಯಾ, ಧನ್ವಿದೇಚಮ್ಮ, ಓರ್ವ ಸಾತ್ವಿಕ್, ಅಮುಲ್ಯ, ಮನಸ್ವಿ, ಮಧು, ಮೈತ್ರಿ, ತಾನ್ವಿತ್, ಪೃಥ್ವಿ ಯಶಸ್ ಎ.ಎಲ್., ಆರುಷ್ ಎ.ಕೆ., ಸಾನ್ವಿಕಾ, ಶಾಲಿನಿ, ಚಾರ್ಮಿತ ಕೆ. ಹೀಗೆ 15ಕ್ಕೂ ಹೆಚ್ಚು ಮಕ್ಕಳು ಭರತನಾಟ್ಯ ಸೇರಿದಂತೆ “ನೃತ್ಯಮಂಜರಿ” ವಿವಿಧ ನೃತ್ಯ ಪ್ರದರ್ಶನ ನಡೆಯಲಿದೆ.
ಜೊತೆಯಲ್ಲಿ ಗಾಯನ, ಸಂಗೀತ ಹಾಗೂ ವೈವಿದ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಇದು ರಾಷ್ಟ್ರೀಯ ನೃತ್ಯ ಕಲಾಮೇಳದ ದಶಮಾನೋತ್ಸವ ಕಾರ್ಯಕ್ರಮವಾಗಿದ್ದು, ಸಂಸ್ಥೆ ಆಶ್ರಯದಲ್ಲಿ ಇದುವರೆಗೆ 30 ಸಾವಿರಕ್ಕೂ ಹೆಚ್ಚು ಜನ ನೃತ್ಯ ಕಲಾವಿದರು ವೇದಿಕೆ ಮತ್ತು ಪ್ರಶಸ್ತಿ ಹಂಚಿಕೊಂಡಿದ್ದಾರೆ. ಇದರಲ್ಲಿ ರಾಜ್ಯದ ಕಲಾವಿದರು, ಅನ್ಯರಾಜ್ಯದ ಕಲಾವಿದರು ಸೇರಿರುವುದು ವಿಶೇಷ.
71ನೇ ಸಾಂಸ್ಕøತಿಕ ಪ್ರತಿಭೋತ್ಸವದಲ್ಲಿ ಕರೋಕೆ ಗಾಯನದಲ್ಲಿ ಬೆಂಗಳೂರಿನ ದೀಪಕ್ ಪವಾರ್, ಶಿವಮೊಗ್ಗದ ನವ್ಯ ಎಂ.ಎಂ. ಮತ್ತು ಕೊಪ್ಪಳದ ವಿವಿಧ ಜಿಲ್ಲೆಯ ಜನಪದ ಕಲಾವಿದರಾದ ಯಂಕಪ್ಪ ಯಾದವಾಡ, ಯಮನಪ್ಪ ಕುರಿ, ಲಕ್ಷ್ಮಣ ಕಳ್ಳೇನ್ನವರ, ಲಕ್ಷ್ಮಣ ಕುರಿ, ಹಣಮಂತ ಚಿಪ್ಪಲಕಟ್ಟಿ, ಶ್ರೀಮತಿ ನಿಂಗವ್ವ ಕಳ್ಳೇನ್ನವರ, ತಾಯವ್ವ ಹನಾಪೂರ, ಶ್ರೀಮತಿ ಸುಶೀಲಾ ಯಾದವಾಡಮಠ, ಶ್ರೀಮತಿ ಸುಜಾತಾ ಮಾರಿಹಾಳ, ಶ್ರೀಮತಿ ರೇಖಾ ಕಮತಿ, ಶ್ರೀಮತಿ ಸವಿತಾ ಯಾದವಾಡಮಠರವರು ಜಾನಪದ ಗೀತೆ, ಸೋಬಾನೆ ಗೀತೆ, ತತ್ವಪದ ಗೀತೆ ಗಾಯನ ಕಾರ್ಯಕ್ರಮ ಜರುಗಲಿದ್ದು, ಕೊಪ್ಪಳದ ಬಹುಮುಖ ಪ್ರತಿಭೆ ಅಖಿಲೇಶ್ ಯಾದವ್ ಕಣ್ಣುಕಟ್ಟು ಜಾದು ಪ್ರದರ್ಶಿಸಲಿದ್ದಾರೆ.
