image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಿವಮೊಗ್ಗದ ಡಯಾನ ಬುಕ್ ಗ್ಯಾಲರಿಯಲ್ಲಿ ಪುಸ್ತಕಗಳಿಗೆ ವಿಶೇಷ ರಿಯಾಯಿತಿ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಿವಮೊಗ್ಗದ ಡಯಾನ ಬುಕ್ ಗ್ಯಾಲರಿಯಲ್ಲಿ ಪುಸ್ತಕಗಳಿಗೆ ವಿಶೇಷ ರಿಯಾಯಿತಿ

ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಪುಸ್ತಕ ಮಳಿಗೆಯಾದ ತಿಲಕ್ ನಗರ ಮುಖ್ಯರಸ್ತೆಯ ಡಯಾನ ಬುಕ್ ಗ್ಯಾಲರಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1 ರಿಂದ 30ರವರೆಗೆ ಪ್ರತಿ ಕನ್ನಡ ಪುಸ್ತಕ ಖರೀದಿಗೆ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಮಳಿಗೆಯಲ್ಲಿ ಕನ್ನಡ ಸಾರಸ್ವತ ಲೋಕದ ಹಿರಿಯ ಹಾಗೂ ಕಿರಿಯ ಸಾಹಿತಿಗಳ ಕಾದಂಬರಿಗಳು, ಮಕ್ಕಳ ಸಾಹಿತ್ಯದ ಪುಸ್ತಕಗಳು, ಕಥೆ-ಕವನ ಸಂಕಲನಗಳು ಮತ್ತು ಹೊಸ ಕೃತಿಗಳು ರಿಯಾಯಿತಿ ದರದಲ್ಲಿ ಲಭ್ಯವಿವೆ.

ಪುಸ್ತಕಗಳ ಖರೀದಿಯ ಮೊತ್ತದ ಆಧಾರದ ಮೇಲೆ ರಿಯಾಯಿತಿ ದೊರೆಯಲಿದ್ದು, ಪ್ರತಿ ರೂ. 100 ರ ಪುಸ್ತಕ ಖರೀದಿಗೆ ಶೇ. 10, ಪ್ರತಿ ರೂ. 500 ರ ಪುಸ್ತಕ ಖರೀದಿಗೆ ಶೇ. 15 ಹಾಗೂ ಪ್ರತಿ ರೂ. 1000 ರ ಪುಸ್ತಕ ಖರೀದಿಗೆ ಶೇ. 25ರಷ್ಟು ರಿಯಾಯಿತಿ ನೀಡಲಾಗುತ್ತದೆ. ಆದರೆ ಈ ರಿಯಾಯಿತಿಯು ಪಠ್ಯಪುಸ್ತಕಗಳಿಗೆ ಅನ್ವಯಿಸುವುದಿಲ್ಲ ಮತ್ತು ವಿಶೇಷವಾಗಿ ಡಾ. ಎಸ್. ಎಲ್. ಭೈರಪ್ಪರವರ ಕೃತಿಗಳಿಗೆ ಶೇ. 15ರಷ್ಟು ಮಾತ್ರ ರಿಯಾಯಿತಿ ಇರುತ್ತದೆ. ಪುಸ್ತಕಾಭಿಮಾನಿಗಳು ಹಾಗೂ ಸಾಹಿತ್ಯಾಸಕ್ತರು ಈ ಸೌಲಭ್ಯದ ಸದುಪಯೋಗಪಡಿಸಿಕೊಳ್ಳುವಂತೆ ಮಳಿಗೆಯ ಮಾಲೀಕರಾದ ಕೆ.ಎಲ್. ಈಶ್ವರ್ ಕೋರಿದ್ದಾರೆ.

Category
ಕರಾವಳಿ ತರಂಗಿಣಿ