ಬೆಳಗಾವಿ: ರಾಜ್ಯದಲ್ಲಿ ಹಲವಾರು ರೈತರ ಜಮೀನುಗಳನ್ನು ವಕ್ಫ್ ಬೋರ್ಡ್ ತನ್ನದೆಂದು ನೋಟೀಸ್ ಕೊಟ್ಟಿದ್ದು, ಇದರಿಂದ ಜನ ಶಾಕ್ ಆಗಿದ್ದಲ್ಲದೆ ಸಾವಿರಾರು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ದೇವಾಲಯ, ಮಠಗಳಿಗೂ ನೋಟಿಸು ತಲುಪಿದೆ. ಈಗ ರಾಜಕಾರಣಿಗಳು ಶಾಕ್ ಆಗುವ ಸರದಿ. ಚಿಕ್ಕೋಡಿಯ ಜೊಲ್ಲೆ ಕುಟುಂಬದ ಜಮೀನಿನಲ್ಲೂ ವಕ್ಫ್ ಹೆಸರು ನಮೂದಿಸಲಾಗಿದೆ. ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪುತ್ರ ಬಸವಪ್ರಸಾದ ಹೆಸರಲ್ಲಿರುವ ಜಮೀನು ವಕ್ಫ್ ಬೋರ್ಡ್ ಗೆ ಎಂದು ಹೆಸರಿಸಲಾಗಿದೆ. ಸ್ವಗ್ರಾಮ ಯಕ್ಸಂಬಾ ಗ್ರಾಮದ ಜಮೀನು ಮತ್ತು ಜತೆಗೆ ಜೊಲ್ಲೆ ಕುಟುಂಬದ ಹಲವು ಜನರ ಜಮೀನಿಗೂ ಇದೀಗ ಆತಂಕ ಎದುರಾಗಿದೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ಹಲವಾರು ರೈತರ ಜಮೀನಿಗೆ ವಕ್ಫ್ ಹೆಸರು ನಮೂದು ಮಾಡಲಾಗಿದೆ. ಈ ನಡುವೆ ಸರಕಾರ ನೋಟೀಸ್ ವಾಪಸ್ ತೆಗೆದುಕೊಂಡಿದೆ ಎನ್ನುತ್ತಿದೆ.