ಕವಿಗೋಷ್ಠಿ : ಮದ್ಯಾಹ್ನ 2 ಗಂಟೆಯ ನಂತರ ಕವಿ ಸಮ್ಮೇಳನದ ಕವಿಗೋಷ್ಠಿಯ ಉದ್ಘಾಟನೆಯನ್ನು ಹೆಸರಾಂತ ಸಾಹಿತಿಗಳಾದ ವಿಜಯಪುರ ಜಿಲ್ಲೆಯ ಸಿದ್ಧರಾಮ ಉಪ್ಪಿನ್ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಬೆಂಗಳೂರಿನ ಸಾಹಿತಿ ಬಿ.ವಿ ಸತ್ಯನಾರಾಯಣ್‍ರಾವ್ ವಹಿಸಲಿದ್ದಾರೆ. ಮಹಾಲಿಂಗಪುರದ ಹಿರಿಯ ಸಾಹಿತಿ ಅಶೋಕ ನರೋಡೆ ಆಶಯ ನುಡಿಗಳನ್ನು ಆಡಲಿದ್ದಾರೆ. ಅಖಿಲ ಭಾರತ ಮಟ್ಟದ ಪ್ರಥಮ ಕವನ ವಾಚಕರಾಗಿ, ಕೊಪ್ಪಳದ ಸಾಹಿತಿಗಳಾದ ಮಹಂತೇಶ ಮಲ್ಲನಗೌಡರು ಕವಿತೆ ವಾಚಿಸಲಿದ್ದಾರೆ.
ಕವಿತಾ ವಾಚಕರಾಗಿ ಶ್ರೀಮತಿ ಡಿ. ನಳಿನ, ಶ್ರೀಮತಿ ಸಾವಿತ್ರಿ ಮುಜುಮ್‍ದಾರ, ಗೊರೂರು ಪಂಕಜಾ, ಶ್ರೀಮತಿ ವೀಣಾ ಮಹಂತೇಶ, ಶ್ರೀಮತಿ ಶಾಂತಾ ಕೆ. ಬಸವರಾಜ್, ಶ್ರೀ ಜಿ.ಎಸ್. ಗೋನಾಳ್, ಶ್ರೀ ಅಣ್ಣಪ್ಪ ಮೇಟಿಗೌಡ, ಶ್ರೀ ಚಂದ್ರಶೇಖರ್ ಮಾಡಲಗೇರಿ ಶ್ರೀ ಸುರೇಶ ದೇಸಾಯಿ, ಶ್ರೀ ಬೀರಪ್ಪ ಶಂಭೋಜಿ, ಶ್ರೀ ಜಯರಾಮರೈ ಕುಂಜಾಡಿ, ಎಂ. ಶ್ರೀ ಮಹದೇವಯ್ಯ ಸಿಂಗ್, ಬಸಮ್ಮ ಹಿರೇಮಠ, ಡಾ. ಶಿವಣ್ಣ ಜಿ., ಕೌಸ್ತುಭ ಪತ್ರಿಕೆಯ ಸಂಪಾದಕಿ ರತ್ನ ಹಾಲಪ್ಪಗೌಡ, ಮಮತಾ ರಾಯಚೂರು ಭಾಗವಹಿಸಲಿದ್ದಾರೆ.
ಗಾಯನ ಹಾಗೂ ಸ್ಟ್ಯಾಂಡ್‍ಅಪ್ ಕಾಮಿಡಿ : ಕಲಬುರ್ಗಿಯ ಗಾಯಕರಾದ ಎ.ಎಸ್. ಭದ್ರಶೆಟ್ಟಿ ಮತ್ತು ಕವಿತಾ ಸುಧೀಂದ್ರ ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ವಿಚಾರ ಸಂಕಿರಣ : ಸಂಜೆ 5.30 ರಿಂದ “ಕರ್ನಾಟಕ ಸಾಂಸ್ಕøತಿಕ ಪರಂಪರೆಗೆ ಕನ್ನಡದ ಮಹಾಕಾವ್ಯಗಳ ಕೊಡುಗೆ” ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ಸಾಹಿತಿ ಶಿಕ್ಷಣ ತಜ್ಞ ಡಾ. ಚಿಕ್ಕಹೆಜ್ಜಾಜಿ ಮಹದೇವ ಮತ್ತು ಸಾಹಿತಿ ರಾಜೇಂದ್ರ ಎಸ್. ಗಡಾದ ವಿಷಯ ಮಂಡಿಸಲಿದ್ದಾರೆ.
