image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಆಯೋಜಿಸಿದ್ದ ದತ್ತಮಾಲ ಉತ್ಸವ ಸಂಪನ್ನ

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಆಯೋಜಿಸಿದ್ದ ದತ್ತಮಾಲ ಉತ್ಸವ ಸಂಪನ್ನ

ಚಿಕ್ಕಮಗಳೂರು : ದತ್ತಮಾಲ ಉತ್ಸವದ ಕೊನೆ ದಿನ ದತ್ತಪೀಠಕ್ಕೆ ಸುಮಾರು 15 ಸಾವಿರಕ್ಕೂ ಅಧಿಕ ಭಕ್ತಾದಿಗಳು ಆಗಮಿಸಿ ಪಾದುಕೆಯ ದರ್ಶನವನ್ನು ಪಡೆದರು. ಈ ಮೂಲಕ ಮೂರು ದಿನಗಳವರೆಗೆ ನಡೆದ ಉತ್ಸವಕ್ಕೆ ಇಂದು ಶಾಂತಿಯುತ ತೆರೆ ಎಳೆಯಲಾಯಿತು.

ಈ ಬಾರಿ ಜಿಲ್ಲೆಯಲ್ಲಿ ಹಿಂದೂ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ದತ್ತಮಾಲ ಅಭಿಯಾನವನ್ನು ತುಂಬಾ ಅದ್ಧೂರಿ, ಸಂಭ್ರಮ ಹಾಗೂ ಸಡಗರದಿಂದ ಆಯೋಜಿಸಲಾಗಿತ್ತು.

ದತ್ತಮಾಲೆಯನ್ನು ಧರಿಸಿದ್ದಂತಹ ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಹಾಗೂ ಕೆಲ ಭಕ್ತರು ಹೊನ್ನಮ್ಮನ ಹಳ್ಳದಿಂದ ದತ್ತಪೀಠದವರೆಗೂ ಸುಮಾರು 12 ಕಿ. ಮೀ ದೂರ ಪಾದಯಾತ್ರೆ ಮಾಡಿದರು.

ಇದೇ ಸಂದರ್ಭದಲ್ಲಿ ತಲೆಯ ಮೇಲೆ ಪಡಿಯ ಹೊತ್ತು ದತ್ತನ ಜಪ ಮಾಡುತ್ತಾ ಹಾಗೂ ದತ್ತನ ಭಕ್ತಿ ಗೀತೆಗಳನ್ನು ಹಾಡುತ್ತಾ ನಡೆದುಕೊಂಡೇ ಬಂದು ದತ್ತನ ಪಾದುಕೆಯ ದರ್ಶನ ಪಡೆದರು. ನಂತರ ಜಿಲ್ಲಾಡಳಿತ ನಿರ್ಮಿಸಿರುವ ಶೆಡ್​​ನಲ್ಲಿ ಹೋಮದಲ್ಲಿ ಭಾಗವಹಿಸಿ ದತ್ತನಿಗೆ ವಿಶೇಷವಾದ ಪೂಜೆ ಸಲ್ಲಿಸಿದರು.

Category
ಕರಾವಳಿ ತರಂಗಿಣಿ