image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಆರ್ಥಿಕವಾಗಿ ಸಬಲರನ್ನಾಗಿಸಿ- ಕೃಷ್ಣಪ್ಪ

ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಆರ್ಥಿಕವಾಗಿ ಸಬಲರನ್ನಾಗಿಸಿ- ಕೃಷ್ಣಪ್ಪ

ಮಂಗಳೂರು: ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಆರ್ಥಿಕವಾಗಿ ಸಬಲರನ್ನಾಗಿಸಬೇಕೆಂದು ರಾಜ್ಯ ನ್ಯಾಯಬೆಲೆ ಅಂಗಡಿಗಳ ಮಾಲಿಕರಾದ  ಕೃಷ್ಣಪ್ಪ ಮನವಿ ಮಾಡಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಮಾನ್ಯ ಘನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರಮೋದಿರವರ ನೇತೃತ್ವದ ಕೇಂದ್ರ ಸರ್ಕಾರವು ಆಹಾರ ಭದ್ರತಾ ಕಾಯ್ದೆಯಡಿ 84 ಕೋಟಿ ಪಡಿತರ ಚೀಟಿದಾರರಿಗೆ ಉಚಿತವಾದ ಆಹಾರ ಧಾನ್ಯ ನೀಡುತ್ತಿರುವುದು ಸಂತೋಷದ ವಿಷಯವಾಗಿದೆ. ಹಾಗೂ ಪ್ರಸ್ತುತ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯ ಕಮೀಷನ್ ಹಣ ನೀಡಲಾಗುತ್ತಿರುತ್ತದೆ. ಇದನ್ನು ಏಕರೂಪ ಕಮೀಷನ್ ಯೋಜನೆಯನ್ನು ಜಾರಿಗೆ ತಂದು ಪ್ರತಿ ಕ್ವಿಂಟಾಲ್‌ಗೆ 250/- ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಮೀಷನ್ ಹಣವನ್ನು ಕೊಡುವಂತೆ ಕೋರುತ್ತೇವೆ. ಹಾಗೂ ಪ್ರಸ್ತುತ ಹಣ ದುಬ್ಬರದಿಂದ ಸಾರ್ವಜನಿಕರು ದಿನನಿತ್ಯ ಬಳಕೆಯ ವಸ್ತುಗಳನ್ನು ಖರೀದಿಸಲು ತುಂಬಾ ಕಷ್ಟವಾಗುತ್ತಿರುವುದರಿಂದ ಕೇಂದ್ರ ಸಕಾರದ ಯೋಜನೆಗಳಾದ ಭಾರತ್ ರೈಸ್, ಭಾರತ್‌ ಬೇಳೆ, ಭಾರತ್ ಚನ್ನ (ಕಡ್ಲೆಕಾಳು) ಯೋಜನೆಯನ್ನು ಜಾರಿಗೆ ತಂದಿರುವುದು ಸಂತೋಷದ ವಿಚಾರವಾಗಿದೆ. ಸದರಿ ದಿನನಿತ್ಯದ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿ ಮೂಲಕ ವಿತರಣೆ ಮಾಡಿಸಿದರೆ ದರದಲ್ಲಿನ ಏರಳಿತವನ್ನು ತಡೆಗಟ್ಟಬಹುದಾಗಿರುತ್ತದೆ. ಹಾಗೂ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಕಡಿಮೆ ದರದಲ್ಲಿ ಸುಲಭವಾಗಿ ಸಿಗುವಂತೆ ಮಾಡಿ ಹಣದ ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ತಡೆಗಟ್ಟಬಹುದಾಗಿರುತ್ತದೆ. ಹಾಗೂ ಅತೀ ಹೆಚ್ಚು ದರಬರುವ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿ ಮೂಲಕ ಸುಲಭವಾಗಿ ಸಾರ್ವಜನಿಕರಿಗೆ ಪದಾರ್ಥಗಳನ್ನು ತಲುಪಿಸಬಹುದಾಗಿರುತ್ತದೆ. ಆದ್ದರಿಂದ ಈ ಕೇಂದ್ರ ಸರ್ಕಾರದ ಯೋಜನೆಯನ್ನು ಅತೀ ಜರೂರಾಗಿ ಜಾರಿಗೊಳಿಸಬೇಕಾಗಿ ವಿನಂತಿಸಿಕೊಂಡರು.

Category
ಕರಾವಳಿ ತರಂಗಿಣಿ