ದಿವ್ಯಸಾನಿಧ್ಯವನ್ನು ದಾವಣಗೆರೆಯ ಪಾಂಡೋಮಟ್ಟಿ ವಿರಕ್ತಮಠದ ಡಾ. ಶ್ರೀ ಗುರುಬಸವ ಮಹಾಸ್ವಾಮಿಗಳು ವಹಿಸಲಿದ್ದಾರೆ. ಸಮಾರಂಭವನ್ನು ಮಾಜಿ ರಾಜ್ಯ ಸಭಾ ಸದಸ್ಯ ಮತ್ತು ಹಿರಿಯ ಕವಿಗಳಾದ ಡಾ. ಎಲ್. ಹನುಮಂತಯ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಶಿಕಾಂತ ಅಕ್ಕಪ್ಪ ನಾಯಕ, ಚುಟುಕು ಸಾಹಿತ್ಯ ಪರಿಷತ್‍ನ ರಾಜ್ಯ ಸಂಚಾಲಕ ಡಾ. ಎಂ.ಜಿ.ಆರ್. ಅರಸ್, ಚಲನಚಿತ್ರ ಕಲಾವಿದರಾದ ಗಣೇಶರಾವ್ ಕೇಸರ್‍ಕರ್ ಮತ್ತು ಶ್ರೀಮತಿ ಮೀನಾ ಉಪಸ್ಥಿತರಿರುತ್ತಾರೆ.
ಇದೇ ಸಂದರ್ಭದಲ್ಲಿ ಅಖಿಲ ಭಾರತ ಕನ್ನಡ ಕವಿಗಳ ಕಾವ್ಯ ಪರಿಷತ್ ಉದ್ಘಾಟನೆಯಾಗಲಿದ್ದು, ನಾಡಿನ ಅನೇಕ ಗಣ್ಯರು ಈ ಸಂದರ್ಭವನ್ನು ಸಾಕ್ಷಿಕರಿಸಲಿದ್ದಾರೆ. ಸುರ್ವೆ ಕಲ್ಚರಲ್ ಅಕಾಡೆಮಿಯ ನೂತನ ಗೌರವ ಅಧ್ಯಕ್ಷರಾಗಿ, ಹಿರಿಯ ರಂಗಭೂಮಿ ಕಲಾವಿದೆ, ಡಾ. ಸುಮತಿಶ್ರೀ ನವಲಿ ಹಿರೇಮಠರು ಪದಗ್ರಹಣ ಮಾಡಲಿದ್ದಾರೆ.
ವಿಶೇಷವಾಗಿ ಮಕ್ಕಳ ಸಾಹಿತಿ ಎಂದೆ ಹೆಸರಾಗಿರುವ ಗದಗ ಜಿಲ್ಲೆ ರಾಜೇಂದ್ರ ಎಸ್. ಗಡಾದರವರ “ವಿಲೋಕನ” ಸಂಶೋಧನ ಲೇಖನಗಳ ಕೃತಿ ಹಾಗೂ “ಸಂತಮ್ಮಣ್ಣ ರೈಟ್ ಸಹೋದರರು” ಎಂಬ ಎರಡು ಕೃತಿಗಳು ಲೋಕಾರ್ಪಣೆಗೊಳ್ಳಲಿದೆ.
