image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಶಾಸಕಿ ಶಾರದಾ ಪೂರ್ಯನಾಯ್ಕ್ ನೇತೃತ್ವದಲ್ಲಿ ಜೆಡಿಎಸ್‌ಗೆ ಹಲವರ ಸೇರ್ಪಡೆ

ಶಾಸಕಿ ಶಾರದಾ ಪೂರ್ಯನಾಯ್ಕ್ ನೇತೃತ್ವದಲ್ಲಿ ಜೆಡಿಎಸ್‌ಗೆ ಹಲವರ ಸೇರ್ಪಡೆ

ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರ ನೇತೃತ್ವದಲ್ಲಿ ಇಂದು ವಿವಿಧ ಪಕ್ಷಗಳನ್ನು ತೊರೆದು ಹಲವು ಮುಖಂಡರು ಹಾಗೂ ಕಾರ್ಯಕರ್ತರು ಜನತಾ ದಳ (ಜಾತ್ಯತೀತ) ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ನಂಜುಂಡಸ್ವಾಮಿ, ವಿಜಯಕುಮಾರ್, ಪ್ರಮೋದ್, ಮಣಿಕಂಠ, ಪ್ರಜ್ವಲ್, ಅರುಣ್, ಪರಮೇಶ್, ಮನೋಜ್, ಕೆಂಚ, ಅಣ್ಣಪ್ಪ, ಮೋಹನ, ಶರತ್, ಶ್ರೀಧರ್, ರವಿ ಹಾಗೂ ಮಹಂತೇಶ್ ಸೇರಿದಂತೆ ಪ್ರಮುಖರು ಜೆಡಿಎಸ್ ಕೈಹಿಡಿದರು.

ಕಾರ್ಯಕ್ರಮದಲ್ಲಿ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು ನೂತನ ಸದಸ್ಯರಿಗೆ ಪಕ್ಷದ ಶಾಲು ಹೊದಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ಜೆಡಿಎಸ್ ಪಕ್ಷದ ತತ್ವ, ಸಿದ್ಧಾಂತ ಹಾಗೂ ಜನಪರ ಕಾರ್ಯಕ್ರಮಗಳಿಂದ ಪ್ರೇರಿತರಾಗಿ ಸೇರ್ಪಡೆಯಾಗಿರುವ ಹೊಸ ಸದಸ್ಯರಿಂದ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಮತ್ತಷ್ಟು ಬಲವರ್ಧನೆಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಸ್ಥಳೀಯ ನಾಯಕರು, ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