image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಂಘಟನೆಯ ಬಲಿಷ್ಠತೆಯಿಂದ ಪತ್ರಿಕಾ ವಿತರಕರ ಅಭಿವೃದ್ಧಿ ಸಾಧ್ಯ: ನ.ರಾ.ವೆಂಕಟೇಶ್ ಸಲಹೆ

ಸಂಘಟನೆಯ ಬಲಿಷ್ಠತೆಯಿಂದ ಪತ್ರಿಕಾ ವಿತರಕರ ಅಭಿವೃದ್ಧಿ ಸಾಧ್ಯ: ನ.ರಾ.ವೆಂಕಟೇಶ್ ಸಲಹೆ

ಶಿವಮೊಗ್ಗ: ಪತ್ರಿಕಾ ವಿತರಕರು ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿಕೊಳ್ಳುವ ಮೂಲಕ ತಮ್ಮ ಅಭಿವೃದ್ಧಿಯನ್ನು ಸಾಧಿಸಬೇಕೆಂದು ಕರ್ನಾಟಕ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಮಾಜಿ ಉಪಾಧ್ಯಕ್ಷ ನ.ರಾ.ವೆಂಕಟೇಶ್ ಸಲಹೆ ನೀಡಿದ್ದಾರೆ.

ನಗರದ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ನವೆಂಬರ್ 11ರಂದು ಬೆಳಗಾವಿಯಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಆರನೇ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪತ್ರಿಕಾ ವಿತರಕರು ಪತ್ರಿಕೆ ಮತ್ತು ಓದುಗರ ನಡುವೆ ಪ್ರಮುಖ ಸೇತುವೆಯಾಗಿ ನಿರಂತರ ಶ್ರಮದ ಬದುಕು ನಡೆಸುತ್ತಿದ್ದಾರೆ. ತಮ್ಮ ಅಗತ್ಯತೆಗಳನ್ನು ಪಡೆದುಕೊಳ್ಳಲು ಸಂಘಟನೆ ಬಲಪಡಿಸಿಕೊಳ್ಳುವುದು ಅಗತ್ಯ. ಬೆಳಗಾವಿಯಲ್ಲಿ ನಡೆಯುವ ರಾಜ್ಯ ಸಮ್ಮೇಳನವು ವಿತರಕರು ಒಂದೆಡೆ ಸೇರಿ ತಮ್ಮ ಕಷ್ಟಸುಖ ಚರ್ಚಿಸಿ, ಭವಿಷ್ಯದ ಪರಿಹಾರ ಕಂಡುಕೊಳ್ಳಲು ಉತ್ತಮ ಅವಕಾಶವಾಗಿದ್ದು, ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೈದ್ಯನಾಥ್ ಮಾತನಾಡಿ, ವಿತರಕರ ಕಷ್ಟಗಳಿಗೆ ಸ್ಪಂದಿಸಲು ಪತ್ರಕರ್ತರ ಸಂಘ ಸದಾ ಸಿದ್ಧವಿದ್ದು, ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಕೊಡಿಸಲು ಸಾಥ್ ನೀಡಲಿದೆ ಎಂದರು. ಮತ್ತೊಬ್ಬ ಅತಿಥಿ ಗಾ.ರಾ.ಶ್ರೀನಿವಾಸ್ ತಮ್ಮ ಹಳೆಯ ಪತ್ರಿಕಾ ವಿತರಣೆಯ ಅನುಭವಗಳನ್ನು ಹಂಚಿಕೊಂಡು ಪರಸ್ಪರ ಸ್ಪಂದನೆಯ ಅಗತ್ಯತೆಯನ್ನು ಪ್ರತಿಪಾದಿಸಿದರು.

ಒಕ್ಕೂಟದ ಶಾಖೆ ಅಧ್ಯಕ್ಷ ಎನ್.ಮಾಲತೇಶ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕರವೇ ಕಾವಲು ಪಡೆ ಜಿಲ್ಲಾಧ್ಯಕ್ಷ ಶಿವಕುಮಾರ್, ಗೌರವ ಅಧ್ಯಕ್ಷ ಹುಲಗಿ ಕೃಷ್ಣ ಹಾಗೂ ಒಕ್ಕೂಟದ ಪದಾಧಿಕಾರಿಗಳಾದ ರಾಮೋ.ಜಿ, ನಾಗಭೂಷಣ್, ಗೋಪಾಲ್ ಕೃಷ್ಣ ಹೆಬ್ಬಾರ್, ಹರ್ಷ, ವಿನಯ್ ಕುಮಾರ್ ವಾಲಿ, ಮಲ್ಲಿಕಾರ್ಜುನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