image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಧಾರಾವಾಡದಲ್ಲಿ ಪ್ರತಿಭಟನೆ: ಚಿಕ್ಕೋಡಿಯಿಂದ 3,000ಕ್ಕೂ ಹೆಚ್ಚು ಶಾಲಾ ನೌಕರರು ಭಾಗಿ

ಧಾರಾವಾಡದಲ್ಲಿ ಪ್ರತಿಭಟನೆ: ಚಿಕ್ಕೋಡಿಯಿಂದ 3,000ಕ್ಕೂ ಹೆಚ್ಚು ಶಾಲಾ ನೌಕರರು ಭಾಗಿ

ಚಿಕ್ಕೋಡಿ : ಖಾಸಗಿ ಶಾಲಾ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವೆಂಬರ್ 17 ಮತ್ತು 18ರಂದು ಧಾರವಾಡದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಬೃಹತ್ ಪ್ರತಿಭಟನೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 3,000ಕ್ಕೂ ಹೆಚ್ಚು ನೌಕರರು ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯ ಘಟಕ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಹೋರಾಟ ಸಮನ್ವಯ ಸಮಿತಿ ಹುಬ್ಬಳ್ಳಿ ಸಹಯೋಗದಲ್ಲಿ ನಡೆಯಲಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ನೌಕರರ ಸಭೆಯನ್ನು ಶುಕ್ರವಾರ ಕರೆಯಲಾಗಿತ್ತು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ಅನುದಾನಿತ ಹಾಗೂ ಅನುದಾನ ರಹಿತ ಶಾಲಾ-ಕಾಲೇಜುಗಳ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ನಡೆಯುತ್ತಿದ್ದು, ನವೆಂಬರ್ 17ರಿಂದ ಅನಿರ್ದಿಷ್ಟಾವಧಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಸ್. ಎಸ್. ಅಂಗಡಿ, ಉಪಾಧ್ಯಕ್ಷ ಬಸವರಾಜ ತಳವಾರ, ಎಂ. ಜಿ. ಚಿಕ್ಕಮಠ, ಕಾರ್ಯದರ್ಶಿ ಮಹಾದೇವ ಬರಗಾಲೆ, ಗೌರವಾಧ್ಯಕ್ಷ ಎಸ್. ಐ. ಸಂಬಾಳ, ರಾಜೇಂದ್ರ ಕರಾಳೆ, ಚಂದ್ರಕಾಂತ ಕೋಠಿವಾಲೆ, ಜಗದೀಶ ಕವಟಗಿಮಠ, ಸಿದಗೌಡ ಪಾಟೀಲ, ಸಂಜಯ ಶಿಂತ್ರೆ, ಆನಂದಸ್ವಾಮಿ ಚವಗಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