image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಅಗ್ನಿ ಸುರಕ್ಷತಾ ಕ್ರಮಗಳನ್ನು ಕೋಗೊಳ್ಳದ ಕಾರಣ ಕೊಹ್ಲಿ ಸಹಮಾಲೀಕತ್ವದ ಒನ್​8 ಕಮ್ಯೂನ್​ ಪಬ್​ಗೆ ಬಿಬಿಎಂಪಿ ನೋಟಿಸ್​

ಅಗ್ನಿ ಸುರಕ್ಷತಾ ಕ್ರಮಗಳನ್ನು ಕೋಗೊಳ್ಳದ ಕಾರಣ ಕೊಹ್ಲಿ ಸಹಮಾಲೀಕತ್ವದ ಒನ್​8 ಕಮ್ಯೂನ್​ ಪಬ್​ಗೆ ಬಿಬಿಎಂಪಿ ನೋಟಿಸ್​

ಬೆಂಗಳೂರು : ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಒನ್​8 ಕಮ್ಯೂನ್​ ಪಬ್​ಗೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ನೋಟಿಸ್​ ಜಾರಿ ಮಾಡಿದೆ.

ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣ ಬಳಿಯ ಕಸ್ತೂರಬಾ ರಸ್ತೆಯ ರತ್ನಾಮ್ ಕಾಂಪ್ಲೆಕ್ಸ್‌ನ ಆರನೇ ಮಹಡಿಯಲ್ಲಿ ಈ ಪಬ್​ ಅನ್ನು ಪ್ರಾರಂಭಿಸಲಾಗಿತ್ತು. ಸಾಮಾನ್ಯವಾಗಿ ಯಾವುದೇ ಪಬ್ ಅನ್ನು ಸ್ಥಾಪಿಸಲು ಬಯಸಿದರೆ, ಅಗ್ನಿಶಾಮಕ ಸುರಕ್ಷಾತ ಅಧಿಕಾರಿಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯಬೇಕು. ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಿದ ನಂತರ ಸಂಬಂಧಪಟ್ಟ ಅಧಿಕಾರಿಗಳು ಈ ಪ್ರಮಾಣಪತ್ರವನ್ನು ನೀಡುತ್ತಾರೆ. ಆದರೆ ಅಂತಹ ಯಾವುದೇ ಪ್ರಮಾಣಪತ್ರ ಇಲ್ಲದೇ ಈ ಪಬ್ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ತನಿಖೆ ನಡೆಸಿದ ಬಿಬಿಎಂಪಿ ಅಧಿಕಾರಿಗಳು ವಾರದೊಳಗೆ ಪ್ರಮಾಣಪತ್ರ ಸಲ್ಲಿಸಲು ಗಡುವು ನೀಡಿದ್ದಾರೆ. ಗಡುವಿನೊಳಗೆ ಪ್ರಮಾಣ ಪತ್ರ ಸಲ್ಲಿಸದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಕೊಹ್ಲಿ ಒಡೆತನದ ಪಬ್ ಸಂಕಷ್ಟಕ್ಕೆ ಸಿಲುಕಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಒನ್​8 ಕಮ್ಯೂನ್ ಪಬ್ ಮೇಲೆ ಆರೋಪಗಳು ಕೇಳಿ ಬಂದಿದ್ದವು. ಕಳೆದ ಜೂನ್​ನಲ್ಲಿ ಪೊಲೀಸರು ಪಬ್ ವಿರುದ್ಧ ಎಫ್​ಐಆರ್ ಕೂಡ ದಾಖಲಿಸಿದ್ದರು.

ನಿಗದಿತ ಸಮಯ ಮೀರಿ ಪಬ್ ನಡೆಸಿದ್ದಕ್ಕಾಗಿ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ವಾಸ್ತವವಾಗಿ, ಯಾವುದೇ ಪಬ್​ಗಳನ್ನು 1 ಗಂಟೆಯವರೆಗೆ ಮಾತ್ರ ನಡೆಸಲು ಅನುಮತಿ ನೀಡಲಾಗಿದೆ. ಆದರೆ, ರಾತ್ರಿ 1.30ರ ನಂತರವೂ ಪಬ್ ಮುಚ್ಚದೆ ಜೋರಾಗಿ ಸಂಗೀತ ನುಡಿಸುತ್ತಿರುವ ಬಗ್ಗೆ ಜನರು ನೀಡಿದ್ದ ದೂರುಗಳ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಸಿದ್ದರು. ಕೊಹ್ಲಿ ಮಾಲಿಕತ್ವದ ಒನ್​8 ಪಬ್ ಕೋಲ್ಕತ್ತಾ, ಮುಂಬೈ, ದೆಹಲಿ ಮತ್ತು ಪುಣೆಯಲ್ಲಿ ಶಾಖೆಗಳನ್ನು ಹೊಂದಿದೆ.

Category
ಕರಾವಳಿ ತರಂಗಿಣಿ