image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಶೃಂಗೇರಿ ಮಠದ ಆಸ್ತಿ ವಕ್ಪ್ ಆಸ್ತಿ ಅಲ್ಲ-ಟಿಪ್ಪು ಸುಲ್ತಾನ್ ವಂಶಸ್ಥ ಮನ್ಸೂರ್ ಅಲಿ

ಶೃಂಗೇರಿ ಮಠದ ಆಸ್ತಿ ವಕ್ಪ್ ಆಸ್ತಿ ಅಲ್ಲ-ಟಿಪ್ಪು ಸುಲ್ತಾನ್ ವಂಶಸ್ಥ ಮನ್ಸೂರ್ ಅಲಿ

ಕಲಬುರಗಿ: ಶೃಂಗೇರಿ ಮಠದ ಆಸ್ತಿ ವಕ್ಫ್ ಆಸ್ತಿ ಎಂದು ಎಲ್ಲಿಯೂ ಹೇಳಿಲ್ಲ ಎಂದು ಟಿಪ್ಪು ಸುಲ್ತಾನ್  ವಂಶಸ್ಥ ಸಾಹೇಬ್ ದಾದಾ ಮನ್ಸೂರ್ ಅಲಿ ಹೇಳಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಶೃಂಗೇರಿ ಮಠದ ಆಸ್ತಿ ಹಿಂದೂ ಧರ್ಮಕ್ಕೆ ಸೇರಿದ್ದು ಎಂಬ ಕಾರಣಕ್ಕಾಗಿ ಟಿಪ್ಪು ಸುಲ್ತಾನ್ ತಮ್ಮ ಸೇನೆಯ ಸಿಪಾಯಿಗಳನ್ನು ಕಳುಹಿಸಿ ಮಠದ ರಕ್ಷಣೆ ಮಾಡುವ ಕೆಲಸ ಮಾಡಿದ್ದರು. ಶೃಂಗೇರಿ ಮಠವನ್ನು ಕೆಲವರು ಒಡೆದು ಹಾಕಿದಾಗ ಟಿಪ್ಪು ಸುಲ್ತಾನ್ ಸಿಪಾಯಿಗಳನ್ನು ಕಳುಹಿಸಿ ರಕ್ಷಣೆ ಮಾಡಿದ್ದಲ್ಲದೆ, ಅದರ ಪುನರಚನೆ ಮಾಡಿಸಿದ್ದಾರೆ ಎಂದು ನುಡಿದರು. 

ದೊಡ್ಡಬಳ್ಳಾಪುರದ ಶ್ರೀನರಸಿಂಹ ಸ್ವಾಮಿ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನ, ನಂಜುಂಡೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಸಾಕಷ್ಟು ದೇವಸ್ಥಾನಗಳಿಗೆ ಹಜರತ್ ಟಿಪ್ಪು ಸುಲ್ತಾನ್ ಜಮೀನು ನೀಡಿದ್ದಾರೆ ಎಂದು ಅವರು ಹೇಳಿದರು.

Category
ಕರಾವಳಿ ತರಂಗಿಣಿ