ಈ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಅವರ ಜೀವಮಾನ ಸಾಧನೆಗಾಗಿ 2024ರ ಸಾಲಿನ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯನ್ನು ಡಾ. ಲೀಲಾದೇವಿ ಆರ್. ಪ್ರಸಾದ್ (ಬೆಳಗಾವಿ ಜಿಲ್ಲೆ), ಮರಣ್ಣೋತ್ತರ ಪ್ರಶಸ್ತಿ - ಡಾ. ಅಭಿನವ ಕುಮಾರ ಚನ್ನಬಸವ ಸ್ವಾಮೀಜಿ (ಬಾಗಲಕೋಟೆ ಜಿಲ್ಲೆ) ಶ್ರೀ ಸಿದ್ಧು ಯಾಪಲಪರವಿ (ರಾಯಚೂರು ಜಿಲ್ಲೆ), ಸಿ.ಕೆ. ಜೋರಾಪುರ (ಬೆಳಗಾವಿ), ಶ್ರೀ ಟಿ.ಎಸ್. ನಾಗರಾಜ್ ಶೆಟ್ಟಿ (ತುಮಕೂರು ಜಿಲ್ಲೆ), ಡಾ. ಅಮ್ಮಸಂದ್ರ ಸುರೇಶ (ಮೈಸೂರು ಜಿಲ್ಲೆ), ಡಾ. ಜಗನ್ನಾಥರಾವ್ ಬಹುಳೆ (ಬೆಂಗಳೂರು), ಶ್ರೀಮತಿ ಎನ್. ಕನ್ನಿಕಾಪರಮೇಶ್ವರಿ (ಕೋಲಾರ ಜಿಲ್ಲೆ), ಶ್ರೀ ಸಂಜಯ್ ಜಿ. ಕರುಣೆ (ಬೆಳಗಾವಿ ಜಿಲ್ಲೆ), ಶ್ರೀ ಯಲ್ಲಪ್ಪ ಕೆ.ಕೆ. ಪುರ (ಬೆಂಗಳೂರು), ಶ್ರೀ ಬಿ.ಎಂ. ಹಳ್ಳಿ ಇಟಗಿ (ಕೊಪ್ಪಳ), ಶ್ರೀ ವೀರಲೋಕ ಪ್ರಕಾಶನದ ಸಂಸ್ಥೆ ಪರವಾಗಿ ಶ್ರೀ ವೀರಕಪುತ್ರ ಶ್ರೀನಿವಾಸ (ಬೆಂಗಳೂರು), ಸಂಗಮ ಪ್ರಕಾಶನ ಪರವಾಗಿ ಶ್ರೀಮತಿ ಜ್ಯೋತಿ ಆರ್. ಗಡಾದ (ಗದಗ ಜಿಲ್ಲೆ), ವೈದ್ಯವಾರ್ತಾ ಪ್ರಕಾಶನ ಪರವಾಗಿ ಶ್ರೀಮತಿ ಅಂಬ ಎಂ.ಜಿ.ಆರ್. ಅರಸ್ (ಮೈಸೂರು ಜಿಲ್ಲೆ) ರವರು ಪ್ರಶಸ್ತಿ ಪಡೆಯಲಿದ್ದಾರೆ.
32ನೇ ವರ್ಷದ ಅಕಾಡೆಮಿ ಪ್ರಶಸ್ತಿಗಳ ಪ್ರದಾನ ನಡೆಯಲಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಡಾ. ಸರಸ್ವತಿ ಆರ್. ಕಳಸದ್, ಧಾರವಾಡ ಮತ್ತು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ. ವಿಶ್ವನಾಥ್, ವಿಜಯ ಕರ್ನಾಟಕ ಪತ್ರಿಕೆ ಛಾಯಾಗ್ರಾಹಕರಾದ ಗಣೇಶ್ ಕೆ.ಎಸ್, ಸ್ಟ್ಯಾಂಡ್‍ಅಪ್ ಕಾಮಿಡಿಯನ್ ಕವಿತಾ ಸುಧೀಂದ್ರ ಶಿವಮೊಗ್ಗ, ಹಿರಿಯ ಸಾಹಿತಿಗಳಾದ ಶ್ರೀಮತಿ ರೇವತಿ ಶ್ರೀ ಸಿದ್ಧರಾಮ ಉಪ್ಪಿನ್ ದಂಪತಿಗಳು ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರದ 35 ಗಣ್ಯರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸ್ಥಾಪಕ ಅಧ್ಯಕ್ಷ ರಮೇಶ ಸುರ್ವೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.