ಶಿವಮೊಗ್ಗ : ಶಿವಮೊಗ್ಗ ವಿಭಾಗದ ವತಿಯಿಂದ ರಾಷ್ಟ್ರ ಸೇವಿಕಾ ಸಮಿತಿಯ 90ನೇ ಸಂಸ್ಥಾಪನಾ ವರ್ಷದ ಅಂಗವಾಗಿ ಅಕ್ಟೋಬರ್ 26ರ ಸೋಮವಾರದಂದು ವಿಜಯದಶಮಿ ಉತ್ಸವ ಹಾಗೂ ಪಥಸಂಚಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿನೋಬನಗರದ 60 ಅಡಿ ರಸ್ತೆಯಲ್ಲಿರುವ ಶುಭಮಂಗಳ ಸಮುದಾಯ ಭವನದಲ್ಲಿ ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ನಂತರ ಸಂಜೆ 5 ಗಂಟೆಗೆ ಪಥಸಂಚಲನ ಆರಂಭವಾಗಲಿದೆ. ಈ ಪಥಸಂಚಲನವು ಶುಭಮಂಗಳ ಸಮುದಾಯ ಭವನದಿಂದ ಪ್ರಾರಂಭವಾಗಿ ಪೊಲೀಸ್ ಚೌಕಿ, ಶಿವಾಲಯ, ಫ್ರೀಡಂ ಪಾರ್ಕ್ ಆಟೋ ನಿಲ್ದಾಣ ಮತ್ತು ಲಕ್ಷ್ಮಿ ಟಾಕೀಸ್ ಮೂಲಕ ಸಾಗಿ ವಾಪಸ್ ಸಮುದಾಯ ಭವನ ತಲುಪಲಿದೆ. ರಾಷ್ಟ್ರಭಕ್ತಿ, ಶಿಸ್ತು ಹಾಗೂ ನಾರೀಶಕ್ತಿಯ ಜಾಗೃತಿಯನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮದಲ್ಲಿ ಸೇವಿಕೆಯರು ಪೂರ್ಣ ಗಣವೇಷದಲ್ಲಿ ಆಗಮಿಸಬೇಕಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಲಾಗಿದೆ.