ಶಿವಮೊಗ್ಗ : ರೇಡಿಯೋ ಶಿವಮೊಗ್ಗ 90.8 ಎಫ್.ಎಂ ಹಾಗೂ ಪರಿಸರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1 ರಂದು ಕನ್ನಡ ಮಾಧ್ಯಮ ಲೋಕದಲ್ಲೇ ಪ್ರಪ್ರಥಮ ಬಾರಿಗೆ 24 ಗಂಟೆಗಳ ನಿರಂತರ ನೇರಪ್ರಸಾರ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 6.00 ರಿಂದ ಮರುದಿನ ಬೆಳಿಗ್ಗೆ 6.00 ರ ವರೆಗೆ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಇತಿಹಾಸ ಹಾಗೂ ವಾಸ್ತುಶಿಲ್ಪದ ಕುರಿತು ನಿಲಯದ ಆರ್.ಜೆ.ಗಳು ವಿವಿಧ ಗಂಟೆಗಳಲ್ಲಿ ಮಾಹಿತಿ ನೀಡಲಿದ್ದಾರೆ. ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಿಂದ ಕೇಳುಗರು 96860 96279 ಸಂಖ್ಯೆಗೆ ಕರೆ ಮಾಡಿ ಭಾಗವಹಿಸಬಹುದಾಗಿದೆ. ಪ್ರತಿ ಗಂಟೆಗೊಮ್ಮೆ ಕನ್ನಡದ ಬಗ್ಗೆ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸಿ ಆಕರ್ಷಕ ಬಹುಮಾನಗಳನ್ನು ಹಾಗೂ ದಿನದ ಎಲ್ಲಾ ಪ್ರಶ್ನೆಗಳಿಗೆ ಹೆಚ್ಚು ಉತ್ತರ ನೀಡುವವರು ವಿಶೇಷ ಬಹುಮಾನಗಳನ್ನು ಗೆಲ್ಲಬಹುದು.
ಈ ಕಾರ್ಯಕ್ರಮವು ಸಾಮಾನ್ಯ ರೇಡಿಯೋ, ಮೊಬೈಲ್ ಇನ್-ಬಿಲ್ಟ್ ಎಫ್.ಎಂ ಹಾಗೂ ಗೂಗಲ್ ಪ್ಲೇಸ್ಟೋರ್ನಲ್ಲಿ ಲಭ್ಯವಿರುವ 'ರೇಡಿಯೋ ಶಿವಮೊಗ್ಗ' ಅಧಿಕೃತ ಆಪ್ ಮೂಲಕ ಪ್ರಸಾರವಾಗಲಿದೆ. ಹೆಚ್ಚಿನ ಮಾಹಿತಿಗಾಗಿ 72591 76279 ಸಂಪರ್ಕಿಸಬಹುದು ಎಂದು ನಿಲಯದ ನಿರ್ದೇಶಕ ಜನಾರ್ದನ ಜಿ.ಎಲ್. ತಿಳಿಸಿದ್ದಾರೆ.