ಹಾಸನ: ನಿನ್ನೆ ಟ್ರೈನಿಂಗ್ ಮುಗಿದು ಇಂದು ಡಿವೈಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಬೇಕಿತ್ತು. ಡ್ಯೂಟಿ ರಿಪೋರ್ಟ್‌ಗೆ ಬಂದ ದಿನವೇ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್, ಹಾಸನ ಬಳಿ ಭೀಕರ ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.
ಹರ್ಷವರ್ಧನ್ ಅವರು ಮೈಸೂರಿನಲ್ಲಿರುವ ಕರ್ನಾಟಕದ ಪೊಲೀಸ್ ಅಕಾಡೆಮಿಯಲ್ಲಿ ಟ್ರೈನಿಂಗ್ ಮುಗಿಸಿ, ಬಳಿಕ ಐಜಿಪಿ ಬೋರಲಿಂಗಯ್ಯಗೆ ರಿಪೋರ್ಟ್ ಮಾಡಿಕೊಂಡಿದ್ದರು. ಇಂದು ಡಿವೈಎಸ್ಪಿ ಆಗಿ ಚಾರ್ಜ್ ತೆಗೆದುಕೊಳ್ಳಬೇಕಿತ್ತು.
ಅದರೆ ವಿಧಿಯಾಟ ಬೇರೆಯೇ ಇತ್ತು. ಮೂಲತಃ ಬಿಹಾರ ಮೂಲದ ಹರ್ಷವರ್ಧನ್ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ವಾಸವಾಗಿದ್ದರು. ಮಧ್ಯಪ್ರದೇಶದ ಐಇಟಿಯಲ್ಲಿ ಡಿಎವಿಇ ಎಂಜಿನಿಯರಿಂಗ್ ಪದವಿ ಮಾಡಿದ್ದರು. 2022-23 ರ ಐಪಿಎಸ್ ಬ್ಯಾಚ್‌ನಲ್ಲಿ ತೇರ್ಗಡೆ ಹೊಂದಿ ಕರ್ನಾಟಕ ಕೇಡರ್‌ನಲ್ಲಿ ರಾಜ್ಯಕ್ಕೆ ಆಯ್ಕೆಯಾಗಿದ್ದರು.2022 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 153 ನೇ ರ‍್ಯಾಂಕ್‌ನಲ್ಲಿ ಪಾಸ್ ಆಗಿದ್ದರು.